ಆ್ಯಪ್ನಗರ

ಕೇಂದ್ರ ವಿವಿ ಅರಣ್ಯಕರಣಕ್ಕೆ ಚಾಲನೆ

ಪೆರಿಯಾ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಅರಣ್ಯಕರಣದ ಅಂಗವಾಗಿ ಕೇರಳ ಅರಣ್ಯ ಇಲಾಖೆಯ ಸಹಾಯದೊಂದಿಗೆ ಪೆರಿಯಾ ವಿವಿ ಕ್ಯಾಂಪಸ್‌ನಲ್ಲಿ ಸಸಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Vijaya Karnataka 12 Jul 2019, 5:00 am
ಕಾಸರಗೋಡು: ಪೆರಿಯಾ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಅರಣ್ಯಕರಣದ ಅಂಗವಾಗಿ ಕೇರಳ ಅರಣ್ಯ ಇಲಾಖೆಯ ಸಹಾಯದೊಂದಿಗೆ ಪೆರಿಯಾ ವಿವಿ ಕ್ಯಾಂಪಸ್‌ನಲ್ಲಿ ಸಸಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Vijaya Karnataka Web kendra univercity forestry
ಕೇಂದ್ರ ವಿವಿ ಅರಣ್ಯಕರಣಕ್ಕೆ ಚಾಲನೆ


ವಿವಿ ಕ್ಯಾಂಪಸ್‌ನಲ್ಲಿ ಗಂಧ, ಬೀಟಿ ಸಹಿತ ಹಲವು ಸಸಿಗಳನ್ನು ನೆಟ್ಟು ಬೋಟನಿಕಲ್‌ ಪಾರ್ಕ್‌ ಕ್ಯಾಂಪಸ್‌ನ ಮುಂಭಾಗದಲ್ಲಿ ಸಾವಿರಾರು ಸಸಿಗಳನ್ನು ನೆಡುವ ಕಾರ್ಯಕ್ರಮ ಕೇಂದ್ರ ವಿವಿ ಉಪಕುಲಪತಿ ಡಾ. ಜಿ.ಗೋಪ ಕುಮಾರ್‌ ಚಾಲ ನೀಡಿದರು.

ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸೆಲ್‌, ಪ್ಲಾಂಟ್‌ ಸಯನ್ಸ್‌ ವಿಭಾಗ, ಸ್ವಚ್ಚ ಭಾರತ್‌ ಮಿಷನ್‌ಗಳ ಮೇಲ್ನೋಟದಲ್ಲಿ ಸಜ್ಜುಗೊಳ್ಳುವುದು. ಈ ಸಂದರ್ಭದಲ್ಲಿ ಪ್ರೊ-ಉಪಕುಲಪತಿ ಪ್ರೊ. ಡಾ. ಕೆ.ಜಯಪ್ರಕಾಶ್‌, ರಿಜಿಸ್ಟ್ರಾರ್‌ ಡಾ. ಎ.ರಾಧಾಕೃಷ್ಣನ್‌ ನಾಯರ್‌, ಪರೀಕ್ಷಾ ವಿಭಾಗ ಕಂಟ್ರೋಲರ್‌ ಡಾ. ಮುರಳೀಧರನ್‌ ನಂಬಿಯಾರ್‌, ಎಕ್ಸಿಕ್ಯೂಟಿವ್‌ ಕೌನ್ಸಿಲ್‌ ಸದಸ್ಯರು ಭಾಗವಹಿಸಿದರು.

ವಿದ್ಯಾರ್ಥಿಗಳು ನೆಡುವ ವೃಕ್ಷ ಸಸಿಗಳನ್ನು ರಕ್ಷಿಸುವುದು. ಉತ್ತರ ಮಲಬಾರಿನ ಅತ್ಯುತ್ತಮ ಸಸ್ಯೋದ್ಯನವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದಾಗಿ ಸೆಲ್‌ ಸಂಯೋಜಕ ಡಾ. ಇಫ್ತಿಖಾರ್‌ ಅಹಮ್ಮದ್‌, ಪ್ಲಾಂಟ್‌ ಸೈನ್ಸ್‌ ವಿಭಾಗ ಮುಖ್ಯಸ್ಥ ಡಾ. ಅರುಣ್‌ ಕುಮಾರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ