ಆ್ಯಪ್ನಗರ

ಎಂಡೋಸಲ್ಫಾನ್‌: ಹೋರಾಟ ಪುನಾರಂಭಿಸಲು ಹೋರಾಟ ಸಮಿತಿ ನಿರ್ಧಾರ

ಎಂಡೋಸಲ್ಫಾನ್‌ ಸಂತ್ರಸ್ತರ ತಾಯಿಯಂದಿರು ಹಾಗೂ ಮಕ್ಕಳು ತಿರುವನಂತಪುರ ಸೆಕ್ರೆಟರಿಯೇಟ್‌ ಮುಂಭಾಗದಲ್ಲಿ ಕಳೆದ ಜ. 30ರಿಂದ ನಡೆಸಿದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ದಯಾಬಾಯಿ ಅವರ ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹ ಹಿನ್ನ್ನೆಲೆಯಲ್ಲಿ ಮುಖ್ಯಮಂತ್ರಿ ಜತೆ ನಡೆಸಿದ ಸಂಧಾನ ಪ್ರಕ್ರಿಯೆಯ ಪ್ರಧಾನ ಬೇಡಿಕೆ ಬುಡಮೇಲುಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಹೋರಾಟ ಪುನರಾರಂಭಿಸುವುದಾಗಿ ಎಂಡೋಸಲ್ಫಾನ್‌ ಸಂತ್ರಸ್ತ ಜನಪರ ಹೋರಾಟ ನೇತಾರರು ತಿಳಿಸಿದ್ದಾರೆ.

Vijaya Karnataka 11 Mar 2019, 5:00 am
ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರ ತಾಯಿಯಂದಿರು ಹಾಗೂ ಮಕ್ಕಳು ತಿರುವನಂತಪುರ ಸೆಕ್ರೆಟರಿಯೇಟ್‌ ಮುಂಭಾಗದಲ್ಲಿ ಕಳೆದ ಜ. 30ರಿಂದ ನಡೆಸಿದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ದಯಾಬಾಯಿ ಅವರ ಅನಿರ್ದಿಷ್ಟಾವಧಿ ನಿರಾಹಾರ ಸತ್ಯಾಗ್ರಹ ಹಿನ್ನ್ನೆಲೆಯಲ್ಲಿ ಮುಖ್ಯಮಂತ್ರಿ ಜತೆ ನಡೆಸಿದ ಸಂಧಾನ ಪ್ರಕ್ರಿಯೆಯ ಪ್ರಧಾನ ಬೇಡಿಕೆ ಬುಡಮೇಲುಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಹೋರಾಟ ಪುನರಾರಂಭಿಸುವುದಾಗಿ ಎಂಡೋಸಲ್ಫಾನ್‌ ಸಂತ್ರಸ್ತ ಜನಪರ ಹೋರಾಟ ನೇತಾರರು ತಿಳಿಸಿದ್ದಾರೆ.
Vijaya Karnataka Web endosulphan again movement
ಎಂಡೋಸಲ್ಫಾನ್‌: ಹೋರಾಟ ಪುನಾರಂಭಿಸಲು ಹೋರಾಟ ಸಮಿತಿ ನಿರ್ಧಾರ


ಗಡಿ ಭಾಗಗಳು ಬಾಧಕವಾಗದಂತೆ ಅರ್ಹ ಎಲ್ಲ ಸಂತ್ರಸ್ತರನ್ನು ಸಂತ್ರಸ್ತರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂಬ ಸುಪ್ರಧಾನ ಬೇಡಿಕೆಯು ಸರಕಾರ ಹೊಸದಾಗಿ ಹೊರಡಿಸಿದ ಆದೇಶ ಮೂಲಕ ನಿರಾಕರಿಸಲ್ಪಟ್ಟಿದೆ.

ಮಾ. 2ರಂದು ಹೊರಡಿಸಿದ ಸರಕಾರದ ಆದೇಶದಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತ ಪ್ರದೇಶಗಳಿಂದ ಹೊರಗೆ ಹೋಗಿ ವಾಸವಿರುವವರನ್ನು ಮಾತ್ರ ಪರಿಗಣಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

2017ರಲ್ಲಿ ನಡೆದ ವೈದ್ಯಕೀಯ ಶಿಬಿರದ ಮೂಲಕ ಗುರುತಿಸಿದ 1905ರ ಮಂದಿಯಲ್ಲಿ 18 ವಯಸ್ಸಿಗಿಂತ ಕೆಳಗಿನ ಐನ್ನೂರರಷ್ಟು ಮಕ್ಕಳನ್ನು ಇನ್ನೊಂದು ತಪಾಸಣೆ ಇಲ್ಲದೆ ಪಟ್ಟಿಯಲ್ಲಿ ಸೇರಿಸಲು, ಉಳಿದವರನ್ನು ವೈದ್ಯಕೀಯ ವರದಿಯ ಆಧಾರದಲ್ಲಿ ಅರ್ಹರನ್ನು ಪಟ್ಟಿಯಲ್ಲಿ ಸೇರಿಸಲು ಮುಖ್ಯಮಂತ್ರಿಯೊಂದಿಗೆ ನಡೆಸಿದ ಚರ್ಚೆಯಲ್ಲಿ ತೀರ್ಮಾನಿಸಲಾಗಿದೆ.

ಆದರೆ 18 ವಯಸ್ಸಿಗಿಂತ ಕೆಳಗಿನ ಮಕ್ಕಳನ್ನು ಇನ್ನೊಂದು ವೈದ್ಯಕೀಯ ತಪಾಸಣೆಗೆ ವಿಧೇಯಗೊಳಿಸಲು ಹೇಳಿರುವುದರ ಮೂಲಕ ಸರಕಾರ ತೀರ್ಮಾನ ಉಲ್ಲಂಘನೆ ನಡೆಸಿದೆ.

2014ರಲ್ಲಿ 2016ರಲ್ಲಿ ತಾಯಿಯಂದಿರು ನಡೆಸಿದ ಪ್ರತಿಭಟನೆಯ ಕೊನೆಗೆ ಗಡಿ ನೋಡದೆ ಜಿಲ್ಲೆಯ ಅರ್ಹರಾದ ಎಲ್ಲ ಸಂತ್ರಸ್ತರನ್ನು ಪಟ್ಟಿಯಲ್ಲಿ ಸೇರಿಸಲಾಗುವುದು ಎಂಬ ತೀರ್ಮಾನಗಳು ಉಲ್ಲಂಘಿಸಲ್ಪಟ್ಟಿವೆ.

ಈ ಒಂದು ಪರಿಸ್ಥಿತಿಯಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರು ಮತ್ತೆ ಹೋರಾಟ ಆರಂಭಿಸಲು ತೀರ್ಮಾನಿಸಿವೆ. ಮೊದಲ ಹೆಜ್ಜೆ ಎಂಬ ನೆಲೆಯಲ್ಲಿ ಮಾ. 19ರಂದು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಲಾಗಿದೆ.

ಅಗತ್ಯ ಬಿದ್ದಲ್ಲಿ ತಿರುವನಂತಪುರ ಸೆಕ್ರೆಟರಿಯೇಟ್‌ ಮುಂಭಾಗದಲ್ಲಿ ತಾಯಿಯಂದಿರ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದೂ, ಅದರ ಮುನ್ನ ಸಂಬಂಧಪಟ್ಟವರು ಉಚಿತ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಎಂಡೋಸಲ್ಫಾನ್‌ ಸಂತ್ರಸ್ತ ಜನಪರ ಹೋರಾಟ ಸಮಿತಿ ಸಂಬಂಧಪಟ್ಟವರ ಆಗ್ರಹಿಸಿದೆ.

ಸಭೆಯಲ್ಲಿ ಮುನೀಸಾ ಅಂಬಲತ್ತರ ಅಧ್ಯಕ್ಷ ತೆ ವಹಿಸಿದ್ದರು. ಅಂಬಲತ್ತರ ಕುಂಞಿಕೃಷ್ಣನ್‌, ಕೆ. ಚಂದ್ರಾವತಿ, ಕೆ. ಕೊಟ್ಟನ್‌, ಟಿ. ಶೋಭನಾ, ಸಮೀರ ಪರಪ್ಪ, ಪ್ರೇಮಚಂದ್ರನ್‌, ಚೋಂಬಾಲ, ರಾಮಕೃಷ್ಣನ್‌ ವಾಣಿಯಂಪಾರೆ, ಪಿ. ಶೈನಿ, ಎಂ. ಸುಬೈದ, ಶಿವ ಕುಮಾರ್‌ ಎಣ್ಮಕಜೆ, ಅಬ್ದುಲ್‌ ಖಾದರ್‌ ಚಟ್ಟಂಚಾಲ್‌, ಬೆನ್ನಿ ಮಾಲಕ್ಕಲ್ಲ್‌, ಪಿ.ಜೆ. ಆ್ಯಂಟನಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ