ಆ್ಯಪ್ನಗರ

ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಆಹ್ವಾನ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ 2019ನೇ ಸಾಲಿನ ಒಂದು ಸಣ್ಣ ಕಥೆ ಆಯೋಜಿಸಿದ್ದು, ಕಥೆಗಳನ್ನು ಆಹ್ವಾನಿಸಲಾಗಿದೆ.

Vijaya Karnataka Web 11 Mar 2019, 10:04 pm
ಕುಂಬಳೆ : ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಹವ್ಯಕ ಮಹಿಳೆಯರಿಗಾಗಿ 2019ನೇ ಸಾಲಿನ ಒಂದು ಸಣ್ಣ ಕಥೆ ಆಯೋಜಿಸಿದ್ದು, ಕಥೆಗಳನ್ನು ಆಹ್ವಾನಿಸಲಾಗಿದೆ.
Vijaya Karnataka Web kodagina gowramma story compitition
ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಆಹ್ವಾನ


ಯಾವುದೇ ವಯೋಮಿತಿಯಿಲ್ಲದೆ ಹವ್ಯಕ ಮಹಿಳೆಯರು ಕಥಾ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಕಥೆ ಹವ್ಯಕ ಭಾಷೆಯಲ್ಲಿರಬೇಕು. ಈವರೆಗಿನ ಪ್ರಥಮ ವಿಜೇತೆಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸ್ಪರ್ಧೆಯ ಕಥೆಯು ಯಾವುದೇ ಪತ್ರಿಕೆಗಳಲ್ಲಿ ಪ್ರಕಟವಾಗದ ಸಾಮಾಜಿಕ ಕತೆಯಾಗಬೇಕಿದ್ದು, ಸಾಧಾರಣ 8 ಪುಟಕ್ಕೆ ಮೀರಬಾರದು. ಕಾಗದದ ಒಂದೇ ಬದಿಗೆ ಸ್ಪುಟವಾಗಿ ಬರೆದು, ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನಗದು ಪ್ರಥಮ-3 ಸಾವಿರ, ದ್ವಿತೀಯ- 2 ಸಾವಿರ, ತೃತೀಯ- 1 ಸಾವಿರ ರೂ.ನೀಡಿ ಗೌರವಿಸಲಾಗುವುದು. ಆಸಕ್ತರು ಮೇ 30ರೊಳಗಾಗಿ ವಿಜಯಾ ಸುಬ್ರಹ್ಮಣ್ಯ, ಕಾರ್ಯದರ್ಶಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆ,ಕಾರ್ತಿಕೇಯ, ನಾರಾಯಣಮಂಗಲ.ಕಾಸರಗೋಡು ಜಿಲ್ಲೆ ಕಳುಹಿಸಬಹುದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ