ಆ್ಯಪ್ನಗರ

ಭೂಹಕ್ಕುಪತ್ರ ವಿತರಣೆ ಕ್ರಮ ಪೂರ್ಣ: ನಿರ್ದೇಶನ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೂಹಕ್ಕುಪತ್ರ ವಿತರಣಾ ಕ್ರಮಗಳನ್ನು ನ30ರ ಮುಂಚಿತವಾಗಿ ಪೂರ್ಣಗೊಳೀಸಲು ರಾಜ್ಯ ಸರಕಾರ ನಿರ್ದೇಶಿಸಿದೆ.

Vijaya Karnataka 25 Oct 2018, 2:38 pm
ಕಾಸರಗೋಡು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೂಹಕ್ಕುಪತ್ರ ವಿತರಣಾ ಕ್ರಮಗಳನ್ನು ನ.30ರ ಮುಂಚಿತವಾಗಿ ಪೂರ್ಣಗೊಳೀಸಲು ರಾಜ್ಯ ಸರಕಾರ ನಿರ್ದೇಶಿಸಿದೆ.
Vijaya Karnataka Web land records distribution
ಭೂಹಕ್ಕುಪತ್ರ ವಿತರಣೆ ಕ್ರಮ ಪೂರ್ಣ: ನಿರ್ದೇಶನ


50 ಸಾವಿರ ಭೂಹಕ್ಕುಪತ್ರಗಳನ್ನು ನೀಡಲು ತೀರ್ಮಾನಿಸಿದೆ. ಆದರೆ, ಪ್ರಸ್ತುತ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 8000 ಭೂಹಕ್ಕುಪತ್ರಗಳು ಮಾತ್ರವೇ ವಿತರಣೆಗೆ ಸಿದ್ಧವಾಗಿವೆ.

ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಪಾಲ್ಗೊಳ್ಳಿಸಿ ನಡೆಸಿದ ಸಭೆಯಲ್ಲಿ ಸೆಪ್ಟೆಂಬರಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಭೂಹಕ್ಕುಪತ್ರ ಮೇಳಗಳನ್ನು ನಡೆಸಿ 50 ಸಾವಿರ ಜನರಿಗೆ ಭೂಹಕ್ಕುಪತ್ರ ವಿತರಣೆ ಪೂರ್ಣಗೊಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಪ್ರವಾಹ ದುರಂತ ಕಾರಣ ಕ್ರಮಗಳು ನಿರಂತರ ವಿಳಂಬಗೊಳ್ಳುತ್ತಿವೆ. ಆದ್ದರಿಂದಮತ್ತಷ್ಟು ಕಾಲಾವಕಾಶ ನೀಡಲಾಗಿದೆ.

ಫೆಯರ್‌ವಾಲ್ಯೂ ಪರಿಷ್ಕರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳ ಕಾರಣ ಭೂಹಕ್ಕುಪತ್ರ ಮೇಳಗಳಲ್ಲಿ ಗಮನ ಕೇಂದ್ರೀಕರಿಸಲಾಗಿಲ್ಲ ಎಂಬ ನಿಲುವು ಅಧಿಕಾರಿಗಳದ್ದಾಗಿದೆ. ಈವರೆಗೆ ತಯಾರಿಸಿದ ಭೂಹಕ್ಕುಪತ್ರಗಳಿಗೆ ಸಂಬಂಧಿಸಿದ ವರದಿಗಳನ್ನು ಕೇಳುತ್ತಿದ್ದಂತೆ ಈ ವಿಷಯವನ್ನು ಸರಕಾರಕ್ಕೆ ತಿಳಿಸಿದ್ದರು. ಫೆಯರ್‌ವಾಲ್ಯೂ ಪರಿಷ್ಕರಣೆಗೆ ಸಂಬಂಧಿಸಿ ಹಲವಾರು ಕೆಲಸಗಳನ್ನು ಗ್ರಾಮಚೇರಿಗಳಲ್ಲಿ ಮಾಡಿ ಮುಗಿಸಬೇಕು. ಸರ್ವೆ ಸಬ್‌ಡಿವಿಶನ್‌ಗಳ ಸಣ್ಣ ಕೈವಶ ಭೂಮಿ ಕೂಡಾ ತಪಾಸಣೆಗೊಳಪಡಿಸಿ ಬೆಲೆ ನಿರ್ಣಯಿಸಿ ರೆಕಾರ್ಡ್‌ ತಯಾರಿಸುವ ನೌಕರಿಗಳನ್ನು ಗ್ರಾಮಾಧಿಕಾರಿಗಳು ನಿರ್ವಹಿಸಬೇಕು.

ನ. 1ರಿಂದ 3 ತಿಂಗಳೊಳಗೆ ಎಲ್ಲ ಸಬ್‌ ಡಿವಿಶನ್‌ಗಳಲ್ಲಿನ ಅತಿಕ್ರಮಿಸಿದ ಭೂಮಿಯನ್ನು ಪ್ರತ್ಯೇಕವಾಗಿ ನೇರವಾಗಿ ತಪಾಸಣೆಗೊಳಪಡಿಸಿ ಬೆಲೆ ನಿರ್ಣಯಿಸಬೇಕು ಎಂಬುದು ಆಯುಕ್ತರ ನಿರ್ದೇಶನ. ಆದರೆ, ಗ್ರಾಮಾಧಿಕಾರಿಗಳಿಗೆ ದೈನಂದಿನ ನೌಕರಿಗಳಾದ ಮತದಾರ ಪಟ್ಟಿ ನವೀಕರಣ, ಕಂದಾಯ ವಸೂಲಿ ಚಟುವಟಿಕೆಗಳು ಇರುವುದರಿಂದ ಏನು ಮಾಡಬೇಕು ಎಂದು ತಿಳಿಯದ ಸ್ಥಿತಿಯುಂಟಾಗಿದೆ.

ಒಂದು ಗ್ರಾಮದಲ್ಲಿ ಸರಾಸರಿ 50 ಸಾವಿರ ಫೀಲ್ಡ್‌ಗಳಿವೆ. 90 ದಿನಗಳೊಳಗೆ ಕ್ರಮಗಳನ್ನು ಪೂರ್ಣಗೊಳಿಸಬೇಕಿದ್ದರೆ ಪ್ರತಿ ದಿನ 555 ಫೀಲ್ಡ್‌ಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ