ಆ್ಯಪ್ನಗರ

ಜಲಶಕ್ತಿ ಅಭಿಯಾನ: ಕೇಂದ್ರ ಪ್ರತಿನಿಧಿ ಸಮಾಲೋಚನೆ

ಜಿಲ್ಲೆ ಎದುರಿಸುತ್ತಿರುವ ನೀರಿನ ಸಮಸ್ಯೆ ನೇರವಾಗಿ ಅರಿಯಲು, ಜಲ ಸಂರಕ್ಷ ಣಾ ಚಟುವಟಿಕೆಗಳನ್ನು ಅವಲೋಕನ ನಡೆಸುವುದಕ್ಕಾಗಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಪ್ರತಿನಿಧಿ ಹಾಗೂ ವಾಣಿಜ್ಯ ಸಚಿವಾಲಯದ ಏಶಿಯನ್‌ ಫಾರಿನ್‌ ಟ್ರೇಡ್‌ ನಿರ್ದೇಶಕರಾದ ಇಂದು ಸಿ. ನಾಯರ್‌ ಕಾಸರಗೋಡು ಬ್ಲಾಕ್‌ ಪಂಚಾಯಿತಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

Vijaya Karnataka 19 Dec 2022, 1:23 pm
ಕಾಸರಗೋಡು: ಜಿಲ್ಲೆ ಎದುರಿಸುತ್ತಿರುವ ನೀರಿನ ಸಮಸ್ಯೆ ನೇರವಾಗಿ ಅರಿಯಲು, ಜಲ ಸಂರಕ್ಷ ಣಾ ಚಟುವಟಿಕೆಗಳನ್ನು ಅವಲೋಕನ ನಡೆಸುವುದಕ್ಕಾಗಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಪ್ರತಿನಿಧಿ ಹಾಗೂ ವಾಣಿಜ್ಯ ಸಚಿವಾಲಯದ ಏಶಿಯನ್‌ ಫಾರಿನ್‌ ಟ್ರೇಡ್‌ ನಿರ್ದೇಶಕರಾದ ಇಂದು ಸಿ. ನಾಯರ್‌ ಕಾಸರಗೋಡು ಬ್ಲಾಕ್‌ ಪಂಚಾಯಿತಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.
Vijaya Karnataka Web drinking water
(ಸಾಂದರ್ಭಿಕ ಚಿತ್ರ)


ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನ ಯೋಜನೆ ಜಾರಿಗೊಳಿಸುವುದರ ಅಂಗವಾಗಿ ಸಂದರ್ಶನ ನಡಯಿತು.

ವರ್ಷಗಳ ಹಿಂದೆಯೇ ಕಾಸರಗೋಡು ಬ್ಲಾಕ್‌ನ ನೀರಿನ ಸಮಸ್ಯೆ ಅರ್ಥಮಾಡಿಕೊಂಡು ಪರಿಹಾರ ಕ್ರಿಯೆಗಳನ್ನು ಆರಂಭಿಸಲಾಗಿತ್ತು ಎಂದೂ ಬ್ಲಾಕ್‌ ಪಂಚಾಯಿತಿ ಅಧ್ಯಕ್ಷ ಸಿ.ಎಚ್‌. ಮುಹಮ್ಮದ್‌ ಕುಂಞಿ ಚಾಯಿಂಟಡಿ ತಿಳಿಸಿದರು.

ಅನುದಾನದ ಕೊರತೆ ಕಾರಣ ನಾನಾ ಯೋಜನೆಗಳನ್ನು ಕಾರ್ಯದಕ್ಷ ವಾಗಿ ಜಾರಿಗೊಳಿಸಲು ಅಡಚಣೆ ಸೃಷ್ಟಿಸಿರುವುದಾಗಿ ಅವರು ವಿವರಿಸಿದರು.

ಕಾಸರಗೋಡು ಬ್ಲಾಕ್‌ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಾನಾ ಇಲಾಖೆ ಪ್ರತಿನಿಧಿಗಳು ಕಾಸರಗೋಡು ಬ್ಲಾಕ್‌ ಪಂಚಾಯಿತಿಯಲ್ಲಿ ನಡೆಸುತ್ತಿರುವ ಜಲಸಂರಕ್ಷ ಣಾ ಪ್ರಕ್ರಿಯೆಗಳನ್ನು ಕೇಂದ್ರ ಪ್ರತಿನಿಧಿ ಜತೆ ವಿವರಿಸಿದರು. ಬಾವಿ ರೀಚಾರ್ಜ್‌ಗಾಗಿ ನಾನಾ ಇಲಾಖೆಗಳು ವ್ಯತ್ಯಸ್ತವಾದ ರೀತಿಯಲ್ಲಿ ಮುಂದುವರಿಯುತ್ತಿರುವುದಾಗಿಯೂ ಅದರಲ್ಲಿ ಏಕೀಕೃತವಾದ ಡಿಸೈನ್‌ ರಚಿಸಬೇಕಾಗಿರುವುದು ಅತ್ಯಗತ್ಯ ಎಂದು ಚರ್ಚೆಯಲ್ಲಿ ನಿರ್ದೇಶಿಸಲಾಯಿತು.

ಮಳೆಗಾಲ ಕೊನೆಗೊಳ್ಳುವಾಗ ಬತ್ತುವ ಮಧುವಾಹಿನಿ ಹೊಳೆಯಲ್ಲಿ ಚೆಕ್‌ಡ್ಯಾಮ್‌ ನಿರ್ಮಿಸುವುದಕ್ಕಿಂತ ಸಣ್ಣ ಸ್ಟಾಪ್‌ ಡ್ಯಾಮ್‌ಗಳನ್ನು ನಿರ್ಮಿಸುವುದು ಉತ್ತಮ ಎಂದು ಫೀಲ್ಡ್‌ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ. ಚೆಂಗಳದಲ್ಲಿ ಎತ್ತರದ ಪಾರೆ ಪ್ರದೇಶಗಳ ಕಾಲೊನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಕ್ಕಾಗಿ ಪಾರೆಗಳನ್ನು ಅಗೆದು ನೀರಿನ ಟ್ಯಾಂಕ್‌ ನಿರ್ಮಿಸಿದರೆ ಬಾವಿಗಳಲ್ಲಿ ನೀರು ಲಭಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಕ್ನಿಕಲ್‌ ಅಸಿಸ್ಟೆಂಟ್‌, ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ವಿ.ಆರ್‌. ರಾಣಿ ಸಂಶಯಗಳಿಗೆ ಪ್ರತಿಕ್ರಿಯೆ ನೀಡಿದರು. 2018ರ ಆಗಸ್ಟ್‌ನ ಪ್ರವಾಹದಲ್ಲಿ ವಯನಾಡು, ಮಲಪ್ಪ್ಪುರ ಮೊದಲಾದ ಕಡೆಗಳಲ್ಲಿ ಮಣ್ಣು ಕುಸಿತ ಸಂಭವಿಸಿರುವುದು ಅವೈಜ್ಞಾನಿಕವಾದ ಅಣೆಕಟ್ಟುಗಳನ್ನು ನಿರ್ಮಿಸಿರುವ ಕಾರಣವಾಗಿದೆ ಎಂದೂ, ಜಲಸಂರಕ್ಷ ಣೆ ಪ್ರಕ್ರಿಯೆಗಳಲ್ಲಿ ನುರಿತರ ಅಭಿಪ್ರಾಯ ಕೇಳಬೇಕು ಎಂದು ರಾಣಿ ಹೇಳಿದರು.

ಜಲ ಶಕ್ತಿ ಅಭಿಯಾನಕ್ಕೆ ಸಂಬಂಧಿಸಿ ಜಿಲ್ಲೆಗೆ ಆಗಮಿಸುವ ದ್ವಿತೀಯ ಕೇಂದ್ರ ಪ್ರತಿನಿಧಿಯಾಗಿದ್ದಾರೆ ಇಂದು ಸಿ. ನಾಯರ್‌. ಕಳೆದ ವಾರ ಕೇಂದ್ರ ಪ್ರತಿನಿಧಿ ಅಶೋಕ್‌ ಕುಮಾರ್‌ ಸಿಂಗ್‌ ಜಿಲ್ಲೆಗೆ ಆಗಮಿಸಿ ಇಲ್ಲಿನ ಸ್ಥಿತಿಗತಿಗಳ ಮೌಲ್ಯಮಾಪನ ನಡೆಸಿದ್ದರು.

ಭಾರತದಲ್ಲಿ ನೀರಿನ ಕೊರತೆ ತೀವ್ರಗೊಂಡಿರುವ 255 ಜಿಲ್ಲೆಗಳಲ್ಲಿ ಜಲಶಕ್ತಿ ಅಭಿಯಾನ್‌ ಯೋಜನೆ ಜಾರಿಗೊಳಿಸಲಾಗುವುದು. ಕೇರಳದಿಂದ ಕಾಸರಗೋಡು, ಪಾಲಕ್ಕಾಡು ಜಿಲ್ಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಉದ್ಯೋW Üಖಾತರಿ ಯೋಜನೆಯ ರಾಜ್ಯ ಮಟ್ಟದ ಕಾರ್ಯಕ್ರಮ ಅಧಿಕಾರಿ ಎಸ್‌. ಸನೂಪ್‌, ಎಡಿಸಿ ಜನರಲ್‌ ಬೆವಿನ್‌ ಜೋ ವರ್ಗೀಸ್‌, ಉದ್ಯೋಗ ಖಾತರಿ ಯೋಜನೆ ಜಾಯಿಂಟ್‌ ಪ್ರೋಗ್ರಾಂ ಸಂಯೋಜಕ ಕೆ. ಪ್ರದೀಪನ್‌, ಜಿಲ್ಲಾ ಮಣ್ಣು ಸಂರಕ್ಷ ಣಾ ಅಧಿಕಾರಿ ಇ.ವಿ.ಎಂ. ಅಶೋಕ್‌ ಕುಮಾರ್‌, ಚೆಂಗಳ ಪಂಚಾಯಿತಿ ಅಧ್ಯಕ್ಷೆ ಶಾಹಿನ ಸಲೀಂ, ಕೃಷಿ ಸಹಾಯಕ ನಿರ್ದೇಶಕ ಕೆ. ಆನಂದನ್‌, ಜನಪ್ರತಿನಿಧಿಗಳು, ಬ್ಲಾಕ್‌ ಡೆವಲಪ್‌ಮೆಂಟ್‌ ಅಧಿಕಾರಿ ಎಸ್‌. ಬಿನೀಶ್‌ ಕುಮಾರ್‌, ಸೋಶಿಯಲ್‌ ಫಾರೆಸ್ಟ್ರಿ ಅಧಿಕಾರಿ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ಎಂಜಿನಿಯರ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ