ಆ್ಯಪ್ನಗರ

ಕನ್ನಡ ಶಾಲೆಗಳಲ್ಲಿ ಮಲಯಾಳ ಭಾಷೆ ಕಲಿಕೆ ಕಡ್ಡಾಯ

ಈ ಅಧ್ಯಯನ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಶಿಕ್ಷ ಣ ಇಲಾಖೆಯ ತೀರ್ಮಾನದ ವಿರುದ್ಧ ಕಾಸರಗೋಡಿನಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ ಪ್ರತಿಭಟನಾ ಸಪ್ತಾಹ ನಡೆಸುವ ಬಗ್ಗೆ ಶುಕ್ರವಾರ ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Vijaya Karnataka Web 19 May 2018, 2:40 pm
ಕಾಸರಗೋಡು: ಈ ಅಧ್ಯಯನ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಶಿಕ್ಷ ಣ ಇಲಾಖೆಯ ತೀರ್ಮಾನದ ವಿರುದ್ಧ ಕಾಸರಗೋಡಿನಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಮೇ 23ರಿಂದ ಪ್ರತಿಭಟನಾ ಸಪ್ತಾಹ ನಡೆಸುವ ಬಗ್ಗೆ ಶುಕ್ರವಾರ ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
Vijaya Karnataka Web maleyala


ಕೇರಳ ಸರಕಾರ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಮಲೆಯಾಳ ಭಾಷೆಯನ್ನು ಕಡ್ಡಾಯವಾಗಿ ಹೆಚ್ಚುವರಿಯಾಗಿ ಕಲಿಸುವಂತೆ ಹೊರಡಿಸಿದ ಆದೇಶವು ನ್ಯಾಯಬಾಹಿರವಾದದ್ದು, ಸಂವಿಧಾನ ವಿರೋಧಿ ತೀರ್ಮಾನವಾಗಿದೆ. ಇಂತಹ ಆಜ್ಞೆಯನ್ನು ಸರಕಾರ ಶೀಘ್ರ ಹಿಂತೆಗೆದುಕೊಳ್ಳಬೇಕು, ಈ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಕ್ಕಾಗಿ ಕಾಸರಗೋಡಿನ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಮೇ 23ರಿಂದ 29ರ ತನಕ ಒಂದು ವಾರದ ಕಾಲ, ಪ್ರತಿಭಟನಾ ಸಪ್ತಾಹವನ್ನು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಲಾಗುವುದು.

ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಕೆ.ಎಂ. ಬಳ್ಳಕ್ಕುರಾಯ ಅಧ್ಯಕ್ಷ ತೆ ವಹಿಸಿದ್ದರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್ಟ, ಟಿ. ಶಂಕರನಾರಾಯಣ ಭಟ್‌, ವಿ.ಬಿ. ಕುಳಮರ್ವ, ಬೇ.ಸಿ. ಗೋಪಾಲಕೃಷ್ಣ, ಬಳ್ಳಮೂಲೆ ಗೋವಿಂದ ಭಟ್ಟ, ತಾರಾನಾಥ ಮಧೂರು, ಶ್ಯಾಮಪ್ರಸಾದ ಕಲ್ಲಕಟ್ಟ, ಗೋಪಾಲಕೃಷ್ಣ ಭಟ್‌, ಸುಬ್ರಹ್ಮಣ್ಯ ಭಟ್‌, ಮಹಾಲಿಂಗೇಶ್ವರ ಭಟ್ಟ ಎಂ.ವಿ., ಡಾ. ರತ್ನಾಕರ ಮಲ್ಲಮೂಲೆ, ಸತೀಶ ಮಾಸ್ತರ್‌, ಗುರುಪ್ರಸಾದ ಕೋಟೆಕಣಿ, ಪ್ರದೀಪ್‌ ಬೇಕಲ, ಪ್ರದೀಪ್‌, ಅಬ್ದುಲ್‌ರಹಿಮಾನ್‌, ಸೌಮ್ಯಪ್ರಸಾದ್‌, ಪ್ರಶಾಂತ್‌ ಹೊಳ್ಳ, ರಕ್ಷಿತ್‌, ಕೀರ್ತನ್‌ ಕುಮಾರ್‌, ವಿನೋದ್‌ ಕುಮಾರ್‌ ಸಿ.ಎಚ್‌., ಧನೇಶ್‌ ಕೋಟೆಕಣಿ, ಅಜಿತ್‌ ಶೆಟ್ಟಿ ಸಹಿತ ಸ್ನೇಹ ರಂಗ, ಗಿಳಿವಿಂಡು, ಸಿರಿಚಂದನ ಕನ್ನಡ ಯುವ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಕೆ. ಭಾಸ್ಕರ ಸ್ವಾಗತಿಸಿ, ಟಿ. ಶಂಕರನಾರಾಯಣ ಭಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ