ಆ್ಯಪ್ನಗರ

ಕುಂಡಂಗುಳಿಯಲ್ಲಿಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆ

ಕೃಷಿಕರಿಂದ ಕೃಷಿಕರಿಗಾಗಿಯೇ ಹುಟ್ಟಿಕೊಂಡ ಸಂಸ್ಥೆ ಕ್ಯಾಂಪ್ಕೋ. ಬೆಲೆಯ ಸ್ಥಿರತೆ ಹಾಗೂ ಬೆಳೆಗಾರರ ಹಿತರಕ್ಷಣೆ ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಮಾರುಕಟ್ಟೆಯ ಏಕೀಕರಣಕ್ಕೆ ಸತತ ಪ್ರಯತ್ನವನ್ನು ಮಾಡಲಾಗುತ್ತಿದೆ. ಸಹಕಾರಿ ಕ್ಷೇತ್ರಗಳ ಮೂಲಕ ಸಮಾಜವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.

Vijaya Karnataka 1 Sep 2019, 9:01 pm
ಕುಂಡಂಗುಳಿ: ಕೃಷಿಕರಿಂದ ಕೃಷಿಕರಿಗಾಗಿಯೇ ಹುಟ್ಟಿಕೊಂಡ ಸಂಸ್ಥೆ ಕ್ಯಾಂಪ್ಕೋ. ಬೆಲೆಯ ಸ್ಥಿರತೆ ಹಾಗೂ ಬೆಳೆಗಾರರ ಹಿತರಕ್ಷಣೆ ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಮಾರುಕಟ್ಟೆಯ ಏಕೀಕರಣಕ್ಕೆ ಸತತ ಪ್ರಯತ್ನವನ್ನು ಮಾಡಲಾಗುತ್ತಿದೆ. ಸಹಕಾರಿ ಕ್ಷೇತ್ರಗಳ ಮೂಲಕ ಸಮಾಜವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.
Vijaya Karnataka Web campco members cropers meet
ಕುಂಡಂಗುಳಿಯಲ್ಲಿಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆ


ಶುಕ್ರವಾರ ಕುಂಡಂಗುಳಿ ಪಂಚಲಿಂಗೇಶ್ವರ ದೇವಸ್ಥಾನದ ವೈಕುಂಠ ಆಡಿಟೋರಿಯಂನಲ್ಲಿನಡೆದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2018-19ನೇ ಸಾಲಿನಲ್ಲಿಕ್ಯಾಂಪ್ಕೋ 1875 ಕೋಟಿಯ ದಾಖಲೆಯ ವ್ಯವಹಾರವನ್ನು ಮಾಡಿದೆ ಎಂದು ತಿಳಿಸಿದ ಅವರು ಸದಸ್ಯ ಬೆಳೆಗಾರರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು. ಆಧುನಿಕ ತಂತ್ರಜ್ಞಾನಗಳು ಬೆಳವಣಿಗೆಯನ್ನು ಕಾಣುತ್ತಿದ್ದು, ಅದಕ್ಕೆ ನಾವು ಹೊಂದಿಕೊಳ್ಳಬೇಕು. ಅಡಿಕೆ ಕೃಷಿಯೊಂದಿಗೆ ಸಮಗ್ರ ಕೃಷಿಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕೃಷಿಕರಾದ ಕುಞಂಬು ನಾಯರ್‌ ಮಡಕ್ಕಾಲ್‌, ಕುಞ್ಞಿಕಣ್ಣನ್‌ ನಾಯರ್‌ ಪೆರಳಂ, ಮೋಹನನ್‌ ತೋಣಿಕ್ಕಡವ್‌, ಪಿ.ವಿ.ಲಕ್ಷಿತ್ರ್ಮೕ, ನಾರಾಯಣನ್‌ ನಾಯರ್‌ ಕುಣಿಯೇರಿ ದೀಪ ಬೆಳಗಿಸಿ ಸಭೆಗೆ ಚಾಲನೆಯನ್ನು ನೀಡಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್‌ ಖಂಡಿಗೆ, ನಿರ್ದೇಶಕರಾದ ಕೆ.ಸತೀಶ್ಚಂದ್ರ ಭಂಡಾರಿ, ಕೆ.ರಾಜಗೋಪಾಲ್‌, ಎಂ.ಕೆ.ಶಂಕರನಾರಾಯಣ ಭಟ್‌, ಬಿ.ಶಿವಕೃಷ್ಣ ಭಟ್‌, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಸಹಕಾರ ಭಾರತಿಯ ಕರುಣಾಕರನ್‌ ನಂಬ್ಯಾರ್‌, ಸೀನಿಯರ್‌ ಮ್ಯಾನೇಜರ್‌ ಮುರಳಿ, ರೀಜನಲ್‌ ಮ್ಯಾನೇಜರ್‌ ಪ್ರಕಾಶ್‌ ಶೆಟ್ಟಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ