ಆ್ಯಪ್ನಗರ

ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ

ಕೇರಳದ ಕೊಚ್ಚಿಯಲ್ಲಿ ನಟಿ ಲೀನಾ ಮರಿಯಾ ಪೌಲ್‌ ಮಾಲೀಕತ್ವದ ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್‌ ತಂಡ ಭೂಗತ ದೊರೆ ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎರ್ನಾಕುಳಂ ನಿವಾಸಿ ಬಿಲಾಲ್‌, ವಿಪಿನ್‌ ಹಾಗೂ ಆಲುವಾ ನಿವಾಸಿ ಅಲ್ತಾಪ್‌ ಬಂಧಿತರು.

Vijaya Karnataka 13 Apr 2019, 5:00 am
ಕಾಸರಗೋಡು: ಕೇರಳದ ಕೊಚ್ಚಿಯಲ್ಲಿ ನಟಿ ಲೀನಾ ಮರಿಯಾ ಪೌಲ್‌ ಮಾಲೀಕತ್ವದ ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರ್ಯಾಂಚ್‌ ತಂಡ ಭೂಗತ ದೊರೆ ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎರ್ನಾಕುಳಂ ನಿವಾಸಿ ಬಿಲಾಲ್‌, ವಿಪಿನ್‌ ಹಾಗೂ ಆಲುವಾ ನಿವಾಸಿ ಅಲ್ತಾಪ್‌ ಬಂಧಿತರು.
Vijaya Karnataka Web beautyparlour shootout three held
ಬ್ಯೂಟಿ ಪಾರ್ಲರ್‌ಗೆ ಗುಂಡು ಹಾರಿಸಿದ ಪ್ರಕರಣ: ಮೂವರ ಬಂಧನ


ಆರೋಪಿಗಳು ಮುಂಬಯಿಯ ಭೂಗತ ದೊರೆ ರವಿ ಪೂಜಾರಿಯೊಂದಿಗೆ ನಂಟು ಹೊಂದಿರುವ ಶಂಕೆ ಇದ್ದು, ಇವರಿಗೆ ಕಾಸರಗೋಡು ಮೂಲದ ತಂಡ ಸುಪಾರಿ ನೀಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಕ್ರೈಂ ಬ್ರ್ಯಾಂಚ್‌ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಬಿಲಾಲ್‌ ವಿರುದ್ಧ ಐದು ಪ್ರಕರಣ, ವಿಪಿನ್‌ ಹಾಗೂ ಅಲ್ತಾಫ್‌ ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಬ್ಯೂಟಿ ಪಾರ್ಲರ್‌ಗೆ ಶೂಟೌಟ್‌ ನಡೆಸಲು ಕಾಸರಗೋಡಿನ ತಂಡ 1 ಕೋಟಿ ರೂ. ಸುಪಾರಿ ನೀಡಿತ್ತು. ಆದರೆ 1 ಕೋಟಿ ರೂ. ಬದಲು ಕೇವಲ 30 ಸಾವಿರ ರೂ. ಲಭಿಸಿರುವುದಾಗಿ ಬಂಧಿತ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.

ನಟಿ ಲೀನಾ ಮರಿಯಾ ಪೌಲ್‌ ಮಾಲೀಕತ್ವದಲ್ಲಿರುವ ನೈಲ್‌ ಬ್ಯೂಟಿ ಪಾರ್ಲರ್‌ಗೆ 2018ರ ಡಿ.15ರಂದು ಬೈಕ್‌ನಲ್ಲಿ ಬಂದ ಮೂವರ ತಂಡ ಗುಂಡು ಹಾರಿಸಿತ್ತು. ಬಳಿಕ ಗುಂಡು ಹಾರಿಸಿದ್ದು ತನ್ನ ಸಹಚರರು ಎಂದು ರವಿ ಪೂಜಾರಿ ಮಲೆಯಾಳ ಖಾಸಗಿ ಚಾನೆಲ್‌ವೊಂದಕ್ಕೆ ತಿಳಿಸಿದ್ದನು.

ನಟಿ ಲೀನಾ ಮರಿಯಾ ಅವರನ್ನು ಬೆದರಿಸಿ 25 ಕೋಟಿ ರೂ. ಎಗರಿಸುವ ಉದ್ದೇಶದಿಂದ ಪಾರ್ಲರ್‌ಗೆ ಗುಂಡು ಹಾರಿಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಗಳು ಹಲವು ಬಾರಿ ಕಾಸರಗೋಡಿಗೆ ಬಂದು ಸುಪಾರಿ ಹಣದ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತನಿಖೆಯಿಂದ ಒಪ್ಪಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ