ಆ್ಯಪ್ನಗರ

ಕೇರಳದ ಕನ್ನಡಿಗ ಹಿರಿಯ ಪೊಲೀಸ್‌ ಅಧಿಕಾರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ

ಕೇರಳದ ಮಲಬಾರ್‌ ಸ್ಪೆಷಲ್‌ ಪೊಲೀಸ್‌ನ ಸಹಾಯಕ ಕಮಾಂಡೆಂಟ್‌, ಕನ್ನಡಿಗ ಶ್ರೀರಾಮ ತಲೆಂಗಳ(54) ಅವರು ತಮ್ಮ ಸೇವಾವಧಿಯಲ್ಲಿ ಸಲ್ಲಿಸಿದ ವಿಶೇಷ ಕಾರ್ಯಕೌಶಲ್ಯತೆಗಾಗಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ-2018ಕ್ಕೆ ಆಯ್ಕೆಯಾಗಿದ್ದಾರೆ.

Vijaya Karnataka 19 Aug 2019, 5:00 am
ಕಾಸರಗೋಡು: ಕೇರಳದ ಮಲಬಾರ್‌ ಸ್ಪೆಷಲ್‌ ಪೊಲೀಸ್‌ನ ಸಹಾಯಕ ಕಮಾಂಡೆಂಟ್‌, ಕನ್ನಡಿಗ ಶ್ರೀರಾಮ ತಲೆಂಗಳ(54) ಅವರು ತಮ್ಮ ಸೇವಾವಧಿಯಲ್ಲಿ ಸಲ್ಲಿಸಿದ ವಿಶೇಷ ಕಾರ್ಯಕೌಶಲ್ಯತೆಗಾಗಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ-2018ಕ್ಕೆ ಆಯ್ಕೆಯಾಗಿದ್ದಾರೆ.
Vijaya Karnataka Web kerala kannadiga police officer bags president seva padaka
ಕೇರಳದ ಕನ್ನಡಿಗ ಹಿರಿಯ ಪೊಲೀಸ್‌ ಅಧಿಕಾರಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ


ಮೂಲತಃ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ತಲೆಂಗಳದ ಕೃಷ್ಣ ಭಟ್‌ ಮತ್ತು ಸುಶೀಲ ಕೃಷ್ಣ ಭಟ್‌ ದಂಪತಿ ಪುತ್ರರಾದ ಇವರು ಪೈವಳಿಕೆ ಕನ್ನಡ ಹಿರಿಯ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿ ದ.ಕ. ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಶಿಕ್ಷ ಣ ಪಡೆದಿದ್ದಾರೆ. ಕಾಲೇಜು ಜೀವನದಲ್ಲಿ ಉತ್ತಮ ಕ್ರೀಡಾಳು(ವೇಟ್‌ ಲಿಫ್ಟಿಂಗ್‌) ಆಗಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.

1992ರಲ್ಲಿ ಕೇರಳ ಪೊಲೀಸ್‌ ಪಡೆಗೆ ಸೇರಿದ ಇವರು ತಿರುವನಂತಪುರದ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದು ಸಬ್‌ ಇನ್ಸ್‌ಪೆಕ್ಟರ್‌ ಆಗಿ ನಿಯುಕ್ತಿಗೊಂಡರು. ಕಣ್ಣೂರು, ಶಬರಿಮಲೆ, ಮಧ್ಯ ಕೇರಳ, ತಿರುವನಂತಪುರ ಹೀಗೆ ಕೇರಳದ ಹಲವೆಡೆ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ಕಣ್ಣೂರು ಸಹಾಯಕ ಕಮಾಂಡೆಂಟ್‌ ಹುದ್ದೆಗೆ ಪದೋನ್ನತಿ ಹೊಂದಿದ ಇವರು 2017ರಲ್ಲಿ ಮಲಬಾರ್‌ ಸ್ಪೆಷಲ್‌ ಪೊಲೀಸ್‌ ಇಲಾಖೆ ಮಲಪ್ಪುರಕ್ಕೆ ವರ್ಗಾವಣೆಗೊಂಡಿದ್ದರು.

ಮಲಬಾರ್‌ ಸ್ಪೆಷಲ್‌ ಪೊಲೀಸ್‌ ಎಂಬುದು ಪೊಲೀಸ್‌ ಹುದ್ದೆಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ. ಇಲ್ಲಿ ತರಬೇತಿ ಪಡೆದವರನ್ನು ನಾನಾ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಳಿಸುತ್ತಾರೆ. ವಿಶೇಷ ಅವಶ್ಯಕತೆಗಳ ಸಂದರ್ಭ ಕಾರ್ಯನಿರ್ವಹಿಸಲು ಪೊಲೀಸರನ್ನು ಪೂರೈಸುವ ಕೆಲಸವೂ ಮಲಬಾರ್‌ ಸ್ಪೆಷಲ್‌ ಪೊಲೀಸ್‌ ಮಾಡುತ್ತದೆ. ಪ್ರಸ್ತುತ ಈ ಕೇಂದ್ರದ ಸಹಾಯಕ ಕಮಾಂಡೆಂಟ್‌ ಜವಾಬ್ದಾರಿಯನ್ನು ಹೊಂದಿದ್ದಾರೆ.

ತಮ್ಮ ಸುದೀರ್ಘ ಸೇವಾವಧಿಯಲ್ಲಿ ಸಲ್ಲಿಸಿದ ಸಮಗ್ರ ಕಾರ್ಯಕೌಶಲ್ಯತೆಗಾಗಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ 2019ಕ್ಕೆ ಆಯ್ಕೆಯಾಗಿದ್ದಾರೆ. ಮಲೆಯಾಳ ನಾಡಲ್ಲಿದ್ದರೂ ಸಾಧನೆಯ ಹಾದಿಯಲ್ಲಿ ಕಲ್ಲರಳಿ ಹೂವಾದ ಈ ಕನ್ನಡಿಗ ಪೊಲೀಸ್‌ ಅಧಿಕಾರಿಯ ಸೇವೆ ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ