ಆ್ಯಪ್ನಗರ

ವಿವಾಹ ಮಂಟಪದಿಂದ ಪ್ರಿಯಕರನೊಂದಿಗೆ ತೆರಳಿದ ಯುವತಿ

ವಧು ತನ್ನ ಪ್ರಿಯತಮೆ, ಆದ್ದರಿಂದ ಆಕೆಗೆ ತಾಳಿ ಕಟ್ಟಲು ತನಗೆ ಅವಕಾಶ ಒದಗಿಸಬೇಕೆಂದು ಯುವಕ ವಿನಂತಿಸತೊಡಗಿದ. ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯದ ಜತೆಗೆ ಆತಂಕ. ಮದುವೆಗೆ ಆಹ್ವಾನಿಸಲ್ಪಟ್ಟ ಅತಿಥಿಗಳು ಮದುವೆ ಮಂಟಪಕ್ಕೆ ತಲುಪಿದ ಅಪರಿಚಿತ ಯುವಕನನ್ನು ತಡೆಯಲು ಮುಂದಾದಾಗ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಯಿತು.

Vijaya Karnataka 21 May 2019, 7:58 am
ಬದಿಯಡ್ಕ(ಕಾಸರಗೋಡು): ನೂರಾರು ಮಂದಿಯ ಸಮ್ಮುಖದಲ್ಲಿ ಮಂಗಳವಾದ್ಯ ಮೊಳಗುವುದರೊಂದಿಗೆ ವಧುವಿನ ಕುತ್ತಿಗೆಗೆ ವರ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ, ಮದುವೆ ಮಂಟಪಕ್ಕೆ ಸ್ನೇಹಿತರ ತಂಡದೊಂದಿಗೆ ತಲುಪಿದ ಯುವಕ ಮದುವೆಗೆ ತಡೆಯೊಡ್ಡಿದ.
Vijaya Karnataka Web Marriage


ವಧು ತನ್ನ ಪ್ರಿಯತಮೆ, ಆದ್ದರಿಂದ ಆಕೆಗೆ ತಾಳಿ ಕಟ್ಟಲು ತನಗೆ ಅವಕಾಶ ಒದಗಿಸಬೇಕೆಂದು ಯುವಕ ವಿನಂತಿಸತೊಡಗಿದ. ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯದ ಜತೆಗೆ ಆತಂಕ. ಮದುವೆಗೆ ಆಹ್ವಾನಿಸಲ್ಪಟ್ಟ ಅತಿಥಿಗಳು ಮದುವೆ ಮಂಟಪಕ್ಕೆ ತಲುಪಿದ ಅಪರಿಚಿತ ಯುವಕನನ್ನು ತಡೆಯಲು ಮುಂದಾದಾಗ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಯಿತು.

ವಿಷಯ ತಿಳಿದ ಬದಿಯಡ್ಕ ಪೊಲೀಸರು ವರ, ವಧು ಹಾಗೂ ಆಕೆಯ ಪ್ರಿಯತಮ ಎನ್ನಲಾದ ಯುವಕನನ್ನು ಠಾಣೆಗೆ ಕರೆದೊಯ್ದರು. ಅಲ್ಲಿ ನಡೆದ ಮಾತುಕತೆ ವೇಳೆ ವಧು ತಾನು ಪ್ರಿಯಕರನೊಂದಿಗೆ ತೆರಳುವುದಾಗಿ ತಿಳಿಸಿದಳು. ಸಂಬಂಧಿಕರು ಹಾಗೂ ಪೊಲೀಸರು ಆಕೆಯನ್ನು ಸಮಾಧಾನಿಸಿ, ನಿರ್ಧಾರ ಬದಲಿಸಲು ಯತ್ನಿಸಿದರೂ ಆಕೆ ತನ್ನ ಪಟ್ಟು ಸಡಿಲಿಸಲಿಲ್ಲ. ಸಂಜೆವರೆಗೆ ಈ ವಿದ್ಯಮಾನ ನಡೆದಿದ್ದು, ಕೊನೆಗೆ ವಧುವನ್ನು ಪ್ರಿಯಕರನೊಂದಿಗೆ ತೆರಳಲು ಒಪ್ಪಿದ್ದರಿಂದ ವಿವಾದ ಕೊನೆಗೊಂಡಿತು. ಸಂಬಂಧಿಕರು ತಮ್ಮ ಮನೆಗೆ ಮರಳಿದರು.

ಇದು ಭಾನುವಾರ ನೀರ್ಚಾಲು ವಿಷ್ಣುಮೂರ್ತಿ ಕಲ್ಯಾಣ ಮಂಟಪದಲ್ಲಿ ನಡೆದ ಘಟನೆ.

ವರ ನೆಲ್ಲಿಕಟ್ಟೆ ಅಜೆಕ್ಕೋಡು ನಿವಾಸಿ. ಈತನಿಗೆ ಕನ್ನೆಪ್ಪಾಡಿ ಬಳಿಯ ಚೋಯಿಮೂಲೆಯ ಯುವತಿಯೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಭಾನುವಾರ ಮದುವೆ ನಡೆಯುತ್ತಿದ್ದಂತೆ ವಧುವಿನ ಪ್ರಿಯತಮ ಎನ್ನಲಾದ ಬಂದ್ಯೋಡು ಯುವಕ ಕಲ್ಯಾಣ ಮಂಟಪಕ್ಕೆ ಬಂದು ಮದುವೆಗೆ ತಡೆಯೊಡ್ಡಿ ಆಕೆಯನ್ನು ತನ್ನವಳನ್ನಾಗಿಸಿಕೊಂಡಿದ್ದಾನೆ. ಘಟನೆ ಬಗ್ಗೆ ಲಿಖಿತ ದೂರು ಲಭಿಸದ ಹಿನ್ನೆಲೆಯಲ್ಲಿ ಪೊಲೀಸರು ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ