ಆ್ಯಪ್ನಗರ

ಕನ್ನಡ, ಮಲೆಯಾಳ ವಿದ್ಯಾರ್ಥಿಗಳಿಗೆ ಸಮಾನ ಪ್ರಾಧಾನ್ಯತೆ ನೀಡಬೇಕು

ಜಿಲ್ಲೆಯಲ್ಲಿ ಶಿಕ್ಷ ಣ ಪಡೆಯುತ್ತಿರುವ ಕನ್ನಡ, ಮಲೆಯಾಳ ವಿದ್ಯಾರ್ಥಿಗಳೆಂಬ ಬೇಧವನ್ನು ಕಲ್ಪಿಸದೆ ಸಮಾನ ಪ್ರಾಧಾನ್ಯತೆ ನೀಡಬೇಕು. ಆ ಮೂಲಕ ಜಿಲ್ಲೆಯ ಸಪ್ತ ಭಾಷಾ ಸಿರಿವಂತವನ್ನು ಉಳಿಸಿಕೊಳ್ಳಲು ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕಣ್ಣೂರು ವಿವಿಯ ಚಾಲಾ ಕ್ಯಾಂಪಸ್‌ನ ಬಿಎಡ್‌ನ ಶಿಕ್ಷ ಕ-ರಕ್ಷ ಕ ಸಂಘದ ಅಧ್ಯಕ್ಷ ಬಾಲಕೃಷ್ಣ ಕಾಂತಿಕೆರೆ ಹೇಳಿದರು.

Vijaya Karnataka Web 28 Mar 2018, 5:00 am
ಕಾಸರಗೋಡು: ಜಿಲ್ಲೆಯಲ್ಲಿ ಶಿಕ್ಷ ಣ ಪಡೆಯುತ್ತಿರುವ ಕನ್ನಡ, ಮಲೆಯಾಳ ವಿದ್ಯಾರ್ಥಿಗಳೆಂಬ ಬೇಧವನ್ನು ಕಲ್ಪಿಸದೆ ಸಮಾನ ಪ್ರಾಧಾನ್ಯತೆ ನೀಡಬೇಕು. ಆ ಮೂಲಕ ಜಿಲ್ಲೆಯ ಸಪ್ತ ಭಾಷಾ ಸಿರಿವಂತವನ್ನು ಉಳಿಸಿಕೊಳ್ಳಲು ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕಣ್ಣೂರು ವಿವಿಯ ಚಾಲಾ ಕ್ಯಾಂಪಸ್‌ನ ಬಿಎಡ್‌ನ ಶಿಕ್ಷ ಕ-ರಕ್ಷ ಕ ಸಂಘದ ಅಧ್ಯಕ್ಷ ಬಾಲಕೃಷ್ಣ ಕಾಂತಿಕೆರೆ ಹೇಳಿದರು.
Vijaya Karnataka Web news/kasaragod/kannada
ಕನ್ನಡ, ಮಲೆಯಾಳ ವಿದ್ಯಾರ್ಥಿಗಳಿಗೆ ಸಮಾನ ಪ್ರಾಧಾನ್ಯತೆ ನೀಡಬೇಕು


ಅವರು ಕಣ್ಣೂರು ವಿವಿ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗವು ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳವಾರ ಚಾಲಾ ಕ್ಯಾಂಪಸ್‌ನ ಸಭಾಂಗಣದಲ್ಲಿ ನಡೆದ ಜ್ಞಾನವಾಹಿನಿ-2018 ವಿಚಾರ ಸಂಕಿರಣ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಪ್ತಭಾಷಾ ಪ್ರದೇಶವಾದ ಕಾಸರಗೋಡಿನ ಭಾಷೆಗಳಿಗೆ ಪ್ರತ್ಯೇಕ ಸಂಸ್ಕೃತಿಯನ್ನು ಹೊಂದಿದೆ. ಅದನ್ನು ಉಳಿಸಿಕೊಳ್ಳಬೇಕು. ಜಿಲ್ಲೆಯ ಹಿಂದುಳಿದ ಅವಸ್ಥೆಯನ್ನು ಹೋಗಲಾಡಿಸುವಲ್ಲಿ ಸರಕಾರ ವಿಫಲವಾಗಿದೆ. ಅದಕ್ಕೆ ಪ್ರಧಾನ ಕಾರಣ ಒಗ್ಗಟ್ಟಿನ ಕೊರತೆಯಾಗಿದೆ. ನಮ್ಮ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ‍್ಯವಾಗಿದೆ. ಅದಕ್ಕೆ ಇಂತಹ ವಿಚಾರ ಸಂಕಿರಣಗಳು ವೇದಿಕೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಒಂದು ಪ್ರದೇಶದ ಭಾಷೆ ನಾಶವಾದರೆ ಇಡೀ ಸಂಸ್ಕೃತಿಯೇ ನಾಶವಾದಂತೆ, ಭಾಷೆಯೇ ಸಂಸ್ಕೃತಿಯ ಪ್ರೇರಕ ಶಕ್ತಿಯಾಗಿದೆ. ಆದ್ದರಿಂದ ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ಎಲ್ಲರ ಪ್ರಯತ್ನ ಅಗತ್ಯ ಎಂದರು.

ಶಿಕ್ಷ ಕ ಶಿಕ್ಷ ಣ ವಿಭಾಗದ ನಿರ್ದೇಶಕಿ ಡಾ. ರಿಜಿ ಮೋಲ್‌ ಮಾತನಾಡಿ, ವಿಚಾರ ಸಂಕಿರಣಗಳು ವಿದ್ಯಾರ್ಥಿಗಳ ಅಧ್ಯಯನ ಅರಿವು ಅಪ್ಡೇಟ್‌ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ ಸಂಶೋಧನೆ ನಡೆಸಲು ಪ್ರಯೋಜನವಾಗಲಿದೆ. ಸಂವಹನ ಕೌಶಲ್ಯವನ್ನು ಹೆಚ್ಚಿಸುವುದಲ್ಲದೆ ಭಾಷೆಯ ಮೇಲೆ ಹಿಡಿತವನ್ನು ಸಾಧಿಸಲು ಸಾಧ್ಯವಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಸರಗೋಡು ಕನ್ನಡ ಮತ್ತು ಪತ್ರಿಕೋದ್ಯಮ ಎಂಬ ವಿಷಯದಲ್ಲಿ ಪತ್ರಕರ್ತ ವಿವೇಕ್‌ ಆದಿತ್ಯ ವಿಷಯ ಮಂಡಿಸಿದರು.

ಕಣ್ಣೂರು ವಿವಿ ಭಾರತೀಯ ಭಾಷಾ ಅಧ್ಯಯನಾಂಗದ ಕನ್ನಡ ವಿಭಾಗ ನಿರ್ದೇಶಕ ಡಾ. ರಾಜೇಶ್‌ ಬೆಜ್ಜಂಗಳ ಸ್ವಾಗತಿಸಿ ಪ್ರಾಸ್ತಾವಿಸಿದರು. ವಿದ್ಯಾರ್ಥಿ ಸುಜಿತ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್‌ ವಂದಿಸಿದರು. ರವೀಂದ್ರ ಪಾಡಿ, ಪುರುಷೋತ್ತಮ ಪೆರ್ಲ, ಸ್ಟೀಫನ್‌ ಕ್ರಾಸ್ತಾ, ಜಗದೀಶ ಕೂಡ್ಲು, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಕನ್ನಡ ವಿಭಾಗದ ವತಿಯಿಂದ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ