ಆ್ಯಪ್ನಗರ

ಇಬ್ಬರು ಬಾಲಕಾರ್ಮಿಕರ ರಕ್ಷ ಣೆ

ವಿಶ್ವ ಬಾಲ ಕಾರ್ಮಿಕ ತಡೆ ದಿನಾಚರಣೆ ಅಂಗವಾಗಿ ಬಾಲ ಕಾರ್ಮಿಕ ತಡೆ ಕ್ರಿಯಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೊರ ರಾಜ್ಯದ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.

Vijaya Karnataka 14 Jun 2018, 5:00 am
ಕಾಸರಗೋಡು: ವಿಶ್ವ ಬಾಲ ಕಾರ್ಮಿಕ ತಡೆ ದಿನಾಚರಣೆ ಅಂಗವಾಗಿ ಬಾಲ ಕಾರ್ಮಿಕ ತಡೆ ಕ್ರಿಯಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೊರ ರಾಜ್ಯದ ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
Vijaya Karnataka Web child labour rescued
ಇಬ್ಬರು ಬಾಲಕಾರ್ಮಿಕರ ರಕ್ಷ ಣೆ


ಸೀತಾಂಗೋಳಿ ಕಿನ್ಫ್ರಾ ಕೈಗಾರಿಕಾ ಪ್ರಾಂಗಣದಲ್ಲಿ ಚಪ್ಪಲಿ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನಿವಾಸಿಗಳ ಇಬ್ಬರು ಬಾಲಕರನ್ನು ರಕ್ಷಿಸಲಾಗಿದೆ.

ಜಿಲ್ಲೆಯಲ್ಲಿ ಬಾಲ ಕಾರ್ಮಿಕರು ನಾನಾ ಕಡೆಯಲ್ಲಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷ ತೆಯಲ್ಲಿ ನಡೆದ ಕ್ರಿಯಾಪಡೆ ಸಭೆಯಲ್ಲಿ ಬಾಲ ಕಾರ್ಮಿಕ ತಡೆ ಕ್ರಿಯಾಪಡೆ ರಚಿಸಲಾಗಿದೆ.

ಜಿಲ್ಲಾ ಶಿಶುಸಂರಕ್ಷ ಣಾ ಘಟಕದ ಅಧಿಕಾರಿ ಪಿ. ಬಿಜು, ಜಿಲ್ಲಾ ಕಾರ್ಮಿಕ ಅಧಿಕಾರಿ ಶಾಜು ಕೆ.ಎ., ಸಹಾಯಕ ಲೇಬರ್‌ ಅಧಿಕಾರಿ ಜಯಕೃಷ್ಣನ್‌, ಶಿಶುಸಂರಕ್ಷ ಣಾ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಲ್‌, ಚೈಲ್ಡ್‌ಲೈನ್‌ ನೋಡಲ್‌ ಸಹ ಸಂಯೋಜನಾಧಿಕಾರಿ ಅನೀಶ್‌ ಜೋಸ್‌, ಡಿಸಿಆರ್‌ಬಿ ಸಬ್‌ ಇನ್ಸ್‌ಪೆಕ್ಟರ್‌ ಅಬ್ದುಲ್‌ ರಝಾಕ್‌, ಬಚ್ಚಪ್ಪನ್‌ ಬಚಾವೋ ಆಂದೋಲನದ ಸಂಯೋಜಕ ಇಲ್ಯಾಸ್‌ ಪಿ. ಸಕಾರಿಯ, ಡಿಸಿಪಿಯು ಲೀಗಲ್‌ ಕಂ ಪ್ರೊಬೆಷನ್‌ ಅಧಿಕಾರಿ ಶ್ರೀಜಿತ್‌ ಎ., ಡಿಸಿಪಿಯು ಔಟ್‌ರಿಚ್‌ ವರ್ಕರ್‌ ಸುನಿತಾ ಮತ್ತಿತರರು ತಪಾಸಣೆಗೆ ನೇತೃತ್ವ ನೀಡಿದರು.

ಕಾಸರಗೋಡು ಚೈಲ್‌ ವೆಲ್ಫೇರ್‌ ಸಮಿತಿ ಮುಂಭಾಗ ಹಾಜರುಪಡಿಸಿದ ಮಕ್ಕಳನ್ನು ಪರವನಡ್ಕ ಸರಕಾರಿ ಶಿಶು ಮಂದಿರದಲ್ಲಿರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ