ಆ್ಯಪ್ನಗರ

ಕೊಚ್ಚಿಯಲ್ಲಿ ಐಸಿಸ್‌ ದಾಳಿಗೆ ಸಾಧ್ಯತೆ : ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ

ಕೊಚ್ಚಿಯ ಶಾಪಿಂಗ್‌ ಮಾಲ್‌ಗಳಲ್ಲಿ ಐಸಿಸ್‌ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ. ಕೊಚ್ಚಿಯ ಶಾಪಿಂಗ್‌ ಮಾಲ್‌ಗಳಲ್ಲದೇ ಪ್ರಮುಖ ಕೇಂದ್ರಗಳಲ್ಲಿ ದಾಳಿ ನಡೆಸಲು ಐಸಿಸ್‌ ಯೋಜನೆ ಹಾಕಿಕೊಂಡಿರುವುದಾಗಿಯೂ ಈ ಕುರಿತಾದ ಮಾಹಿತಿಯನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Vijaya Karnataka 21 Jun 2019, 5:00 am
ಕಾಸರಗೋಡು: ಕೊಚ್ಚಿಯ ಶಾಪಿಂಗ್‌ ಮಾಲ್‌ಗಳಲ್ಲಿ ಐಸಿಸ್‌ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ. ಕೊಚ್ಚಿಯ ಶಾಪಿಂಗ್‌ ಮಾಲ್‌ಗಳಲ್ಲದೇ ಪ್ರಮುಖ ಕೇಂದ್ರಗಳಲ್ಲಿ ದಾಳಿ ನಡೆಸಲು ಐಸಿಸ್‌ ಯೋಜನೆ ಹಾಕಿಕೊಂಡಿರುವುದಾಗಿಯೂ ಈ ಕುರಿತಾದ ಮಾಹಿತಿಯನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
Vijaya Karnataka Web icc attack suspected intelegence alert
ಕೊಚ್ಚಿಯಲ್ಲಿ ಐಸಿಸ್‌ ದಾಳಿಗೆ ಸಾಧ್ಯತೆ : ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ


ಇರಾಕ್‌, ಸಿರಿಯಾ ಮುಂತಾದ ಕೇಂದ್ರಗಳಲ್ಲಿ ಐಸಿಸ್‌ಗೆ ಭಾರೀ ಹಿನ್ನೆಡೆ ಉಂಟಾಗಿರುವ ಹಿನ್ನೆಲೆಯಲ್ಲಿ ತನ್ನ ನೆಲೆಯನ್ನು ಭಾರತೀಯ ಸಮುದ್ರ ತೀರ ಪ್ರದೇಶಗಳತ್ತ ಕೇಂದ್ರೀಕರಿಸಿ ವಿಧ್ವಂಸ ಕೃತ್ಯ ನಡೆಸುವ ಯೋಜನೆ ಹಾಕಿಕೊಂಡಿರುವ ಮಾಹಿತಿಯೂ ಲಭಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಮೂರು ಪತ್ರಗಳನ್ನು ಗುಪ್ತ್ತಚರ ಇಲಾಖೆ ಪೊಲೀಸರಿಗೆ ಹಸ್ತಾಂತರಿಸಿರುವುದು. ಐಸಿಸ್‌ ಸಂಬಂಧಿಸಿದಂತೆ ಸೈಬರ್‌ ಚಟುವಟಿಕೆಗಳು ರಾಜ್ಯದಲ್ಲಿ ಈಗಲೂ ಸಕ್ರಿಯವಾಗಿದೆ. ಐಸಿಸ್‌ಗೆ ಆಕರ್ಷಿತರಾಗಿ ತೆರಳಿದ ಹೆಚ್ಚಿನವರೂ ಕೇರಳದಿಂದಾಗಿದೆ. ಅವರೆಲ್ಲರೂ ವಿದೇಶಗಳಲ್ಲಿ ಐಸಿಸ್‌ ಕೇಂದ್ರಗಳಿದ್ದಾರೆ. ಯಾವ ಕ್ಷ ಣಕ್ಕೂ ಅವರು ಮರಳಿ ಬಂದು ಕೇರಳದಲ್ಲಿ ಹಿಂಸಾತ್ಮಕ ಕೃತ್ಯ ನಡೆಸುವ ಸಾಧ್ಯತೆಯು ಇದೆ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿರುವುದು. ಶ್ರೀಲಂಕಾದಲ್ಲಿ ನಡೆದ ಐಸಿಸ್‌ ಆತ್ಮಾಹುತಿ ದಾಳಿಯ ಬಳಿಕ ಕೇರಳದ 30ರಷ್ಟು ಮಂದಿಯ ಮೇಲೆ ಕೇಂದ್ರ ಗುಪ್ತಚರ ವಿಭಾಗ, ಎನ್‌ಐಎ, ಪೊಲೀಸರು ನಿಗಾ ವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ