ಆ್ಯಪ್ನಗರ

ಕಾಸರಗೋಡು, ಮಂಗಳೂರು ನಿಲ್ದಾಣಗಳಿಗೆ ಐಎಸ್‌ಒ ಮಾನ್ಯತೆ

ಪಾಲ್ಘಾಟ್‌ ರೈಲ್ವೆ ವಿಭಾಗದ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು ಸಹಿತ 11 ರೈಲ್ವೆ ನಿಲ್ದಾಣಗಳಿಗೆ ಪರಿಸರ ನಿರ್ವಹಣಾ ವ್ಯವಸ್ಥೆಯ ಐಎಸ್‌ಒ ಪ್ರಮಾಣೀಕೃತ ಮಾನ್ಯತೆ ಲಭಿಸಿದೆ.

Vijaya Karnataka 14 Feb 2020, 9:03 pm
ಕಾಸರಗೋಡು: ಪಾಲ್ಘಾಟ್‌ ರೈಲ್ವೆ ವಿಭಾಗದ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು ಸಹಿತ 11 ರೈಲ್ವೆ ನಿಲ್ದಾಣಗಳಿಗೆ ಪರಿಸರ ನಿರ್ವಹಣಾ ವ್ಯವಸ್ಥೆಯ ಐಎಸ್‌ಒ ಪ್ರಮಾಣೀಕೃತ ಮಾನ್ಯತೆ ಲಭಿಸಿದೆ.
Vijaya Karnataka Web rail


ಪಾಲ್ಘಾಟ್‌ ರೈಲ್ವೆ ವಿಭಾಗದ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು, ಕಾಞಂಗಾಡು, ಪಯ್ಯನ್ನೂರು, ಕಣ್ಣೂರು, ತಲಶ್ಯೇರಿ, ವಡಗರ, ಕೊಯಿಲಾಂಡಿ, ತಿರೂರ್‌ ಹಾಗೂ ಕೋಝಿಕೋಡ್‌ ನಿಲ್ದಾಣಗಳಿಗೆ ಐಎಸ್‌ಒ ಪ್ರಮಾಣ ಲಭಿಸಿದೆ.

ಗುರುವಾರ ಪಾಲ್ಘಾಟ್‌ ವಿಭಾಗೀಯ ರೈಲ್ವೆ ಕಚೇರಿಯಲ್ಲಿನಡೆದ ಸಮಾರಂಭದಲ್ಲಿರೈಲ್ವೆ ವ್ಯವಸ್ಥಾಪಕ ಪ್ರತಾಪ್‌ ಸಿಂಗ್‌ ಶಮಿ ಅವರು ನಿಲ್ದಾಣದ ಅಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು.

ರೈಲ್ವೆ ನಿಲ್ದಾಣಗಳು ಅನುಸರಿಸುತ್ತಿರುವ ಪರಿಸರ ಸ್ನೇಹಿ ನಿರ್ವಹಣೆಗಾಗಿ ಈ ಮಾನ್ಯತೆ ಲಭಿಸಿದೆ. ಈ ಸಂದರ್ಭ ರೈಲ್ವೆ ವ್ಯವಸ್ಥಾಪಕ ಡಿ. ಬಾಬ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ವಿ. ಕಲಾರಾಣಿ, ಪರಿಸರ ಮತ್ತು ಹೌಸ್‌ ಕೀಪಿಂಗ್‌ ವ್ಯವಸ್ಥಾಪಕ ಎ. ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಐಎಸ್‌ಒ14001 ಅಂತಾರಾಷ್ಟ್ರೀಯ ಮಾನದಂಡವಾಗಿದ್ದು, ಅದು ಪರಿಸರ ನಿರ್ವಹಣಾ ವ್ಯವಸ್ಥೆ (ಇಎಂಎಸ್‌)ಯನ್ನು ಸೂಚಿಸುತ್ತದೆ. ಪ್ರಮಾಣದ ಮಾನದಂಡಗಳ ಪ್ರಕಾರ ಪರಿಸರ ಜವಾಬ್ದಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿನಿರ್ವಹಿಸುವ ಸಂಸ್ಥೆಗಳಿಗೆ ನೀಡಲಾಗುವುದು. ಪರಿಸರ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಸ್ಥಾಪಿಸುವುದಾಗಿದೆ.

ನಿಲ್ದಾಣಗಳಲ್ಲಿಸಮಗ್ರ ಯಾಂತ್ರೀಕೃತ ಸ್ವಚ್ಛಗೊಳಿಸುವಿಕೆ ಮತ್ತು ರೈಲುಗಳಲ್ಲಿಜೈವಿಕ ಶೌಚಾಲಯಗಳ ಪರಿಚಯ, ರೈಲು ನಿಲ್ದಾಣಗಳ ಸ್ವಚ್ಛತೆ ಮಾನದಂಡದಲ್ಲಿಒಳಗೊಂಡಿರುತ್ತದೆ. ಬಯೋ ಟಾಯ್ಲೆಟ್‌ ಪರಿಚಯಿಸಿದ ಬಳಿಕ ಇದೀಗ ಮಲ ವಿಸರ್ಜನೆಯನ್ನು ನೇರವಾಗಿ ರೈಲ್ವೆ ಹಳಿಗೆ ಬಿಡಲಾಗುವುದಿಲ್ಲ. ಈ ಮೂಲಕ ಸ್ವಚ್ಛ ಭಾರತ್‌ ಅಭಿಯಾನದ ಸಂದೇಶವನ್ನು ರೈಲ್ವೆ ಪ್ರಯಾಣಿಕರಿಗೆ ಈ ಮೂಲಕ ನೀಡಲು ಸಾಧ್ಯವಾಗುತ್ತದೆ. ರೈಲ್ವೆ ನಿಲ್ದಾಣಗಳು ಮತ್ತು ಆವರಣಗಳಲ್ಲಿಸ್ವಚ್ಛ ಭಾರತ್‌ ಜಾರಿಗೊಳಿಸುವ ಹಿನ್ನೆಲೆಯಲ್ಲಿತ್ಯಾಜ್ಯ ಎಸೆಯುವವರಿಗಾಗಿ ದಂಡ ವಿಧಿಸುವ ಪ್ರಕ್ರಿಯೆ ಸಹ ಆರಂಭಿಸಲಾಗಿದೆ.

ನಿಲ್ದಾಣಗಳಿಗೆ ನೀಡುವ ಈ ಐಎಸ್‌ಒ ಪ್ರಮಾಣ ಪತ್ರ ನೀಡಿದ ದಿನಾಂಕದಿಂದ ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿಯಾಂತ್ರೀಕೃತ ಸ್ವಚ್ಛಗೊಳಿಸುವಿಕೆ, ಆ್ಯಂಟಿ ಟ್ರೀಟ್‌ಮೆಂಟ್‌, ಸ್ವಚ್ಛತೆ ಗುಣಮಟ್ಟದ ಕುರಿತು ನಿಗಾ ವಹಿಸುವುದಕ್ಕಾಗಿ ಏಜೆನ್ಸಿಗಳನ್ನು ನಿಯೋಜಿಸಲಾಗಿತ್ತು. ಪಾಲ್ಘಾಟ್‌ ವಿಭಾಗದ ಇನ್ನೂ ನಾಲ್ಕು ನಿಲ್ದಾಣಗಳಿಗೆ ಐಎಸ್‌ಒ ಪ್ರಮಾಣಕ್ಕಾಗಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅದು ಪಾಲ್ಘಾಟ್‌ ಜಂಕ್ಷನ್‌, ಒಟ್ಟಂಪಾಲಂ, ಶೋರ್ನೂರು ಜಂಕ್ಷನ್‌, ಕುಟ್ಟಿಪುರಂ ನಿಲ್ದಾಣಗಳಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ