ಆ್ಯಪ್ನಗರ

ಮೂರು ವರ್ಷಗಳೊಳಗೆ ಕಾಸರಗೋಡು-ಪಾರಶಾಲ ಮಲೆನಾಡು ಹೆದ್ದಾರಿ

ಕಾಸರಗೋಡು ಜಿಲ್ಲೆಯ ನಂದರಪದವಿನಿಂದ ತಿರುವನಂತಪುರ ಜಿಲ್ಲೆಯ ಪಾರಶಾಲವರೆಗಿನ ಮಲೆನಾಡು ವಲಯಗಳನ್ನು ಜೋಡಿಸುವ ಮಲೆನಾಡು ಹೆದ್ದಾರಿ ಯೋಜನೆ ಮೂರು ವರ್ಷಗಳೊಳಗೆ ಪೂರ್ತಿಯಾಗಲಿದೆ ಎಂದು ಸಚಿವ ಜಿ. ಸುಧಾಕರನ್‌ ತಿಳಿಸಿದ್ದಾರೆ.

Vijaya Karnataka Web 11 May 2018, 5:00 am
ಕಾಸರಗೋಡು: ಕಾಸರಗೋಡು ಜಿಲ್ಲೆಯ ನಂದರಪದವಿನಿಂದ ತಿರುವನಂತಪುರ ಜಿಲ್ಲೆಯ ಪಾರಶಾಲವರೆಗಿನ ಮಲೆನಾಡು ವಲಯಗಳನ್ನು ಜೋಡಿಸುವ ಮಲೆನಾಡು ಹೆದ್ದಾರಿ ಯೋಜನೆ ಮೂರು ವರ್ಷಗಳೊಳಗೆ ಪೂರ್ತಿಯಾಗಲಿದೆ ಎಂದು ಸಚಿವ ಜಿ. ಸುಧಾಕರನ್‌ ತಿಳಿಸಿದ್ದಾರೆ.
Vijaya Karnataka Web malenadu heddari
ಮೂರು ವರ್ಷಗಳೊಳಗೆ ಕಾಸರಗೋಡು-ಪಾರಶಾಲ ಮಲೆನಾಡು ಹೆದ್ದಾರಿ


13 ಜಿಲ್ಲೆಗಳ ಮೂಲಕ 12 ಮೀಟರ್‌ ಅಗಲದಲ್ಲಿ 1251 ಕಿಲೋಮಿಟರ್‌ ಉದ್ದದ ರಸ್ತೆ ನಿರ್ಮಿಸುವುದಾಗಿ ಸಚಿವರು ಹೇಳಿದ್ದಾರೆ. ಅರಣ್ಯ ವಲಯ ಹೊರತುಪಡಿಸಿ ಮೊದಲ ಹಂತದಲ್ಲಿ 750 ಕಿಲೋ ಮೀಟರ್‌ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 110 ಕಿಲೋ ಮೀಟರ್‌ ರಸ್ತೆಯ ನಿರ್ಮಾಣ ಆರಂಭಗೊಂಡಿದೆ. ತಿರುವನಂತಪುರ, ಕೊಲ್ಲಂ, ಇಡುಕ್ಕಿ, ಮಲಪ್ಪುರ, ಕೋಝಿಕ್ಕೋಡು, ವಯನಾಡು, ಕಾಸರಗೋಡು ಜಿಲ್ಲೆಗಳಲ್ಲಿ ರಸ್ತೆ ನಿರ್ಮಾಣಕ್ಕೆ ಇದೀಗ ಸ್ಥಳ ಲಭ್ಯವಿದೆ. ಈ ಜಿಲ್ಲೆಗಳಲ್ಲಿ 493 ಕಿಲೋ ಮೀಟರ್‌ ಉದ್ದದಲ್ಲಿ ಮಲೆನಾಡು ಹೆದ್ದಾರಿ ನಿರ್ಮಿಸಲು 878.40 ಕೋಟಿ ರೂ. ಕೇರಳ ಇನ್‌ಫ್ರಾಸ್ಟ್ರಕ್ಚರ್‌ ಫಂಡ್‌ ಬೋಡ್‌(ಕಿಫ್‌ಬಿ) ಮಂಜೂರುಗೊಳಿಸಿದೆ. ಇದರಲ್ಲಿ ನಾಲ್ಕು ರಸ್ತೆಗಳ ಟೆಂಡರ್‌ ಪ್ರಕ್ರಿಯೆ ಪೂರ್ತಿಯಾಗಿದೆ. ಏಳು ರಸ್ತೆಗಳಿಗೆ ಶೀಘ್ರ ತಾಂತ್ರಿಕ ಅನುಮತಿ ಲಭಿಸಲಿದೆ. ಈ ವರ್ಷವೇ ಈ ರಸ್ತೆಗಳ ನಿರ್ಮಾಣ ಆರಂಭವಾಗಲಿದ್ದು, ಒಂದು ವರ್ಷದೊಳಗೆ ಪೂರ್ತಿಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಒಂಬತ್ತು ಜಿಲ್ಲೆಗಳಲ್ಲಾಗಿ 66.20 ಹೆಕ್ಟೇರ್‌ ಅರಣ್ಯಭೂಮಿ ಮಲೆನಾಡು ಹೆದ್ದಾರಿ ನಿರ್ಮಾಣಕ್ಕಾಗಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಜ್ಯ-ಕೇಂದ್ರ ಅರಣ್ಯ ಇಲಾಖೆಗಳ ಚರ್ಚೆಗಳು ನಡೆಯಲಿವೆ ಎಂದು ಸಚಿವ ಸುಧಾಕರನ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ