ಆ್ಯಪ್ನಗರ

ಜಿಲ್ಲೆಯಲ್ಲಿ ಮುಂದುವರಿದ ಮಳೆ

ಉತ್ತರ ಕೇರಳದಲ್ಲಿ ಮಳೆ ತೀವ್ರಗೊಳ್ಳುತ್ತಿದೆ. ಮೂರು ದಿನಗಳಿಂದ ಮುಂದುವರಿಯುತ್ತಿರುವ ಬಿರುಸಿನ ಮಳೆ ಭಾನುವಾರವೂ ಮುಂದುವರಿದಿದೆ.

Vijaya Karnataka 22 Jul 2019, 5:00 am
ಕಾಸರಗೋಡು: ಉತ್ತರ ಕೇರಳದಲ್ಲಿ ಮಳೆ ತೀವ್ರಗೊಳ್ಳುತ್ತಿದೆ. ಮೂರು ದಿನಗಳಿಂದ ಮುಂದುವರಿಯುತ್ತಿರುವ ಬಿರುಸಿನ ಮಳೆ ಭಾನುವಾರವೂ ಮುಂದುವರಿದಿದೆ. ನಿರಂತರ ಮಳೆಗೆ ಮಧೂರು ಕ್ಷೇತ್ರ ನೀರಿನಲ್ಲಿ ಮುಳುಗಿದೆ. ಮಧೂರು ಶ್ರೀಮದನಂತೇಶ್ವರ ಕ್ಷೇತ್ರದಲ್ಲಿ ಒಂದು ಮುಕ್ಕಾಲು ಮೀಟರ್‌ನಷ್ಟು ಎತ್ತರದಲ್ಲಿ ನೀರು ನುಗ್ಗಿದೆ. ನೀರು ಶ್ರೀಕೋವಿಲಿನ ಸಮೀಪದವರೆಗೆ ತಲುಪಿದೆ. ನಮಸ್ಕಾರ ಮಂಟಪ, ದೇವತಾ ಸ್ಥಾನಗಳು ಮೊದಲಾದವು ನೀರಿನಲ್ಲಿ ಮುಳುಗಿವೆ. ಐದು ಭಂಡಾರಗಳು ನೀರಿನಲ್ಲಿ ಮುಳುಗಿವೆ.
Vijaya Karnataka Web heavy rain in kasaragodu district
ಜಿಲ್ಲೆಯಲ್ಲಿ ಮುಂದುವರಿದ ಮಳೆ


ಬಿರುಸಿನ ಮಳೆ ಮುಮದುವರಿಯುತ್ತರುವ ಹಿನ್ನಲೆಯಲ್ಲಿ ಭಾನುವಾರ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು.

ಕಾಞಂಗಾಡು-ಮಡಿಕೈ ರಸ್ತೆ ತಾತ್ಕಾಲಿಕವಾಗಿ ಮುಚ್ಚುಗಡೆ: ರಾಜ್ಯದಲ್ಲಿ ಮಳೆ ತೀವ್ರಗೊಂಡಿದ್ದು ನಾನಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಗಳನ್ನು ಹೊರಡಿಸಲಾಗಿದೆ. ಬಿರುಸಿನ ಮಳೆ ಮುಮದುವರಿಯುತ್ತಿರುವ ಇಡುಕ್ಕಿಯಲ್ಲಿ ಹಾಗೂ ಕಾಸರಗೋಡಿನಲ್ಲಿ ರೆಡ್‌ ಅಲರ್ಟ್‌ ಮುಂದುವರಿಯುತ್ತಿದೆ. ಕಠಿಣ ಮಳೆಗೆ ಸಾಧ್ಯತೆ ಇರುವ ಮಲಪ್ಪುರ, ಕೋಝಿಕ್ಕೋಡು, ವಯನಾಡು, ಕಣ್ಣೂರು ಜಿಲ್ಲೆಗಳಲ್ಲಿ ಜು. 22ರಂದು ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ನಾನಾ ಜಿಲ್ಲೆಗಳಲ್ಲಿ ಜಾಗ್ರತೆ ನಿರ್ದೇಶನ ನೀಡಲಾಗಿದೆ.

ಪತ್ತನಂತಿಟ್ಟ, ಆಲಪ್ಪುಯ, ತ್ರಿಶ್ಯೂರು, ಮಲಪ್ಪುರ, ವಯನಾಡು, ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌, ಕೋಟ್ಟಯಂ, ಎರ್ನಾಕುಳಂ, ಕೋಝಿಕ್ಕೋಡು, ಕಣ್ಣೂರು ಜಿಲ್ಲೆಗಳಲ್ಲಿ ಓರೆಂಜ್‌ ಅಲರ್ಟ್‌ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ದಿನ 90 ಮಿಮೀ ಮಳೆಯಾಗಿದೆ. ಇದೇ ಸಂದರ್ಭ ಕಾಸರಗೋಡಿನ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ನೀರು ಆವೃತ್ತಗೊಂಡ ಮನೆಗಳ ಮಂದಿಗೆ ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷ ಣೆ ಒದಗಿಸಿದರು. ಜಿಲ್ಲೆಯಲ್ಲಿ ಕಾಞಂಗಾಡು-ಮಡಿಕೈ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚುಗಡೆಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಮಳೆ, ಗಾಳಿ ತೀವ್ರವಾಗಿ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಸಂದರ್ಭಗಳು ಉಂಟಾದರೆ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮೀಕರಣಗಳನ್ನು ನಡೆಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಕಾಸರಗೋಡು ಪಂಚಾಯಿತಿ ಸಹಾಯಕ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ಆಯಾ ಗ್ರಾಮಾಧಿಕಾರಿಗಳು, ಇತರ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮೀಕರಣಗಳನ್ನು ನಡೆಸಲು 24 ಗಂಟೆಗಳ ಕಾಲ ಜಾಗರೂಕತೆಯಿಂದ ಇರಬೇಕು ಎಂದಿ ನಿರ್ದೇಶಿಸಲಾಗಿದೆ.

ಇದಲ್ಲದೆ ಎಲ್ಲ ಪಂಚಾಯಿತಿ ಕಚೇರಿಗಳನ್ನು ಅಗತ್ಯ ಸಂದರ್ಭಗಳಲ್ಲಿ ತೆರೆದು ಕಾರ್ಯಾಚರಿಸಲಿರುವ ಕ್ರಮಗಳನ್ನು ಕೈಗೊಳ್ಳಲು ಆಯಾ ಪಂಚಾಯಿತಿ ವ್ಯಾಪ್ತಿಯ ದುರಂತ ಪರಿಹಾರ ಕಾರ್ಯಾಚರಣೆಗಳನ್ನು ಏಕೀಕರಿಸಲು ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

48 ಗಂಟೆಗಳಲ್ಲಿ ಭೀಕರ ಗಾಳಿ ಹಾಗೂ ಮಳೆ ಮುಮದುವರಿಯಲಿದೆ ಎಂಬ ಕೇಂದ್ರ ಹವಾಮಾನ ನಿರೀಕ್ಷ ಣಾ ಕೇಂದ್ರದ ಮುನ್ಸೂಚನೆಯನ್ನು ಪರಿಗಣಿಸಿ ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿ, ಗ್ರಾಮಕಚೇರಿಗಳು ಎಂಬಿವು ಜಾಗೃತಿ ಪಾಲಿಸಬೇಕು ಎಂದು ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ