ಆ್ಯಪ್ನಗರ

ಸಹಕಾರಿ ವಲಯದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು: ಕರಿಕ್ಕುಳಂ

ಕೇರಳ ಬ್ಯಾಂಕ್‌ ರಚನೆ ನಡೆಯದು ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಸಹಕಾರಿ ವಲಯದ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಸಹಕಾರಿ ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಕರಿಕ್ಕುಳಂ ಕೃಷ್ಣನ್‌ ಪಿಳ್ಳೆ ಆಗ್ರಹಿಸಿದರು.

Vijaya Karnataka 1 Jun 2018, 5:00 am
ಕಾಸರಗೋಡು: ಕೇರಳ ಬ್ಯಾಂಕ್‌ ರಚನೆ ನಡೆಯದು ಎಂದು ಮನವರಿಕೆಯಾದ ಹಿನ್ನೆಲೆಯಲ್ಲಿ ಸಹಕಾರಿ ವಲಯದ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಸಹಕಾರಿ ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಕರಿಕ್ಕುಳಂ ಕೃಷ್ಣನ್‌ ಪಿಳ್ಳೆ ಆಗ್ರಹಿಸಿದರು.
Vijaya Karnataka Web news/kasaragod/cooperative
ಸಹಕಾರಿ ವಲಯದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು: ಕರಿಕ್ಕುಳಂ


ಸಹಕಾರಿ ಸಂಸ್ಥೆಗಳನ್ನು ಬುಡಮೇಲುಗೊಳಿಸುವ ನೀತಿಗಳಿಂದ ಕೇರಳ ಸರಕಾರ ಹಿಂಜರಿಯಬೇಕು ಎಂದು ಆಗ್ರಹಿಸಿ ಸಹಕಾರಿ ಪ್ರಜಾಪ್ರಭುತ್ವ ವೇದಿಕೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಉಪ ನೋಂದಣಾಧಿಕಾರಿ ಕಚೇರಿಗೆ ನಡೆಸಿದ ಜಾಥಾ ಹಾಗೂ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಧ್ವಂಸಗೊಂಡ ಪರಿಣಾಮ ಸಹಕಾರಿ ವಲಯ ತೀರ ಗಂಭೀರ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವಂತಾಗಿದೆ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾಜ್ಯ-ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಅಧಿಕಾರತ್ವದ ಆಡಳಿತ ಮುಂದುವರಿಯುತ್ತಿದೆ. ಅದರ ಫಲವಾಗಿ ಈ ಸಂಸ್ಥೆಗಳ ಸಾಲ ವಿತರಣೆ ಮೊದಲಾದ ವ್ಯವಹಾರಗಳು ಸ್ಥಗಿತಗೊಂಡಿವೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಬರುವ ಪ್ರಾಥಮಿಕ ಸಂಘಗಳ ಹಣ ವಿನಿಯೋಗಿಸದೆ ಮೂಲೆಗುಂಪಾಗಿದೆ. ಪರಿಣಾಮ ನಷ್ಟ ಎದುರಿಸುವಂತಾಗಿದೆ.

ಯುಡಿಎಫ್‌ ನಿಯಂತ್ರಣದಲ್ಲಿರುವ ಸಂಘಗಳ ಸಾಧಾರಣ ಗತಿಯಲ್ಲಿ ಪರಿಗಣಿಸಬೇಕಾದ ಅರ್ಜಿಗಳ ಬಗ್ಗೆ ಕೂಡ ತೀರ್ಮಾನ ಕೈಗೊಳ್ಳದೆ ವಿಳಂಬ ಮಾಡಲಾಗುತ್ತಿದೆ. ಯುಡಿಎಫ್‌ ನಿಯಂತ್ರಣದಲ್ಲಿರುವ ಸಂಘಗಳನ್ನು ಪ್ರಜಾಪ್ರಭುತ್ವ ವಿರೋಧಿ ಮಾರ್ಗದ ಮೂಲಕ ಸಿಪಿಎಂನ ಕೈಮುಷ್ಠಿಯೊಳಗಿರಿಸಲು ಸಹಕಾರಿ ವಲಯದ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದಾಗಿ ಕರಿಕ್ಕುಳ ಆರೋಪಿಸಿದರು.

ಜಿಲ್ಲಾ ಅಧ್ಯಕ್ಷ ಕೆ. ನೀಲಕಂಠನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್‌, ಡಿಸಿಸಿ ಮಾಜಿ ಅಧ್ಯಕ್ಷ ಪಿ. ಗಂಗಾಧರನ್‌ ಮಾಯರ್‌, ಜಿಲ್ಲಾ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ವೊರ್ಕೂಡ್ಲು, ಕೆಸಿಇಎಫ್‌ ರಾಜ್ಯ ಕೋಶಾಧಿಕಾರಿ ಪಿ.ಕೆ. ವಿನಯ ಕುಮಾರ್‌, ಸಹಕಾರಿ ಪ್ರಜಾಪ್ರಭುತ್ವ ವೇದಿಕೆ ಜಿಲ್ಲಾ ಸಂಚಾಲಕ ಎಂ. ಅಸಿನಾರ್‌, ಕೆಸಿಇಎಫ್‌ ಜಿಲ್ಲಾಧ್ಯಕ್ಷ ಪಿ.ಕೆ. ವಿನೋದ್‌ ಕುಮಾರ್‌ ಮತ್ತಿತರರು ಮಾತನಾಡಿದರು.

ಪ್ರತಿಭಟನಾ ಜಾಥಾಕ್ಕೆ ಎಂ. ಕುಞಂಬು ನಂಬಿಯಾರ್‌, ಕೆ.ವಿ. ಸುಧಾಕರನ್‌, ಎ. ಗೋವಿಂದನ್‌ ನಾಯರ್‌, ಪಿ.ಕೆ. ಫೈಝಲ್‌, ಕರುಣ್‌ ತಾಪ, ಸೋಮಶೇಖರ ಶೇಣಿ, ವಿ.ಆರ್‌. ವಿದ್ಯಾಸಾಗರ್‌, ಕಲ್ಲಗೆ ಚಂದ್ರಶೇಖರ ರಾವ್‌, ರಾಧಾಕೃಷ್ಣನ್‌ ನಾಯರ್‌, ಅಚ್ಚೇರಿ ಬಾಲಕೃಷ್ಣನ್‌, ಇ. ರುದ್ರಕುಮಾರಿ, ಕೆ. ಶಶಿ ಮತ್ತಿತರರು ನೇತೃತ್ವ ನೀಡಿದರು.

ಅಪಾರ ನಷ್ಟದೊಂದಿಗೆ ಕಾರ್ಯಾಚರಿಸುತ್ತಿರುವ ಸಂಸ್ಥೆಗಳಿಗೆ ಸಹಕಾರಿ ಸಂಸ್ಥೆಗಳ ಫಂಡ್‌ನ್ನು ಬಲವಂತವಾಗಿ ಹಸ್ತಾಂತರಿಸಲು ನಡೆಸುವ ಪ್ರಯತ್ನವನ್ನು ಕೊನೆಗೊಳಿಸಬೇಕು, ಪ್ರಾಥಮಿಕ ಸಾಲ ಸಂಘಗಳನ್ನು ಉದ್ದರಿಸಲು ಎಂಬ ಸುಳ್ಳಿನೊಂದಿಗೆ ಕೇರಳ ಬ್ಯಾಂಕ್‌ ರಚಿಸುವ ಮರೆಯಲ್ಲಿ ಹಲವು ಸಂಘಗಳನ್ನು ಸಹಕಾರಿ ವಲಯದ ಮುಖ್ಯ ವಾಹಿನಿಯಿಂದ ಹೊರಗಿಡುವ ಕ್ರಮವನ್ನು ಬಿಡÜಬೇಕು, ಪ್ರಾಥಮಿಕ ಸಾಲ ಸಂಘಗಳಲ್ಲಿ ಸಾರ್ವಜನಿಕ ಸಾಫ್ಟ್‌ವೇರ್‌ ಸ್ಥಾಪಿಸುವ ಗುತ್ತಿಗೆಯನ್ನು ಕಾರ್ಯದಕ್ಷವಾಗಿಲ್ಲದ ಹೊರ ರಾಜ್ಯ ಕಂಪನಿಗಳಿಗೆ ನೀಡುವ ಕ್ರಮವನ್ನು ಕೈಬಿಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾಥಾ ಹಾಗೂ ಧರಣಿ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ