ಆ್ಯಪ್ನಗರ

ಗಾಳಿ ಸಹಿತ ಭಾರಿ ಮಳೆ

ಜಿಲ್ಲೆಯಾದ್ಯಂತ ಶುಕ್ರವಾರ ಸುರಿದ ಗಾಳಿಯಂದ ಕೂಡಿದ ಭಾರಿ ಮಳೆಯಿಂದಾಗಿ ನಾನಾ ಕಡೆ ನಾಶ ನಷ್ಟ ಉಂಟಾಗಿದೆ.

Vijaya Karnataka 26 Oct 2019, 5:00 am
ಕಾಸರಗೋಡು: ಜಿಲ್ಲೆಯಾದ್ಯಂತ ಶುಕ್ರವಾರ ಸುರಿದ ಗಾಳಿಯಂದ ಕೂಡಿದ ಭಾರಿ ಮಳೆಯಿಂದಾಗಿ ನಾನಾ ಕಡೆ ನಾಶ ನಷ್ಟ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡು ರಸ್ತೆಯ ಬದಿಯಲ್ಲಿನಿಲ್ಲಿಸಿದ ಟೆಂಪೋ ಮೇಲೆ ಬೃಹತ್‌ ಮರವೊಂದು ಕುಸಿದು ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮರ ಬಿದ್ದು ಉಂಟಾದ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿವಾಹನ ಸಂಚಾರ ಸ್ಥಗಿತಗೊಂಡಿತ್ತು.
Vijaya Karnataka Web heavy rain wind
ಗಾಳಿ ಸಹಿತ ಭಾರಿ ಮಳೆ


ಜಿಲ್ಲೆಯ ನಾನಾ ಕಡೆ ಮನೆಗಳಿಗೆ, ಕಟ್ಟಡಗಳಿಗೆ ಹಾನಿಯಾಗಿದೆ. ಹಲವು ಕಡೆ ವಿದ್ಯುತ್‌ ಕಂಬಗಳು ಕುಸಿದಿವೆ.

ಶುಕ್ರವಾರ ಮಧ್ಯಾಹ್ನ ಕರದಂಕ್ಕಾಡು ರಾಷ್ಟ್ರೀಯ ಹೆದ್ದಾರಿ ಹಾಗೂ ಮಧೂರು ರಸ್ತೆಯಲ್ಲಿಬೃಹತ್‌ ಮರವೊಂದು ಸಮೀಪದಲ್ಲಿನಿಲ್ಲಿಸಿದ ಟೆಂಪೋ ಮೇಲೆ ಬಿದ್ದು ಸಂಪೂರ್ಣವಾಗಿ ಹಾನಿಗೊಂಡಿದೆ. ಟೆಂಪೋದಲ್ಲಿದ್ದ ಚಾಲಕ ಸಣ್ಣ ಪುಟ್ಟಗಾಯಗಳೊಂದಿಗೆ ಪಾರಾಗಿದ್ದಾರೆ.

ಟೆಂಪೋ ಮೇಲೆ ಮರ ಬಿದ್ದ ಕೂಡಲೇ ಅಲ್ಲಿಯೇ ಸಮೀಪದಲ್ಲಿದ್ದವರು ಚಾಲಕನನ್ನು ಬಾಗಿಲು ಮೂಲಕ ಹೊರ ತೆಗೆದಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೂಡಲೇ ಅಗ್ನಿಶಾಮಕ ದಳ, ಪೊಲೀಸರು, ಬಿಎಂಎಸ್‌ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಮರವನ್ನು ತೆರೆವುಗೊಳಿಸಲು ಸಹಕರಿಸಿದರು. ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದಾಗಿ ಹೆದ್ದಾರಿಯಲ್ಲಿಸಂಪೂರ್ಣವಾಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರವನ್ನು ತೆರೆವುಗೊಳಿಸಿದ ಬಳಿಕವಷ್ಟೇ ವಾಹನ ಸಂಚಾರ ಆರಂಭಗೊಂಡಿತು. ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಂಡ ಕಾರಣ ನಗರದ ಎಲ್ಲರಸ್ತೆಗಳಲ್ಲೂವಾಹನ ದಟ್ಟಣೆ ಕಂಡು ಬಂದಿತ್ತು.

ಅದೇ ರೀತಿ ಮಳೆಯಿಂದಾಗಿ ಕಾಸರಗೋಡು ಜನರಲ್‌ ಆಸ್ಪತ್ರೆಯ ಆವರಣದೊಳಗೆ ಕಟ್ಟಡದ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಬಿದ್ದ ಮರವನ್ನು ತೆರವುಗೊಳಿಸಿದರು.

ಅದೇ ಸಂದರ್ಭದಲ್ಲಿಶುಕ್ರವಾರ ಹೆದ್ದಾರಿ ಬದಿಯಲ್ಲಿನಿಲ್ಲಿಸಿದ ಇನ್ನೊಂದು ಟೆಂಪೋ ಮೇಲೆ ತೆಂಗಿನ ಮರ ಕುಸಿದು ಬಿದ್ದಿದೆ. ಇದರಿಂದ ಟೆಂಪೋ ಭಾಗಶಃ ಹಾನಿಯಾಗಿದೆ.

ತೀರದಲ್ಲಿಕಡಲ್ಕೊರೆತ: ಜಿಲ್ಲೆಯ ತೀರ ಪ್ರದೇಶದಲ್ಲಿವ್ಯಾಪಕ ಕಡಲ್ಕೊರೆತ ಉಂಟಾಗಿದೆ. ಇದರಿಂದ ಕರಾವಳಿ ತೀರದಲ್ಲಿಭೀತಿ ಸೃಷ್ಟಿಯಾಗಿದೆ. ಜಿಲ್ಲೆಯ ತೆಕ್ಕಟ್ಟಪುರಂ, ಕಾಞಂಗಾಡು ಕಡಪ್ಪುರ, ಅಜನೂರು, ಬಲ್ಲ, ಮೀನಾಪೀಸ್‌, ಚೆಂಬರಿಕ ಮುಂತಾದ ಕಡೆ ವ್ಯಾಪಕ ಕಡಲ್ಕೊರೆತ ಉಂಟಾಗಿದೆ. ತೈಕಟ್ಟಪುರಂ ತೀರದಲ್ಲಿನಡೆದ ಕಡಲ್ಕೊರೆತದಿಂದಾಗಿ ತಡೆಗೋಡೆ ಸಮುದ್ರಪಾಲಾಗಿದೆ.

ತೀರ ಪ್ರದೇಶಗಳಲ್ಲಿರುವ ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಇನ್ನು ಕಡಲ್ಕೊರೆತ ಮುಂದುವರಿದರೆ ತೀರದಲ್ಲಿಮನೆಗಳು ಸಮುದ್ರಪಾಲಾಗುವ ಭೀತಿ ತಲೆದೋರಿದೆ. ಅಲ್ಲದೆ ತೀರ ಪ್ರದೇಶಗಳಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ