ಆ್ಯಪ್ನಗರ

ಕಾಸರಗೋಡು ಬಂದರು ಉದ್ಘಾಟನೆ ಮೀನಮೇಷ

ಜಿಲ್ಲೆಯ ಮಹತ್ವಾಕಾಂಕ್ಷೆಯ ಕಾಸರಗೋಡು ಮೀನುಗಾರಿಕೆ ಬಂದರು ಕೋಟಿಗಟ್ಟಲೆ ಹಣ ವಿನಿಯೋಗಿಸಿ 10 ವರ್ಷಗಳ ಹಿಂದೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಪೂರ್ಣವಾದರೂ ಇನ್ನೂ ಉದ್ಘಾಟನೆಗೊಳ್ಳದ ಹಿನ್ನೆಲೆಯಲ್ಲಿಮೀನು ಕಾರ್ಮಿಕರು ಪ್ರತಿಭಟನೆ ನಡೆಸಲು ಸಿದ್ಧತೆಗೆ ಆಲೋಚನೆ ನಡೆಸಿದೆ.

Vijaya Karnataka Web 12 Nov 2019, 5:00 am
ಕಾಸರಗೋಡು:
ಜಿಲ್ಲೆಯ ಮಹತ್ವಾಕಾಂಕ್ಷೆಯ ಕಾಸರಗೋಡು ಮೀನುಗಾರಿಕೆ ಬಂದರು ಕೋಟಿಗಟ್ಟಲೆ ಹಣ ವಿನಿಯೋಗಿಸಿ 10 ವರ್ಷಗಳ ಹಿಂದೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಪೂರ್ಣವಾದರೂ ಇನ್ನೂ ಉದ್ಘಾಟನೆಗೊಳ್ಳದ ಹಿನ್ನೆಲೆಯಲ್ಲಿಮೀನು ಕಾರ್ಮಿಕರು ಪ್ರತಿಭಟನೆ ನಡೆಸಲು ಸಿದ್ಧತೆಗೆ ಆಲೋಚನೆ ನಡೆಸಿದೆ.
Vijaya Karnataka Web kasaragodu potr inaguration delay
ಕಾಸರಗೋಡು ಬಂದರು ಉದ್ಘಾಟನೆ ಮೀನಮೇಷ


ಐದು ವರ್ಷಗಳ ಹಿಂದೆ ಆರಂಭಿಸಿದ ಮಂಜೇಶ್ವರ ಬಂದರು ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ಮೊದಲ ಮೀನುಗಾರಿಕೆ ಬಂದರು ಆಗಿರುವ ಕಾಸರಗೋಡು ಮೀನುಗಾರಿಕೆ ಬಂದರು ಕಸಾಬದಲ್ಲಿ2010ರ ಜ. 8ರಂದು ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಗೊಂಡಿತ್ತು. ಸುಮಾರು 30 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ ಕಾಮಗಾರಿ ಆರಂಭಿಸಿದ ಕಾಸರಗೋಡು ಬಂದರು ಕಾಮಗಾರಿ ನಿರೀಕ್ಷೆಯಂತೆ ಸಾಗದೆ ಆಮೆ ನಡಿಗೆಯಲ್ಲಿಸಾಗಿ ಪೂರ್ಣವಾಗಿದ್ದರೂ. ಅಳಿವೆ ಬಾಗಿಲಿನಲ್ಲಿಹಿನ್ನೀರಿನಲ್ಲಿಬಂದರಿಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯೂ, ಬಂದರಿನ ದ್ವಾರವು ಕಿರಿದಾದ ಕಾರಣ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿಇನ್ನೂ ಉದ್ಘಾಟನೆಯಾಗಿಲ್ಲ.

ಪ್ರವೇಶ ದ್ವಾರದ ಅಗಲ ಹೆಚ್ಚುಸವ ಕ್ರಮ ಈಗಾಗಲೇ ಆರಂಭಿಸಲಾಗಿದೆ. ಇದರ ಕುರಿತು ಪರಿಶೀಲನೆ ನಡೆಸುವುದಕ್ಕಾಗಿ ಗೋವಾ ತಂಡಕ್ಕೆ ಜವಾಬ್ದಾರಿ ನೀಡಲಾಗಿದೆ. ಇವರ ವರದಿಯ ಆಧಾರದಲ್ಲಿಇತರ ಕ್ರಮ ಕೈಗೊಳ್ಳುವುದು ಎಂದು ರಾಜ್ಯ ಬಂದರು ಸಚಿವೆ ಜೆ. ಮೆರ್ಸಿ ಕುಟ್ಟಿಯಮ್ಮ ತಿಳಿಸಿದ್ದಾರೆ. ಈ ಬಗ್ಗೆ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಬಂದರು ಉದ್ಘಾಟನೆ ವಿಳಂಬದ ಬಗ್ಗೆ ವಿಧಾನಸಭೆಯಲ್ಲಿಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿದ್ದಾರೆ.

ಕಾಸರಗೋಡಿನ ಬಂದರಿನ ಇತರ ಎಲ್ಲಕಾಮಗಾರಿಗಳು ಪೂರ್ಣವಾಗಿ ನಾಲ್ಕು ವರ್ಷಗಳು ಕಳೆದಿದೆ. ಪ್ರವೇಶ ದ್ವಾರದ ಗೀಟ್‌ಗಳು, ಲೈಟ್‌ಗಳು ಈಗಾಗಲೇ ಹಾನಿಯಾಗಿದೆ. ಕಟ್ಟಡದ ಕೆಲವು ಭಾಗಗಳಿಗೂ ಹಾನಿಯಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಆರಂಭಗೊಂಡು ಮಂಜೇಶ್ವರ ಬಂದರಿನ ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್‌ನಲ್ಲಿಇದು ಉದ್ಘಾಟನೆಗೊಳ್ಳಲಿದೆ. ಆದರೆ ಕಾಸರಗೋಡು ಬಂದರಿಗೆ ಇನ್ನೂ ಸಮಯವಕಾಶ ಬೇಕಾಗಿದೆ.

ಪ್ರತಿಭಟನೆ ಸಿದ್ಧತೆ: ಕಸಬಾ ಮೀನುಗಾರಿಕೆ ಬಂದರಿನ ಕಾಮಗಾರಿ ಪೂರ್ಣವಾದರೂ ಉದ್ಘಾಟನೆಗೆ ಮೀನಮೇಷ ಮಾಡುತ್ತಿರುವುದಕ್ಕೆ ಪ್ರತಿಭಟನೆಗೆ ಸಿದ್ಧತೆ ನಡೆಸುವುದಾಗಿ ಬಂದರು ಕ್ರಿಯಾ ಸಮಿತಿ ಸಭೆ ತೀರ್ಮಾನಿಸಿದೆ. ಕಾಸರಗೋಡು ಕುರುಂಭ ಕ್ಷೇತ್ರ ಪರಿಸರದಲ್ಲಿನಡೆದ ಸಭೆಯಲ್ಲಿಸ್ಥಳೀಯ ಮೀನು ಕಾರ್ಮಿಕರು, ಕಾಸರಗೋಡು, ಕಿಯೂರು, ಕುಂಬಳೆ ಪ್ರದೇಶಗಳಿಂದ ಆಗಮಿಸಿದ ಮೀನು ಕಾರ್ಮಿಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಕ್ಷೇತ್ರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಸರಗೋಡು ನಗರಸಭೆ ಸದಸ್ಯ ಕೆ.ಜಿ. ಮನೋಹರನ್‌, ರಹನಾ, ಕೆ. ಉಮಾ, ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಕೆ. ಮಾಧವನ್‌, ನಾನಾ ರಾಜಕೀಯ ಪಕ್ಷಗಳ ನೇತಾರರಾದ ಆರ್‌. ಗಂಗಾಧರನ್‌, ಜಿ. ನಾರಾಯಣನ್‌, ಕೆ. ನಾರಾಯಣನ್‌, ರಾಜನ್‌, ರಾಜೇಶ್‌, ಮುಹಮ್ಮದ್‌, ಕೆ. ವಿಜೇಶ್‌, ಕೆ. ಸುರೇಶನ್‌ ಮತ್ತಿತರರು ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ