ಆ್ಯಪ್ನಗರ

ಕೇರಳ ಚಿಕನ್‌ ಯೋಜನೆ ವಿಫಲ!

ಸರಕಾರ ಕೇರಳ ರಾಜ್ಯದಲ್ಲಿ ಮಾಂಸದ ಕೋಳಿ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಚಿಕನ್‌ ಯೋಜನೆ ಫಲ ಕಾಣದ ಹಿನ್ನೆಲೆಯಲ್ಲಿ ಪ್ರತಿ ದಿನವೂ ಮಾಂಸದ ಕೋಳಿ ಬೆಲೆ ಏರಿಕೆಯಾಗುತ್ತಿದೆ.

ವಿಕ ಸುದ್ದಿಲೋಕ 6 May 2018, 9:24 pm
ಕೆ. ಗಂಗಾಧರ್‌ ಯಾದವ್‌, ಕಾಸರಗೋಡು
Vijaya Karnataka Web chiken

ಸರಕಾರ ಕೇರಳ ರಾಜ್ಯದಲ್ಲಿ ಮಾಂಸದ ಕೋಳಿ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಚಿಕನ್‌ ಯೋಜನೆ ಫಲ ಕಾಣದ ಹಿನ್ನೆಲೆಯಲ್ಲಿ ಪ್ರತಿ ದಿನವೂ ಮಾಂಸದ ಕೋಳಿ ಬೆಲೆ ಏರಿಕೆಯಾಗುತ್ತಿದೆ. ಅಲ್ಲದೆ ತಮಿಳುನಾಡಿನಲ್ಲಿ ಮಾಂಸದ ಕೋಳಿ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಕೇರಳದಲ್ಲಿ ಕಿಲೋಗೆ 120ರಿಂದ 130 ರೂ. ಆಗಿದೆ. ಎರಡು ತಿಂಗಳ ಹಿಂದೆ 80 ರೂ. ಗಡಿಯಲ್ಲಿದ್ದ ದರ ಇದೀಗ 130ರ ಗಡಿ ದಾಟಿದೆ.

ಕೇರಳ ಚಿಕನ್‌ ಯೋಜನೆ ವಿಫಲ ಹಾಗೂ ತಮಿಳುನಾಡು ಸರಕಾರ ಕೋಳಿ ಆಹಾರ ಹಾಗೂ ವಿದ್ಯುತ್‌ಗೆ ನೀಡುತ್ತಿರುವ ರಿಯಾಯಿತಿನ್ನು ನಿಲ್ಲಿಸಿರುವುದು ಬೆಲೆ ಏರಿಕೆಗೆ ಕಾರಣವಾಗಿರುವುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಕೋಳಿ ದರವೂ ಕಡಿಮೆಯಾಗಿದ್ದರ ಪರಿಣಾಮ ಮಾಂಸದ ಕೋಳಿ ಕೃಷಿಕರ ಸಂಖ್ಯೆಯೂ ಕಡಿಮೆಯಾಗಿದೆ.

ಕೇರಳದಲ್ಲಿ ಕೋಳಿ ಉತ್ಪಾದನೆ ಕಡಿಮೆಯಾದ್ದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಕೋಳಿ ದರದ ಅಸ್ಥಿರತೆ ಮತ್ತು ನಷ್ಟವನ್ನು ಕಂಡುಕೊಂಡು ಕೋಳಿ ಸಾಕಣೆಯಿಂದ ಕೃಷಿಕರು ದೂರ ಉಳಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಜಿಎಸ್‌ಟಿ ಜಾರಿಯಾಗುವ ಮೂಲಕ ಕೋಳಿಯ ಆಹಾರ ಹಾಗೂ ಔಷಧಗಳಿಗೆ ಶೇ.15ರಷ್ಟು ಬೆಲೆ ಏರಿಕೆಯಾಗಿರುವುದು ಸಹ ಕೋಳಿ ಸಾಕಣೆಯಿಂದ ಕೃಷಿಕರು ಹಿಂದೆ ಸರಿಯಲು ಕಾರಣವಾಗಿದೆ. ಮಾರುಕಟ್ಟೆಯಲ್ಲಿರುವ ಬೆಲೆಯ ಅರ್ಧದಷ್ಟು ಲಭಿಸಿದರೆ ಮಾತ್ರ ಕೋಳಿ ಸಾಕಣೆ ಲಾಭಕರವಾಗಿರುವುದಾಗಿ ಕೃಷಿಕರು ಹೇಳುತ್ತಾರೆ.

ಕೇರಳ ಸರಕಾರ ಕುಟುಂಬಶ್ರೀ ಮಿಷನ್‌ ಮೂಲಕ ಕೃತಕ ಆಹಾರ ಹಾಗೂ ಔಷಧಗಳನ್ನು ನೀಡದೇ ಆರ್ಗಾನಿಕ್‌ ಕೋಳಿ ಸಾಕಣೆಯನ್ನು ಫಲಪ್ರದವಾಗಿ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಕುಟುಂಬಶ್ರೀ ಮೂಲಕ ಜೈವಿಕ ಆರ್ಗಾನಿಕ್‌ ಕೋಳಿ ಸಾಕಣೆಯೊಂದಿಗೆ ಅವುಗಳನ್ನು ಕುಟುಂಬಶ್ರೀ ಸ್ಟಾಲ್‌ಗಳ ಮೂಲಕ ನೀಡುವ ಮಹತ್ವದ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಆಮದು ಮಾಡುವ ಮಾಂಸದ ಕೋಳಿಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಜೈವಿಕ ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇರಳ ಚಿಕನ್‌ ಯೋಜನೆಗೆ ರೂಪು ನೀಡಿದೆ.

ಕೇರಳ ಚಿಕನ್‌ ಯೋಜನೆ ಯಶಸ್ವಿಯಾದರೆ ತಮಿಳುನಾಡಿನ ಕೋಳಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಹ್ನಿನೆಲೆಯಲ್ಲಿ ಅದನ್ನು ಬುಡಮೇಲುಗೊಳಿಸಲು ತಮಿಳುನಾಡಿನ ಕೋಳಿ ಮಾಫಿಯಾಗಳು ಪ್ರಯತ್ನಿಸುತ್ತಿವೆ.

ಕುಟುಂಬಶ್ರೀ ಮಿಷನ್‌, ರಾಜ್ಯ ಪಶುಸಂಗೋಪನಾ ಇಲಾಖೆ, ಕೇರಳ ಸ್ಟೇಟ್‌ ಪೌಲ್ಟ್ರಿ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌ ಇತ್ಯಾದಿಗಳನ್ನು ಸಂಯೋಜಿಸಿಕೊಂಡು ಕೇರಳ ಚಿಕನ್‌ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಗಾನಿಕ್‌ ಕೇರಳ ಚಿಕನ್‌ ಯೋಜನೆ ಆರಂಭಿಸಲು ತೀರ್ಮಾನಿಸಿದರೂ, ಎರ್ನಾಕುಳಂ ಜಿಲ್ಲೆಯಲ್ಲಿ ಮಾತ್ರ ಅದರ ಪ್ರಾಥಮಿಕ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ.

ತ.ನಾಡು ಕೋಳಿ ಮಾಫಿಯಾ: ಕೇರಳ ಚಿಕನ್‌ ಯೋಜನೆ ಜಾರಿಯಾಗುವ ಮೂಲಕ ಭಾರಿ ಬೇಡಿಕೆ ಬರುವುದರಿಂದ ಆ ಯೋಜನೆಯನ್ನು ಬುಡಮೇಲುಗೊಳಿಸಲು ತಮಿಳುನಾಡಿನ ಕೋಳಿ ಮಾಫಿಯಾಗಳು ಪ್ರಯತ್ನಿಸುತ್ತಿವೆ. ಕುಟುಂಬಶ್ರೀ ಮೂಲಕ ಕೋಳಿ ಸಾಕಣೆ ಮತ್ತು ಅವರದ್ದೇ ಸ್ಟಾಲ್‌ಗಳ ಮೂಲಕ ವಿತರಿಸುವುದರಿಂದ ಗುಣಮಟ್ಟ ಮತ್ತು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರದ್ದರಿಂದ ಇದಕ್ಕೆ ಬೇಡಿಕೆಯೊಂದಿಗೆ ತಮಿಳುನಾಡಿನಿಂದ ಬರುವ ಮಾಂಸದ ಕೋಳಿಗೆ ಬೇಡಿಕೆ ಕಡಿಮೆಯಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ