ಆ್ಯಪ್ನಗರ

‘ಗೃಹ ಚೈತನ್ಯ’ ಯೋಜನೆಗೆ ಚಾಲನೆ

ಕೇರಳ ರಾಜ್ಯ ಸರಕಾರದ ಔಷಧಿ ಸಸ್ಯ ಮಂಡಳಿ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಶ್ರಯದಲ್ಲಿ ಜಿಲ್ಲೆಯ ಆಯ್ದ ಪಂಚಾಯಿತಿಗಳಲ್ಲಿ ಜಾರಿಗೊಳಿಸುವ 'ಮನೆಯೊಲ್ಲೊಂದು ಕಹಿ, ಕರಿಬೇವು ಗಿಡ ವಿತರಣೆ 'ಗೃಹ ಚೈತನ್ಯ' ಯೋಜನೆಗೆ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು.

Vijaya Karnataka 28 Jul 2018, 5:00 am
ಕಾಸಗೋಡು: ಕೇರಳ ರಾಜ್ಯ ಸರಕಾರದ ಔಷಧಿ ಸಸ್ಯ ಮಂಡಳಿ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಶ್ರಯದಲ್ಲಿ ಜಿಲ್ಲೆಯ ಆಯ್ದ ಪಂಚಾಯಿತಿಗಳಲ್ಲಿ ಜಾರಿಗೊಳಿಸುವ 'ಮನೆಯೊಲ್ಲೊಂದು ಕಹಿ, ಕರಿಬೇವು ಗಿಡ ವಿತರಣೆ 'ಗೃಹ ಚೈತನ್ಯ' ಯೋಜನೆಗೆ ಕಾಸರಗೋಡಿನಲ್ಲಿ ಚಾಲನೆ ನೀಡಲಾಯಿತು.
Vijaya Karnataka Web gruha chithanya
‘ಗೃಹ ಚೈತನ್ಯ’ ಯೋಜನೆಗೆ ಚಾಲನೆ


ಜಿಲ್ಲೆಯ ಕಾಞಂಗಾಡು, ಪರಪ್ಪ ಹಾಗೂ ನೀಲೇಶ್ವರ ಬ್ಲಾಕ್‌ಗಳ 18 ಗ್ರಾಪಂಗಳಲ್ಲಿ ಯೋಜನೆ ಜಾರಿಗೊಳಿಸುವುದು. ರಾಜ್ಯ ಔಷಧಿ ಸಸ್ಯ ಮಂಡಳಿ ಲಭ್ಯಗೊಳಿಸುವ ಕರಿಬೇವು ಹಾಗೂ ಕಹಿಬೇವು ಬೀಜಗಳನ್ನು ಜಿಲ್ಲೆಯ ಪಂಚಾಯಿತಿ ಮಟ್ಟದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಧೀನದ ನರ್ಸರಿಗಳಲ್ಲಿ ಸಸಿಗಳನ್ನು ಉತ್ಪಾದಿಸುವುದು. ಕೇರಳ ರಾಜ್ಯೋದಯ ದಿನದಂದು (ನ.1ರಂದು) ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳಲ್ಲಿ 1,16,058 ಮನೆಗಳಿಗೆ ತಲುಪಿಸಿ ನೆಡುವ ಮೂಲಕ ಗ್ರಾ.ಪಂ.ಗಳನ್ನು ಔಷಧಿ ಸಸ್ಯ ಗ್ರಾಮವನ್ನಾಗಿಸುವುದೇ ಯೋಜನೆಯ ಪ್ರಧಾನ ಗುರಿಯಾಗಿದೆ.

ಜಿಲ್ಲಾ ಮಟ್ಟದ ಕಾರ್ಯಾಗಾರ: ಯೋಜನೆ ಜಿಲ್ಲಾ ಮಟ್ಟದ ಕಾರ್ಯಾಗಾರ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆಯಿತು. ಆ.6ರಂದು ಪಂಚಾಯಿತಿ ಮಟ್ಟದ ಸಭೆಯ ಮೂಲಕ ಮುಂದಿನ ಯೋಜನೆಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಯಿತು.ನಾನಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ರು, ಕಾರ್ಯದರ್ಶಿಗಳು, ಕೃಷಿ ಅಧಿಕಾರಿಗಳು, ಬ್ಲಾಕ್‌ ಪ್ರೊಗ್ರಾಂ ಅಧಿಕಾರಿಗಳು, ಎನ್‌ಆರ್‌ಇಜಿ ಯೋಜನೆಯ ಎಂಜಿನಿಯರ್‌ಗಳು ಭಾಗವಹಿಸಿದ್ದರು.

ಈ ಯೋಜನೆಯ ನಿರ್ದೇಶಕ ಹಾಗೂ ಜಂಟಿ ಕಾರ್ಯಕ್ರಮ ಸಂಯೋಜಕ ಪಿ.ಕೆ.ದಿಲೀಪ್‌, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನರ್ಸರಿಯ ಕುರಿತು ಮಾಹಿತಿ ನೀಡಿದರು. ರಾಜ್ಯ ಔಷಧ ಸಸ್ಯ ಮಂಡಳಿ ಎಕ್ಸಿಕ್ಯೂಟಿವ್‌ ಸದಸ್ಯ ಕೆ.ವಿ.ಗೋವಿಂದನ್‌ ವಿಷಯ ಪ್ರಸ್ತಾಪಿಸಿದರು.

ಕಾಞಂಗಾಡು ಬ್ಲಾಕ್‌ ಪಂಚಾಯಿತಿ ಅಧ್ಯಕ್ಷ ಎಂ.ಗೌರಿ, ಕೃಷಿ ಉಪನಿರ್ದೇಶಕ ಎನ್‌.ಚಂದ್ರಶೇಖರನ್‌, ಪಂಚಾಯಿತಿ ಸಹಾಯಕ ನಿರ್ದೇಶಕ ಕಣ್ಣನ್‌ ನಾಯರ್‌, ಜಿಲ್ಲಾ ಕುಟುಂಬಶ್ರೀ ಮಿಷನ್‌ ಸಂಯೋಜಕ ಸುರೇಂದ್ರನ್‌, ಉಪನಿರ್ದೇಶಕ , ಅರ್ಥಶಾಸ್ತ್ರ ಹಾಗೂ ಅಂಕಿ-ಸಂಖ್ಯೆ ಶಾಸ್ತ್ರದ ರವೀಂದ್ರನ್‌ ಪಾಲೇರಿ ಮುಂತಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ