ಆ್ಯಪ್ನಗರ

ಮಂಜೇಶ್ವರ ಉಪ ಚುನಾವಣೆ, ವಿಧಾನಸಭೆ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಬೇಕಿದೆ ಅದ್ಯತೆ

ಕಾಸರಗೋಡು ಜಿಲ್ಲೆಯ ಪ್ರಮುಖ ನಾಲ್ಕು ತಾಲೂಕುಗಳಲ್ಲಿ ಒಂದಾಗಿರುವ ಮಂಜೇಶ್ವರದಲ್ಲಿ ಒಟ್ಟು 15 ಗ್ರಾಮ ಕಚೇರಿಗಳಿವೆ. ಅಸ್ತಿತ್ವಕ್ಕೆ ಬಂದು 6 ವರ್ಷವಾದರೂ ಅಭಿವೃದ್ಧಿ ಕಾಣದ ಮಂಜೇಶ್ವರದ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಮುಖ್ಯ

Vijaya Karnataka Web 27 Sep 2019, 6:03 pm
ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಪ್ರಮುಖ ನಾಲ್ಕು ತಾಲೂಕುಗಳಲ್ಲಿ ಮಂಜೇಶ್ವರ ಕೂಡ ಒಂದು. 15 ಗ್ರಾಮ ಕಚೇರಿಗಳಿರುವ ತಾಲೂಕು ಅಸ್ತಿತ್ವಕ್ಕೆ ಬಂದು 6 ವರ್ಷ ಸಂದಿವೆ. 2013ರಲ್ಲಿ ವೆಳ್ಳರಿಕುಂಡು ಮತ್ತು ಮಂಜೇಶ್ವರವನ್ನು ತಾಲೂಕುಗಳೆಂದು ಘೋಷಿಸಲಾಗಿತ್ತು. ಹೊಸ ತಾಲೂಕು ಅಸ್ತಿತ್ವದೊಂದಿಗೆ ಹಲವು ದಶಕಗಳ ಬೇಡಿಕೆ ಈಡೇರಿತು. ಸದ್ಯ ಮಂಜೇಶ್ವರದಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು, ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಆಗಬೇಕಾದ ಹತ್ತು ಹಲವು ಯೋಜನೆಗಳು, ಪೂರ್ಣಗೊಳ್ಳಬೇಕಾದ ಯೋಜನೆಗಳ ಕುರಿತು, ಜನಪ್ರತಿನಿಧಿಗಳು ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
Vijaya Karnataka Web manjeshwara


ಮಂಜೇಶ್ವರ ಉಪ ಚುನಾವಣೆ: ಎಡರಂಗದಿಂದ ಶಂಕರ ರೈ ಮಾಸ್ತರ್‌ ಕಣಕ್ಕೆ

2012ರಲ್ಲಿ ಮಂಡಿಸಲ್ಪಟ್ಟ ಕಾಸರಗೋಡು ಅಭಿವೃದ್ಧಿ ವರದಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಮಂಜೇಶ್ವರ ತಾಲೂಕಿನ ಅವಶ್ಯಕತೆ ಮತ್ತು ಈ ಭಾಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಮತ್ತು ಸ್ಥಳೀಯಾಡಳಿತಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಡಾ. ಪಿ. ಪ್ರಭಾಕರನ್‌ ಕ್ರೋಡೀಕರಿಸಿದ ವರದಿಯಲ್ಲಿ ಕೃಷಿ ವಲಯದ ಸಮಸ್ಯೆ, ನೀರಾವರಿ ಯೋಜನೆ ಸಹಿತ ಪಶುಸಂಗೋಪನೆಗೆ ನೀಡಬೇಕಾದ ಒತ್ತು ಸಹಿತ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ತೆಗೆದುಕೊಳ್ಳಬೇಕಾದ ತುರ್ತು ಅವಶ್ಯಕತೆಗಳನ್ನು ವಿವರಿಸಲಾಗಿದೆ.

ಇಲಿಜ್ವರ: ಪ್ರತಿರೋಧಕ ಚಟುವಟಿಕೆ ಚುರುಕು

ಶಿಕ್ಷಣ, ಮೂಲಸೌಕರ್ಯಕ್ಕೆ ಉತ್ತೇಜನ ಮತ್ತು ಸಣ್ಣ ಉದ್ದಿಮೆ ಆರಂಭಿಸುವಂತಾಗಲು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಲಾಗಿದೆ. ಮೀನುಗಾರಿಕೆ, ಕೈಗಾರಿಕೆ, ಇಂಧನ ಪೂರೈಕೆ, ವಿದ್ಯುಚ್ಛಕ್ತಿ, ಉತ್ತಮ ರಸ್ತೆ ಸಂಪರ್ಕಗಳು ಸೇರಿದಂತೆ ಶುಚಿತ್ವ, ಆರೋಗ್ಯ ಸಹಿತ ಉನ್ನತ ವಿದ್ಯಾಭ್ಯಾಸದ ಅಗತ್ಯದ ಬಗ್ಗೆ ಕೂಲಂಕಷ ಮಾಹಿತಿ ನೀಡಲಾಗಿದೆ. ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು, ಎಂಡೋ ಪೀಡಿತರ ಪುನರ್ವಸತಿಗೂ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ಕಡಲ್ಕೊರೆತಕ್ಕೆ ಕ್ರಮ ಅಗತ್ಯ:
ಬೇಸಿಗೆಯಲ್ಲಿ ಹಿಮ್ಮುಖವಾಗಿ ಹರಿದು ನದಿ ಪಾತ್ರಕ್ಕೆ ಸೇರುವ ಸಮುದ್ರದ ಉಪ್ಪು ನೀರು ಸಹಿತ ಮಳೆಗಾಲದಲ್ಲಿ ಮಂಗಲ್ಪಾಡಿ, ಮಂಜೇಶ್ವರ, ಕುಂಬಳೆ, ಮೊಗ್ರಾಲ್‌ ಪುತ್ತೂರು ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಕಡಲ್ಕೊರೆತ ತಡೆಗೆ ವೈಜ್ಞಾನಿಕ ರೀತಿಯಲ್ಲಿಉತ್ತಮ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರ ದೋಣಿ ಪ್ರತಿಭಟನೆ

ಮಂಜೇಶ್ವರಕ್ಕೆ ಸುಸಜ್ಜಿತ ತಾಲೂಕು ಕಚೇರಿ ಅಥವಾ ಮಿನಿ ಸಿವಿಲ್‌ ಸ್ಟೇಶನ್‌, ರೈಲ್ವೆ ಓವರ್‌ ಬ್ರಿಡ್ಜ್‌ ಮತ್ತು ಅಂಡರ್‌ಪಾಸ್‌ ಸೌಲಭ್ಯ, ಪೊಲೀಸ್‌ ಠಾಣೆಗಳಲ್ಲಿಆಧುನಿಕ ಸೈಬರ್‌ ಸೌಲಭ್ಯ, ಉಪ್ಪಳ, ಕುಂಬಳೆಗಳಲ್ಲಿಸುಸಜ್ಜಿತ ಮೀನು ಮಾರುಕಟ್ಟೆಗಳು, ಕೃಷಿಯಲ್ಲಿತಾಂತ್ರಿಕತೆಗೆ ಒತ್ತು ನೀಡಿ ಕೃಷಿಗೆ ಉತ್ತೇಜನ, ಕೃಷಿ ಉತ್ಪನ್ನಗಳಿಗೆ ಪೂರಕ ಮಾರುಕಟ್ಟೆ ವ್ಯವಸ್ಥೆ, ನೀರಾವರಿ ಸೌಲಭ್ಯ, ಕುಡಿನೀರು ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಕೃಷಿ ಪೂರಕವಾಗಿರುವ ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗೆ ಪ್ರೋತ್ಸಾಹ-ಸಣ್ಣ ಮತ್ತು ಮಧ್ಯಮ ಹೂಡಿಕೆಯತ್ತ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಾಗಿವುದು ಅಗತ್ಯವಾಗಿದೆ. ಕೇರಳ ತುಳು ಅಕಾಡೆಮಿಯ ತುಳುಭವನ ನಿರ್ಮಾಣ, ಯಕ್ಷಗಾನ ಕಲಾಕೇಂದ್ರಗಳ ಕಾರ್ಯಚಟುವಟಿಕೆಗಳನ್ನು ಉದ್ದೀಪನಗೊಳಿಸುವ ಕಾರ್ಯಗಳು, ಯಕ್ಷಗಾನ, ಪಾಡ್ದನಗಳು ಸಹಿತ ನಶಿಸುತ್ತಿರುವ ಬಾಳಸಾಂತು, ಕನ್ಯಾಪ್ಪು, ಜೋಗಿ, ಜೋಗಯ್ಯ, ಮಾಪಿಳ್ಳಪಾಟ್ಟುವಿನಂತಹ ಕಲಾಪ್ರಕಾರಗಳನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕಿದೆ.

ಪ್ರಾದೇಶಿಕ ಕನ್ನಡ ಅಭ್ಯರ್ಥಿಗಾಗಿ ಹುಡುಕಾಟ ಶುರು

ಮಂಜೇಶ್ವರ ಬಂದರು ಯೋಜನೆ:
ಆಧುನಿಕ ಬ್ರೇಕ್‌ ವಾಟರ್‌ ಸೌಲಭ್ಯವುಳ್ಳ ಮಂಜೇಶ್ವರ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಬ್ರೇಕ್‌ ವಾಟರ್‌ ಸೌಲಭ್ಯಕ್ಕಾಗಿ ಒಂದು ಬದಿಯ ಸಮುದ್ರದ ತಡೆಗೋಡೆ ಹೆಚ್ಚಿಸುವ ಅಗತ್ಯತೆ ಮನಗಂಡ ಸರಕಾರ ಬಂದರು ಕಾಮಗಾರಿಯನ್ನು ಮುಗಿಸಲು ನ್ನಷ್ಟು ಕಾಲಮಿತಿ ತೆಗೆದುಕೊಂಡಿದೆ. ಮೀನು ರಖಂ ಮಾರುಕಟ್ಟೆಗೆ ವ್ಯವಸ್ಥಿತ ಸ್ಥಳಾವಕಾಶ, ಏಲಂ ಪ್ರದೇಶ, ಮೀನುಗಾರಿಕೆ ನೆಟ್‌ ತಯಾರಿಗೆ ಸ್ಥಳಾವಕಾಶ ಸಹಿತ ಕಚೇರಿ, ಶುದ್ಧ ಕುಡಿಯುವ ನೀರು ಘಟಕ ಮತ್ತು ಶೌಚಾಲಯ ಹೊಂದಿರುವ ಬಂದರು ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮತ್ತು ಉತ್ತಮ ರಸ್ತೆ ಸೌಕರ್ಯದ ಬಗ್ಗೆ ಗಮನ ಹರಿಸಬೇಕಿದೆ.

ಮಲೆನಾಡು ಹೈವೇ ರಸ್ತೆ ಅಭಿವೃದ್ಧಿ ಕಾರ್ಯ :
ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡಿ ವ್ಯಾಪಾರ ಮತ್ತು ಆರ್ಥಿಕತೆಗೆ ಪುಷ್ಟಿ ನೀಡುವ ಕೆಲಸ ಮಾಡಬೇಕಿದ್ದು, ತ್ವರಿತಗತಿಯಲ್ಲಿ ಸುಸಜ್ಜಿತ ರಸ್ತೆ ಸಂಪರ್ಕ ಪೂರ್ಣಗೊಳಿಸಿ ಪರ್ಯಾಯ ಹೆದ್ದಾರಿ ನಿರ್ಮಾಣದ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಅಗತ್ಯವಾಗಿದೆ.

ಉತ್ತರದ ಮಂಜೇಶ್ವರ, ಕುಂಬಳೆ ಕೇಂದ್ರೀಕರಿಸಿ ಆರಂಭಗೊಳ್ಳಬೇಕಿದ್ದ ಕುಂಬಳಾಂಗಿ ಪ್ರವಾಸೋದ್ಯಮ ಯೋಜನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಹಿನ್ನೀರ ಪ್ರವಾಸೋದ್ಯಮ, ಗುಡಿ ಕೈಗಾರಿಕೆಗೆ ಉತ್ತೇಜನ ಸಹಿತ ಗ್ರಾಮೀಣ ಸಂಸ್ಕೃತಿಯ ಪರಿಚಯಿಸುವ ಅತ್ಯಪೂರ್ವ ಯೋಜನೆಯು ಕುಂಬಳಾಂಗಿ ವಿಲೇಜ್‌ ಟೂರಿಸಂ ಯೋಜನೆ. ಮಂಜೇಶ್ವರ ಚತುರ್ಮುಖ ಜೈನ ಬಸದಿ, ಅನಂತಪುರ ದೇವಸ್ಥಾನ, ಬೇಳ ಇಗರ್ಜಿ, ಉದ್ಯಾವರ ಮಸೀದಿ ಸಹಿತ ಮಂಜೇಶ್ವರ ಸಮೀಪದ ಕಣ್ವತೀರ್ಥ ಬೀಚ್‌ ಅಭಿವೃದ್ಧಿ, ಪೊಸಡಿಗುಂಪೆ ಚಾರಣ, ಶಿರಿಯಾ ಹಿನ್ನೀರ ಪ್ರವಾಸವನ್ನು ಯೋಜನೆಯಡಿ ತರಲಾಗಿದೆ.

ಮಂಜೇಶ್ವರ ಉಪಚುನಾವಣೆ ದಿನಾಂಕ ಘೋಷಣೆ

ಜಿಲ್ಲಾಅಭಿವೃದ್ಧಿ ವರದಿಯಲ್ಲೂಕುಂಬಳೆ ಕೇಂದ್ರೀಕೃತವಾಗಿರುವ ಮಾದರಿ ಪ್ರವಾಸಿ ಗ್ರಾಮ ನಿರ್ಮಾಣ ಯೋಜನೆಯ ಬಗ್ಗೆ ಉಲ್ಲೇಖಿಸಲಾಗಿದೆ. 2004ರಲ್ಲಿ ರೂಪಿತಗೊಂಡ ಯೋಜನೆಯಲ್ಲಿಕುಂಬಳೆ ಆರಿಕ್ಕಾಡಿ ಕೋಟೆಯ ಪುನರ್‌ ನಿರ್ಮಾಣ, ದೋಣಿ ವಿಹಾರ, ಜನಪದ ಗ್ರಾಮ, ತೋಟಗಾರಿಕಾ ಪ್ರವಾಸದ ಲಕ್ಷತ್ರ್ಯವನ್ನಿಡಲಾಗಿತ್ತು. ವರದಿಯಲ್ಲಿಕುಂಬಳೆ ಮಾದರಿ ಪ್ರವಾಸಿ ಗ್ರಾಮ ಯೋಜನೆಗೆ 2 ಕೋಟಿ ರೂ., ಕಣ್ವತೀರ್ಥ ಬೀಚ್‌ ಪರಿಸರದಲ್ಲಿಮೂಲಸೌಲಭ್ಯ ಕೊಡಮಾಡಲು 50 ಲಕ್ಷ ರೂ., ಸಹಿತ ಪೊಸಡಿಗುಂಪೆ ಚಾರಣಧಾಮದ ಅಭಿವೃದ್ಧಿಗೆ 20 ಲಕ್ಷ ರೂ. ಅಗತ್ಯವಿದೆ.

ಕೃಷಿ, ಪ್ರವಾಸೋದ್ಯಮ, ರಸ್ತೆ ಅಭಿವೃದ್ಧಿ, ತಾಲೂಕು ಕೇಂದ್ರ, ರೈಲ್ವೆ ಅಂಡರ್‌ಪಾಸ್‌ ವ್ಯವಸ್ಥೆ ಹೊರತಾಗಿ ಶುಚಿತ್ವ, ಆರೋಗ್ಯ, ಉನ್ನತ ವಿದ್ಯಾಭ್ಯಾಸ ಕೇಂದ್ರಗಳ ನಿರ್ಮಾಣ, ಆಧುನೀಕರಣ ಮತ್ತು ಮೇಲ್ದರ್ಜೆ ಬಗ್ಗೆ ವಿವರಿಸಲಾಗಿದೆ. ಮಂಗಲ್ಪಾಡಿ ಕುಟುಂಬ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿಸಬೇಕು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿವಿವಿಧ ಸ್ನಾತಕೋತ್ತರ ಕೋರ್ಸ್‌ ಆರಂಭಿಸುವಿಕೆ, ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ, ಕಾಲೇಜಿನಲ್ಲಿಹೆರಿಟೇಜ್‌ ಮ್ಯೂಸಿಯಂ ಸ್ಥಾಪನೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ, ಸ್ಥಳೀಯರ ಪಾಲ್ಗೊಳ್ಳುವಿಕೆಯಿಂದ ಅಭಿವೃದ್ಧಿ ವರದಿಯಲ್ಲಿರುವ ಗಮನಾರ್ಹ ಅಂಶಗಳನ್ನು ಪರಿಗಣಿಸಿ ಮಂಜೇಶ್ವರ ತಾಲೂಕನ್ನು ಮಾದರಿಯಾಗಿಸುವತ್ತ ಎಲ್ಲರೂ ಪಣತೊಡಬೇಕಿದೆ ಎಂಬುದು ಜನತೆಯ ಆಶಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ