ಆ್ಯಪ್ನಗರ

ತಾಯಿ, ಮಗು ಯೋಜನೆಗೆ ಜಿಲ್ಲೆಯಲ್ಲಿ 10 ಕೋಟಿ ರೂ.ನ ಕಟ್ಟಡ

ತಾಯಿ ಮತ್ತು ಮಗು ಯೋಜನೆಯಲ್ಲಿ ಕಾಞಂಗಾಡಿನಲ್ಲಿ ಹತ್ತು ಕೋಟಿ ರೂ.ನ ಕಟ್ಟಡ ನಿರ್ಮಿಸಲಾಗುತ್ತಿದೆ. ಆಸ್ಪತ್ರೆ ಯೋಜನೆಯ ರೂಪುರೇಷೆ(ಡಿಪಿಆರ್‌)ಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು,ಗುತ್ತಿಗೆದಾರರನ್ನು ನಿಗದಿಪಡಿಸಲಾಗಿದೆ.

Vijaya Karnataka 15 Jan 2019, 9:52 pm
ಕಾಸರಗೋಡು: ತಾಯಿ ಮತ್ತು ಮಗು ಯೋಜನೆಯಲ್ಲಿ ಕಾಞಂಗಾಡಿನಲ್ಲಿ ಹತ್ತು ಕೋಟಿ ರೂ.ನ ಕಟ್ಟಡ ನಿರ್ಮಿಸಲಾಗುತ್ತಿದೆ. ಆಸ್ಪತ್ರೆ ಯೋಜನೆಯ ರೂಪುರೇಷೆ(ಡಿಪಿಆರ್‌)ಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು,ಗುತ್ತಿಗೆದಾರರನ್ನು ನಿಗದಿಪಡಿಸಲಾಗಿದೆ.
Vijaya Karnataka Web mother child programe 10 crore building
ತಾಯಿ, ಮಗು ಯೋಜನೆಗೆ ಜಿಲ್ಲೆಯಲ್ಲಿ 10 ಕೋಟಿ ರೂ.ನ ಕಟ್ಟಡ


ಹಳೆಯ ಜಿಲ್ಲಾ ಆಸ್ಪತ್ರೆ ಕಾಂಪೌಂಡಿನಲ್ಲಿ ತಾಯಿ ಮತ್ತು ಮಗು ಯೋಜನೆಗೆ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗ ಅಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ನರ್ಸಿಂಗ್‌ ಕಾಲೇಜು ಕಾರ್ಯಾಚರಿಸುತ್ತಿದೆ. ಪಿ.ಕೆ. ಶ್ರೀಮತಿ ಆರೋಗ್ಯ ಸಚಿವರಾಗಿದ್ದಾಗ ಹೀಗೊಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಬಳಿಕ ತಾಂತ್ರಿಕ ಕಾರಣಗಳಿಂದಾಗಿ ಇದು ಜಾರಿಯಾಗಿಲ್ಲ. ಬಳಿಕ ಬಂದ ಉಮ್ಮನ್‌ಚಾಂಡಿ ಸರಕಾರ ಯೋಜನೆಯನ್ನು ನವೀಕರಿಸಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಆಸ್ಪತ್ರೆ ಆಶಯವನ್ನು ಜಾರಿಗೊಳಿಸಲಾಗುತ್ತಿದೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಒಂದು ವರ್ಷದ ಹಿಂದೆ ಕಾಞಂಗಾಡು ನಗರಸಭಾ ಬÓಸ್‌ ನಿಲ್ದಾಣ ಕಟ್ಟಡದಲ್ಲಿ ನಿರ್ಮಿಸಿದ ಮೊಲೆ ಹಾಲುಣಿಸುವ ಕೇಂದ್ರದ ಉದ್ಘಾಟನೆ ಮಾಡಲು ಬಂದಾಗ ಶೀಘ್ರದಲ್ಲೇ ಈ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಲು ಸಾಧ್ಯ ಎಂದು ಖಾತರಿಪಡಿಸಲಾಗಿತ್ತು.

ನಗರಸಭಾಧ್ಯಕ್ಷ ವಿ. ವಿ. ರಮೇಶನ್‌, ಕಂದಾಯ ಸಚಿವ ಇ. ಚಂದ್ರಶೇಖರನ್‌ ಮೂಲಕ ನಿರಂತರ ಸಂಪರ್ಕಿಸಿದ ಆಧಾರದಲ್ಲಿ ಜಿಲ್ಲೆಯ ಎಲ್ಲ ತಾಯಿಯಂದಿರಿಗೆ ಹಾಗೂ ಮಕ್ಕಳಿಗೆ ಪ್ರಯೋಜನಕಾರಿಯಾಗುವ ಆಸ್ಪತ್ರೆ ಕಾಞಂಗಾಡಿನಲ್ಲಿ ಆರಂಭಗೊಳ್ಳುತ್ತಿದೆ.

ಉಚಿತವಾಗಿ ತಪಾಸಣೆ, ಔಷಧಿ, ಭೋಜನ, 500 ರೂ.ನ ಪ್ರಯಾಣಭತ್ತೆ, ಹೆರಿಗೆ ನಂತರ ಚಿಕಿತ್ಸಾ ಭತ್ಯೆ 700 ರೂ. ಹೀಗೆ ನೀಡುವ ಯೋಜನೆ ಇದಾಗಿದೆ. ಕಾಞಂಗಾಡಿನಲ್ಲಿ ಕಟ್ಟಡ ನಿರ್ಮಾಣಗೊಳ್ಳುವ ಪ್ರದೇಶದಲ್ಲಿ ಹೆಚ್ಚಿನ ಸ್ಥಳ ಲಭಿಸಿದರೆ ಕಣ್ಣುಬ್ಯಾಂಕ್‌, ಮಕ್ಕಳ ಸ್ಪೆಷ್ಯಾಲಿಟಿ ಕ್ಲಿನಿಕ್‌, ಮಕ್ಕಳಿಗೆ ಬೇಕಾದ ಆರೈಕೆ ಎಂಬಿವುಗಳನ್ನು ನಡೆಸಲಾಗುವುದು ಎಂದು ಡಿಎಂಒ ಇನ್‌ಚಾರ್ಜ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ