ಆ್ಯಪ್ನಗರ

ನೃತ್ಯ, ಸಂಗೀತಕ್ಕೆ ಬೇರ್ಪಡಿಸಲಾಗದ ಬಂಧ: ವೆಂಕಟಲಕ್ಷ್ಮಿ

ನೃತ್ಯ ಮತ್ತು ಸಂಗೀತಕ್ಕೆ ಬೇರ್ಪಡಿಸಲಾಗದ ಸಂಬಂಧವಿದೆ. ಒಂದು ಇನ್ನೊಂದನ್ನು ಪರಿಪೂರ್ಣವಾಗಿಸುತ್ತದೆ. ನೃತ್ಯ ಎಂದರೆ ಲಯಬದ್ಧವಾದ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ.

Vijaya Karnataka 8 Jan 2019, 5:00 am
ಬದಿಯಡ್ಕ: ನೃತ್ಯ ಮತ್ತು ಸಂಗೀತಕ್ಕೆ ಬೇರ್ಪಡಿಸಲಾಗದ ಸಂಬಂಧವಿದೆ. ಒಂದು ಇನ್ನೊಂದನ್ನು ಪರಿಪೂರ್ಣವಾಗಿಸುತ್ತದೆ. ನೃತ್ಯ ಎಂದರೆ ಲಯಬದ್ಧವಾದ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಈ ಪವಿತ್ರವಾದ ಶಾಸ್ತ್ರೀಯ ಕಲೆಯ ಕುರಿತಾದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುವುದೆಂದರೆ ಮಹತ್ವಪೂರ್ಣವಾದ ಒಂದು ಅನುಭವವನ್ನು ಕಲಾಭಿಮಾನಿಗಳಿಗೆ ಉಣಬಡಿಸಿದಂತೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು.
Vijaya Karnataka Web dance music is very close
ನೃತ್ಯ, ಸಂಗೀತಕ್ಕೆ ಬೇರ್ಪಡಿಸಲಾಗದ ಬಂಧ: ವೆಂಕಟಲಕ್ಷ್ಮಿ


ವಿದೂಷಿ ಯೋಗೀಶ್ವರೀ ಜಯಪ್ರಕಾಶ್‌ ನಿರ್ದೇಶನದ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯಲ್ಲಿ ಆಯೋಜಿಸಲಾದ ನೃತ್ಯ ಸಂಗೀತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಉತ್ತಮ ಶಿಕ್ಷಣ ನೀಡಿ ಬೆಳೆಸುವುದರೊಂದಿಗೆ ಜಗತ್ತಿಗೆ ವಿಶೇಷವಾಗಿ ಪರಿಚಯಿಸಲು ಭಾರತೀಯ ಸಾಂಸ್ಕೃತಿಕ ಕಲೆಗಳನ್ನು ಮನನ ಮಾಡಿಸುವುದೂ ಅಷ್ಟೇ ಮುಖ್ಯ. ಜೀವನದಲ್ಲಿ ಹಿರಿಯರಿಗೆ ಗೌರವ ಕೊಡುವ ಮತ್ತು ಕಿರಿಯರನ್ನು ಕೈಹಿಡಿದು ಮುನ್ನಡೆಸುವ ವಿಶಾಲ ಮನೋಭಾವ ಬೆಳೆಸಬೇಕು. ಇಲ್ಲಿ ನೃತ್ಯದ ಮೂಲಕ ಯೋಗೀಶ್ವರಿಯವರು ಭಾರತಿಯ ಸಂಸ್ಕೃತಿ ಹಾಗೂ ಶಿಸ್ತುಬದ್ಧ ಹಾದಿಯನ್ನು ತೋರುವ ಕಲೆಯನ್ನು ದಾರೆ ಎರೆಯುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಪ್ರೊ. ಶ್ರೀನಾಥ್‌ ಅವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬದಿಯಡ್ಕ ಪಂಚಾಯಿತಿ ಮಾಜಿ ಸದಸ್ಯ ಮಹೇಶ ವಳಕುಂಜ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್‌ ನಗುಮುಗಂ, ರೇಷ್ಮಾ ಸುನಿಲ್‌ ನಾರಂಪಾಡಿ ಶುಭಹಾರೈಸಿದರು.

ವಿದೂಷಿ ಯೋಗೀಶ್ವರಿ ಜಯಪ್ರಕಾಶ್‌ ಅವರ ನಿರ್ದೇಶನದಲ್ಲಿ ಖ್ಯಾತ ಗಾಯಕ ವಸಂತ ಗೋಸಾಡ ಕಾರ್ಯಗಾರದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ನಾಟ್ಯಾಲಯದ ವಿದ್ಯಾರ್ಥಿಗಳು ಹಾಗೂ ರಕ್ಷ ಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೂಪಾ ಮತ್ತು ಹರ್ಷಿತ ಪ್ರಾರ್ಥನೆ ಹಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ