ಆ್ಯಪ್ನಗರ

ಒಂದೂವರೆ ವರ್ಷದಲ್ಲಿ ಬಾವಿಕ್ಕೆರೆ ಶಾಶ್ವತ ಅಣೆಕಟ್ಟು ಪೂರ್ಣ: ಸಚಿವ

ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡ ಬಾವಿಕ್ಕೆರೆ ಶಾಶ್ವತ ಅಣೆಕಟ್ಟನ್ನು ಒಂದೂವರೆ ವರ್ಷದಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಮ್ಯಾಥ್ಯೂ ಟಿ. ಥಾಮಸ್‌ ತಿಳಿಸಿದ್ದಾರೆ.

Vijaya Karnataka 17 Oct 2018, 10:10 pm
ಕಾಸರಗೋಡು: ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡ ಬಾವಿಕ್ಕೆರೆ ಶಾಶ್ವತ ಅಣೆಕಟ್ಟನ್ನು ಒಂದೂವರೆ ವರ್ಷದಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಮ್ಯಾಥ್ಯೂ ಟಿ. ಥಾಮಸ್‌ ತಿಳಿಸಿದ್ದಾರೆ. ಅಣೆಕಟ್ಟಿನ ನಿರ್ಮಾಣ ಕಾಮಗಾರಿ ಪುನರಾರಂಭಿಸಿದ್ದು ಹಾಗೂ ಸಂಬಂಧಪಟ್ಟ ಕಾರ್ಯವೈಖರಿಗಳನ್ನು ಮೌಲ್ಯಮಾಪನ ನಡೆಸುವುದಕ್ಕಾಗಿ ಸಚಿವರು ಸೋಮವಾರ ಆಲೂರು ಮುನಂಬದ ಯೋಜನಾ ಪ್ರದೇಶವನ್ನು ಸಂದರ್ಶಿಸಿದರು.
Vijaya Karnataka Web baavikkere dam
ಒಂದೂವರೆ ವರ್ಷದಲ್ಲಿ ಬಾವಿಕ್ಕೆರೆ ಶಾಶ್ವತ ಅಣೆಕಟ್ಟು ಪೂರ್ಣ: ಸಚಿವ


ಅರ್ಧದಲ್ಲೇ ಮೊಟಕುಗೊಂಡಿದ್ದ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದ ಕ್ರಿಯಾ ಸಮಿತಿಯನ್ನು ಅಭಿನಂದಿಸಿದ ಸಚಿವರು ಒಂದೂವರೆ ವರ್ಷದಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದು ನಾಗರಿಕರಿಗೆ ಭರವಸೆ ನೀಡಿದರು.

ಶಾಸಕ ಕೆ. ಕುಞಿರಾಮನ್‌, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಕೆ. ಎ. ಜೋಶಿ, ಕೆ. ಪಿ. ರವೀಂದ್ರನ್‌, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ವರ್ಗೀಸ್‌ ಕೆ., ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪಿ. ಟಿ. ಸಂಜೀವ್‌, ಅನೂಪ್‌ ಎ. ಫೆಮಿ, ಕ್ರಿಯಾ ಸಮಿತಿ ಅಧ್ಯಕ್ಷ ಇ. ಕುಞಿಕಣ್ಣನ್‌ ಮಾಚಿಪ್ಪುರ, ಸಂಚಾಲಕ ಮುನೀರ್‌ ಮುನಂಬಂ, ಗುತ್ತಿಗೆದಾರ ಜಾಸ್ಮಿನ್‌ ಅಬ್ದುಲ್‌ ರಹಿಮಾನ್‌, ಗೋಪಿನಾಥನ್‌ ಪಣಿಕ್ಕರ್‌, ಬಶೀರ್‌ ಮುನಂಬಂ, ಬಿ. ಎಂ. ಕೃಷ್ಣನ್‌, ಮುಹಮ್ಮದ್‌ ಬದಿಯಡ್ಕ, ಬಾಲಗೊಪಾಲ್‌, ಬಾಸು, ಅಬ್ದುಲ್ಲ ಆಲೂರು, ವಿನು ಪಣಿಕ್ಕರ್‌, ಗಂಗಾಧರನ್‌, ಬಾಲಕೃಷ್ಣನ್‌ ಕರಿಚ್ಚೇರಿ, ಜನಾರ್ದನನ್‌ ಕಲ್ಲಳಿ, ಮಾಧವನ್‌ ಎಂಬಿವರು ಸಚಿವರೊಂದಿಗೆ ಇದ್ದರು.

ವರ್ಷಗಳ ಹಿಂದೆ ನಿರ್ಮಾಣ ಆರಂಭಿಸಿದ, ಎರಡು ಬಾರಿ ಅಂದಾಜುಪಟ್ಟಿ ಹಾಗೂ ರೂಪುರೇಷೆಯನ್ನು ನವೀಕರಿಸಿದ, ಇಬ್ಬರು ಗುತ್ತಿಗೆದಾರರು ಅರ್ಧದಲ್ಲೆ ಬಿಟ್ಟ ಯೋಜನೆಗೆ ಮರುಜೀವ ಲಭಿಸಿದೆ. ಯೋಜನೆ ಪೂರ್ತಿಯಾಗುವುದರೊಂದಿಗೆ ವರ್ಷಗಳಿಂದ ಕಾಸರಗೋಡು ನಗರದ ಹಾಗೂ ಸಮೀಪದ ಐದು ಪಂಚಾಯಿತಿಗಳ ಜನರು ಅನುಭವಿಸುತ್ತಿದ್ದ ಶುದ್ಧಜಲ ಸಮಸ್ಯೆಗೆ ಪರಿಹಾರವಾಗಲಿದೆ.

ಅಣೆಕಟ್ಟಿನ ಮೇಲ್ಭಾಗದಿಂದ ಟ್ರಾಕ್ಟರ್‌ ವೇ ಇಲ್ಲ: ಬಾವಿಕ್ಕೆರೆ ಶಾಶ್ವತ ಅಣೆಕಟ್ಟಿನ ಮೇಲ್ಭಾಗದಿಂದ ಟ್ರಾಕ್ಟರ್‌ ವೇ ಇಲ್ಲ. ಅಣೆಕಟ್ಟಿನ ಮೇಲ್ಭಾಗದಿಂದ ಸಣ್ಣ ವಾಹನಗಳಿಗೆ ಹಾದು ಹೋಗಲು ಟ್ರಾಕ್ಟರ್‌ ವೇ ಕೂಡ ನಿರ್ಮಿಸಬೇಕು ಎಂದು ಯೋಜನಾ ಪ್ರದೇಶವನ್ನು ಸಂದರ್ಶಿಸಿದ ಜಲಸಂಪನ್ಮೂಲ ಸಚಿವರೊಡನೆ ನಾಗರಿಕರು ಆಗ್ರಹಿಸಿದ್ದರು. ಸಚಿವರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಈ ವಿಷಯವಾಗಿ ಮಾತನಾಡಿದ್ದರು. ಆದರೆ ಈಗ ತಯಾರಿಸಿದ ರೂಪುರೇಷೆಯಲ್ಲಿ ಟ್ರಾಕ್ಟರ್‌ ವೇ ನಿರ್ಮಿಸಲು ಸಾಧ್ಯವಿಲ್ಲ ಎಂದೂ, ಫುಟ್‌ಪಾತ್‌ ಮಾತ್ರವೇ ಇರಲಿದೆ ಎಂದು ಟ್ರಾಕ್ಟರ್‌ ವೇ ಕೂಡಾ ಒಳಪಡಿಸಿ ನೂತನ ರೂಪುರೇಷೆ ತಯಾರಿಸಬೇಕಾದರೆ ಹೆಚ್ಚು ಸಮಯ ಬೇಕಾಗಲಿದ್ದು, ಯೋಜನೆ ಮತ್ತೆ ವಿಳಂಬಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ