ಆ್ಯಪ್ನಗರ

ರೋಗಿಯ ಹೊಟ್ಟೆಯಲ್ಲಿತ್ತು 111 ಕಬ್ಬಿಣದ ಮೊಳೆಗಳು !

ತ್ರಿಶ್ಯೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ರೋಗಿಯ ಹೊಟ್ಟೆಯಿಂದ ಶಸ್ತ್ರಕ್ರಿಯೆಯ ಮೂಲಕ 111 ಕಬ್ಬಿಣದ ಮೊಳೆಗಳನ್ನು ಹೊರತೆಗೆಯಲಾಗಿದೆ.

Vijaya Karnataka 11 Aug 2019, 9:09 am
ಕಾಸರಗೋಡು: ತ್ರಿಶ್ಯೂರು ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ರೋಗಿಯ ಹೊಟ್ಟೆಯಿಂದ ಶಸ್ತ್ರಕ್ರಿಯೆಯ ಮೂಲಕ 111 ಕಬ್ಬಿಣದ ಮೊಳೆಗಳನ್ನು ಹೊರತೆಗೆಯಲಾಗಿದೆ.
Vijaya Karnataka Web Operation


ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕಳೆದ ಹತ್ತು ವರ್ಷಗಳಿಂದ ನುಂಗಿದ ಕಬ್ಬಿಣದ ಮೊಳೆಗಳನ್ನು ನಾಲ್ಕು ಗಂಟೆಗಳ ದೀರ್ಘ ಶಸ್ತ್ರಕ್ರಿಯೆ ಮೂಲಕ ಜನರಲ್‌ ಸರ್ಜರಿ ವಿಭಾಗ ವೈದ್ಯರು ಹೊರತೆಗೆದರು.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ ಹಿನ್ನ್ನೆಲೆಯಲ್ಲಿ 49ರ ಹರೆಯದ ತ್ರಿಶ್ಯೂರು ನಿವಾಸಿಯನ್ನು ಭಾನುವಾರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು.

ಹೊಟ್ಟೆಯ ಎಕ್ಸ್‌ರೇ ತಪಾಸಣಾ ಫಲಿತಾಂಶ ಗಮನಿಸಿದಾಗ ವೈದ್ಯರು ಬೆಚ್ಚಿಬಿದ್ದರು. ಹೊಟ್ಟೆಯೊಳಗೆ ಎಣಿಸಲಾಗದಷ್ಟು ಮೊಳೆಗಳಿದ್ದುವು. ಕೂಡಲೇ ರೋಗಿಯ ಪ್ರಾಥಮಿಕ ವೀಕ್ಷ ಣೆಯ ಬಳಿಕ ಶಸ್ತ್ರಕ್ರಿಯೆಗೆ ನಡೆಸಲಾಯಿತು. ಮೊಳೆಗಳು ಆಂತರಿಕ ಅವಯವಗಳಿಗೆ ತಾಗಿದ್ದವು.ಮೊಳೆಗಳನ್ನು ಹೊರತೆಗೆಯಲು 60 ಸೆಂಟಿ ಮೀಟರ್‌ನಷ್ಟು ಭಾಗವನ್ನು ಶಸ್ತ್ರಕ್ರಿಯೆ ಮೂಲಕ ಕತ್ತರಿಸಬೇಕಾಯಿತು. ರೋಗಿಯು ಚೇತರಿಸುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ