Please enable javascript.ಏಕರೂಪದ ಮೀಸಲಾತಿ, ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಆಗ್ರಹ - handicape - Vijay Karnataka

ಏಕರೂಪದ ಮೀಸಲಾತಿ, ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಆಗ್ರಹ

ವಿಕ ಸುದ್ದಿಲೋಕ 29 Dec 2015, 6:22 pm
Subscribe

ಸರಕಾರಿ ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ನೀಡಬೇಕು ಹಾಗೂ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕೆಂಬ ಪ್ರಧಾನ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶೇಷ ಚೇತನರ ಒಕ್ಕೂಟ ಪ್ರತಿಭಟನೆ ಸಿದ್ಧತೆ ನಡೆಸಿದೆ.

news/kasaragod/handicape
ಏಕರೂಪದ ಮೀಸಲಾತಿ, ಪ್ರತ್ಯೇಕ ಇಲಾಖೆ ಸ್ಥಾಪನೆಗೆ ಆಗ್ರಹ
ಕಾಸರಗೋಡು: ಸರಕಾರಿ ಉದ್ಯೋಗದಲ್ಲಿ ಶೇ.3ರಷ್ಟು ಮೀಸಲಾತಿ ನೀಡಬೇಕು ಹಾಗೂ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕೆಂಬ ಪ್ರಧಾನ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶೇಷ ಚೇತನರ ಒಕ್ಕೂಟ ಪ್ರತಿಭಟನೆ ಸಿದ್ಧತೆ ನಡೆಸಿದೆ.
ಸರಕಾರಿ ಉದ್ಯೋಗದಲ್ಲಿ ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ನೀಡುವಲ್ಲಿ ಜಾತಿ ಮೀಸಲಾತಿ ತೆಗೆದು ಹಾಕಿ ಏಕ ರೂಪದ ಮೀಸಲಾತಿ ನೀಡಬೇಕು, ಅಲ್ಲದೇ
ವಿಕಲಚೇತನರಿಗಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸಬೇ ಕೆನ್ನುವುದು ವಿಶೇಷಚೇತನರ ಒಕ್ಕೂಟದ ಪ್ರಧಾನ ಬೇಡಿಕೆಯಾಗಿದೆ.

ಅನುಷ್ಠಾನ ಇಲ್ಲ: 1995ರಲ್ಲಿ ವಿಶೇಷಚೇತನರ ಸಂರಕ್ಷಣಾ ಕಾನೂನು ರಾಜ್ಯದಲ್ಲಿ ಜಾರಿಗೆ ಬಂತು. ಕೇಂದ್ರ ಸರಕಾರವು ಭಾರತದ ಮೂರುವರೆ ಕೋಟಿಯಷ್ಟು ವಿಶೇಷಚೇತನರಿಗಾಗಿ ಜಾರಿಗೊಳಿಸಿದ ಎಲ್ಲ ಯೋಜನೆಗಳು ಅರ್ಧದಲ್ಲಿಯೇ ಉಳಿದುಕೊಂಡಿದೆ. 20 ಕೋಟಿ ರೂ. ಯೋಜನೆ ಮಂಜೂರಾದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಅನುಷ್ಠಾನಗೊಳಿಸಲು ತಯಾರಿಲ್ಲ ಎನ್ನುವುದು ಒಕ್ಕೂಟದ ಪ್ರಧಾನ ಆರೋಪವಾಗಿದೆ.
ಅಧಿಕಾರಗಳ ಅನಾಸ್ಥೆಯಿಂದಾಗಿ ಯೋಜನೆಗಳು ಜಾರಿಯಾಗದೇ ಸಂಬಂಧಪಟ್ಟ ಹಲವು ಕಡತಗಳು ಹಾಗೆಯೇ ಉಳಿದುಕೊಂಡಿದೆ ಎಂದು ಒಕ್ಕೂಟ ಆಪಾದಿಸಿದೆ.
ಗುರುತು ಚೀಟಿ: ರಾಜ್ಯದಲ್ಲಿ 15 ಲಕ್ಷದಷ್ಟು ವಿಶೇಷಚೇತನರಿಗೆ ವೈದ್ಯಕೀಯ ಮಂಡಳಿ ಹಾಗೂ ಸಾಮಾಜಿಕ ನ್ಯಾಯ ಇಲಾಖೆ ಗುರುತಿನ ಚೀಟಿ ನೀಡಿದರೂ ಹಲವು ಕಚೇರಿಗಳಿಂದ ಇದಕ್ಕೆ ಸೂಕ್ತ ಅಂಗೀಕಾರ ಲಭಿಸಿಲ್ಲ. ಕೆಲಸ ಮಾಡಲು ಸಾಧ್ಯವಿರುವ ಹಾಗೂ ಸಾಧ್ಯವಾಗದ ವಿಶೇಷಚೇತನರಿಗೆ ಸರಕಾರ ಇದೀಗ 800 ಹಾಗೂ 1100 ರೂ. ಪ್ರತಿ ತಿಂಗಳು ಪಿಂಚಣಿ ನೀಡುತ್ತಿದ್ದರೂ ನಿತ್ಯೋಪಯೋಗಿ ವಸ್ತಗಳ ಬೆಲೆಯೇರಿಕೆಯಿಂದಾಗಿ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. ಅದ್ದರಿಂದ ಪಿಂಚಣಿಯನ್ನು 3000 ರೂ.ಗೆ ಏರಿಸಿ ವಿಶೇಷಚೇತನರನ್ನು ರಕ್ಷಿಸಬೇಕೆಂಬುದು ಒಕ್ಕೂಟ ಆಗ್ರಹಿಸಿದೆ.
ಉದ್ಯೋಗ ಇಲ್ಲ: ಸರಕಾರಿ ವಲಯದಲ್ಲಿ ಮೀಸಲಾತಿ ನೀಡಿದರೂ ಇದೀಗ ರಾಜ್ಯದಲ್ಲಿ 57000 ಖಾಲಿ ಹುದ್ದೆ ಗಳನ್ನು ಭರ್ತಿಯಾಗದೆ ಹಾಗೆಯೇ ಉಳಿದುಕೊಂಡಿದೆ.

ನ್ಯಾಯಾಲಯದ ಆದೇಶವಿದ್ದರೂ ಉದ್ಯೋಗ ಲಭಿ ಸುತ್ತಿಲ್ಲ. ಸಹಕಾರಿ ಬ್ಯಾಂಕ್‌ನಲ್ಲಿ ಒಂದು ಹುದ್ದೆ ವಿಶೇಷ ಚೇತನರಿಗೆ ನಿಗದಿಪಡಿಸಿದರೂ ಅದನ್ನು ಸಹ ಭರ್ತಿಗೊ ಳಿಸಲು ತಯಾರಾಗುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಶೇಷಚೇತನರ ಹೆಸರಲ್ಲಿ ರಾಜ್ಯದಲ್ಲಿ ಹಲವು ವಂಚನೆ ಪ್ರಕರಣಗಳು ನಡೆಯುತ್ತಿದೆ. ಹಲವು ಜಾತಿಯಲ್ಲಿದ್ದವರಿಗೆ ಹಲವು ರೀತಿಯ ಮೀಸಲಾತಿ ನೀಡುವುದಾಗಿದೆ. ಅದನ್ನೆಲ್ಲ ಏಕೀಕರಿಸಿ ವಿಕಲಚೇತನ ರಿಗೆ ಒಂದೇ ರೀತಿಯ ಪಿಂಚಣಿ, ಮೀಸಲಾತಿ ನೀಡ ಬೇಕು ಎಂದು ಒಕ್ಕೂಟ ತಿಳಿಸಿದೆ.
ರೈಲಿನಲ್ಲಿ ವಿಶೇಷಚೇತನರಿಗಾಗಿ ಪ್ರತ್ಯೇಕ ಬೋಗಿ ನೀಡಿದರೂ ಕಣ್ಣು ಕಾಣದ ಪ್ರಯಾಣಿಕರು ಲಭಿಸದೆ ಪರದಾಡಬೇಕಾಗಿದೆ. ಇಂತಹ ಕೋಚ್‌ಗಳಲ್ಲಿ ಇತರ ಸಾಮಾನ್ಯ ಜನರು ಪ್ರಯಾಣಿಸುವ ಅವಸ್ಥೆಯೂ ಇದೆ. ಕೆಲವು ಬಸ್‌ಗಳಲ್ಲಿ ಸೀಟುಗಳ ಮೀಸಲಾತಿಯಿದ್ದರೂ ಅದು ವಿಶೇಷಚೇತನರಿಗೆ ಲಭ್ಯಸಿತ್ತಿಲ್ಲ. ವಿಶೇಷಚೇತನರ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಒಕ್ಕೂಟ ರಾಜ್ಯಾಧ್ಯಕ್ಷ ಕೆ.ವಿ.ಮೋಹನನ್ ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ