ಆ್ಯಪ್ನಗರ

ಮಾನವೀಯ ಸಮಾಜ ನಿರ್ಮಾಣಕ್ಕೆ ಮಾಧುರ್ಯ ನೀಡಿದ ಭಾಷೆ ಉರ್ದು

ಐತಿಹಾಸಿಕ ಹಿನ್ನೆಲೆಯ ಸಾಹಿತ್ಯವೂ, ಮಾಧುರ್ಯತೆಯ ಕಾರಣಗಳಿಂದ ಉರ್ದು ಭಾಷೆ ಜನಪ್ರಿಯತೆ ಗಳಿಸಿದೆ. ಹೊಸ ತಲೆಮಾರಿಗೆ ಭಾಷೆ, ಸಾಹಿತ್ಯಗಳ ಅಭಿರುಚಿ ಮೂಡಿಸಲು ವೈವಿಧ್ಯಮಯ ಕಾರ‍್ಯಕ್ರಮಗಳ ಆಯೋಜನೆ ಅಗತ್ಯವಿದೆ.

Vijaya Karnataka 17 Oct 2018, 10:17 pm
ಉಪ್ಪಳ: ಐತಿಹಾಸಿಕ ಹಿನ್ನೆಲೆಯ ಸಾಹಿತ್ಯವೂ, ಮಾಧುರ್ಯತೆಯ ಕಾರಣಗಳಿಂದ ಉರ್ದು ಭಾಷೆ ಜನಪ್ರಿಯತೆ ಗಳಿಸಿದೆ. ಹೊಸ ತಲೆಮಾರಿಗೆ ಭಾಷೆ, ಸಾಹಿತ್ಯಗಳ ಅಭಿರುಚಿ ಮೂಡಿಸಲು ವೈವಿಧ್ಯಮಯ ಕಾರ‍್ಯಕ್ರಮಗಳ ಆಯೋಜನೆ ಅಗತ್ಯವಿದೆ. ಇದು ಉರ್ದುವನ್ನು ಅರಿತಿರುವ ಪ್ರತಿ ಮನೆಯಲ್ಲಿ ಇದರ ಆರಂಭ ಆಗಬೇಕು ಎಂದು ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್‌ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web humar socity cinstruction
ಮಾನವೀಯ ಸಮಾಜ ನಿರ್ಮಾಣಕ್ಕೆ ಮಾಧುರ್ಯ ನೀಡಿದ ಭಾಷೆ ಉರ್ದು


ಉರ್ದು ಭಾಷಾ ಅಭಿವೃದ್ದಿಗೆ ಕಾರ್ಯಾಚರಿಸುತ್ತಿರುವ ದಖ್‌ನಿ ಮುಸ್ಲಿಂ ಅಸೋಸಿಯೇಶನ್‌ ನೇತೃತ್ವದಲ್ಲಿ ಉಪ್ಪಳ ವ್ಯಾಪಾರಿ ಭವನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ 2 ದಿನಗಳ ನೇತೃತ್ವ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಉರ್ದು ಭಾಷೆಗೆ ಪ್ರತ್ಯೇಕ ಶಾಲೆ ಹಾಗೂ ಅದರೊಂದಿಗೆ ಶತಮಾನಗಳ ಇತಿಹಾಸವಿರುವ ಉಪ್ಪಳದ ಉರ್ದು ಜನಾಂಗದ ಸಮಗ್ರ ಅಧ್ಯಯನ ಇನ್ನಷ್ಟು ಬೆಳೆದು ಬರಬೇಕಾದ ಅಗತ್ಯ ಇದೆ. ಉರ್ದು ಭಾಷೆಯಲ್ಲೇ ಆಯೋಜಿಸಲಾದ ಎರಡು ದಿನಗಳ ತರಬೇತಿ ಶಿಬಿರ ಭಾಷೆಯ ಬೆಳವಣಿಗೆ, ಅಧ್ಯಯನಕ್ಕೆ ಪೂರಕವಾಗಲಿದೆ. ಸರಕಾರ ಉರ್ದು ಭಾಷೆಯ ಅಭಿವೃದ್ದಿಗೆ ಯೋಜನೆಗಳ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ದಖ್‌ನಿ ಮುಸ್ಲಿಂ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಅಧ್ಯಕ್ಷ ತೆ ವಹಿಸಿದ್ದರು. ಉಪಾಧ್ಯಕ್ಷ ಇಬ್ರಾಹಿಂ, ಜಿಲ್ಲಾಧ್ಯಕ್ಷ ಬಶೀರ್‌ ಅಹಮ್ಮದ್‌, ಮಕ್ಬೂಲ್‌ ಅಹಮ್ಮದ್‌, ಎಸ್‌.ಎ.ಜಬ್ಬಾರ್‌ ಮುಖ್ಯ ಅತಿಥಿಗಳಾಗಿದ್ದು, ಮಾತನಾಡಿದರು. ಎಂ.ಎ.ಬಶೀರ್‌, ಇಕ್ಬಾಲ್‌ ಶರೀಫ್‌ ತರಗತಿಗಳನ್ನು ನಡೆಸಿದರು. ಪ್ರಧಾನ ಕಾರ‍್ಯದರ್ಶಿ ಮೊಹಮ್ಮದ್‌ ಅಝೀಂ ಮಣಿಮುಂಡ ಸ್ವಾಗತಿಸಿದರು. ಶಹಬಾನ್‌ ಕಾಂಞಿಂಗಾಡ್‌ ವಂದಿಸಿದರು.

ರಾಜ್ಯ ಸಮಿತಿಯ ಭವಿಷ್ಯತ್‌ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಯಿತು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಉರ್ದು ಅಧ್ಯಯನ ತರಗತಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ನೀಡಲು ತೀರ್ಮಾನಿಸಲಾಯಿತು. ಉರ್ದು ಜನಾಂಗದ ಸಮಗ್ರ ಅಭಿವೃದ್ದಿಗೆ ಜಿಲ್ಲಾ ಮಟ್ಟಗಳಲ್ಲಿ ನಾನಾ ಕಾರ‍್ಯಯೋಜನೆಗಳ ಅನುಷ್ಠಾನಕ್ಕೆ ಸಭೆಯಲ್ಲಿ ಯೋಜನೆ ತಯಾರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ