ಆ್ಯಪ್ನಗರ

ಭಾಷಾ ಅಲ್ಪಸಂಖ್ಯಾತ ಲ್ಲಿಲ್ಲ ಕನ್ನಡದಲ್ಲಿ ಮಾಹಿತಿ !

ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷ ಣ ಇಲಾಖೆ ಜಂಟಿ ವತಿಯಿಂದ ಸಾಕ್ಷ ರತಾ ಮಿಷನ್‌ ಪ್ರಾಧಿಕಾರದ ಸಹಕಾರದೊಂದಿಗೆ ಶನಿವಾರ ಮಂಜೇಶ್ವರ ಎಸ್‌ಎಟಿ ಶಾಲೆಯಲ್ಲಿ ಪ್ರದರ್ಶನದಲ್ಲೂ ಕನ್ನಡದ ಅವಗಣನೆ.

Vijaya Karnataka 13 Jan 2019, 5:00 am
ಕಾಸರಗೋಡು: ಪ್ರಜಾಪ್ರಭುತ್ವ ನೀತಿಯ ಮೌಲ್ಯಗಳನ್ನು ದೇಶದ ಸಂವಿಧಾನದ ಹಿನ್ನೆಲೆಯಲ್ಲಿ ಜನತೆಗೆ ತಿಳಿಸುವ ಮಹತ್ತರ ಉದ್ದೇಶದಿಂದ ಜ.14ರಿಂದ ಮಂಜೇಶ್ವರದಿಂದ ಆರಂಭಗೊಂಡು ತಿರುವನಂತಪುರ ಜ.24ರ ತನಕ ಪರ್ಯಾಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷ ಣ ಇಲಾಖೆ ಜಂಟಿ ವತಿಯಿಂದ ಸಾಕ್ಷ ರತಾ ಮಿಷನ್‌ ಪ್ರಾಧಿಕಾರದ ಸಹಕಾರದೊಂದಿಗೆ ಶನಿವಾರ ಮಂಜೇಶ್ವರ ಎಸ್‌ಎಟಿ ಶಾಲೆಯಲ್ಲಿ ಪ್ರದರ್ಶನದಲ್ಲೂ ಕನ್ನಡದ ಅವಗಣನೆ.
Vijaya Karnataka Web no kannada infomation in language minority area
ಭಾಷಾ ಅಲ್ಪಸಂಖ್ಯಾತ ಲ್ಲಿಲ್ಲ ಕನ್ನಡದಲ್ಲಿ ಮಾಹಿತಿ !


ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವದಲ್ಲಿ ನಡೆದ ಪ್ರದರ್ಶನದಲ್ಲಿ ಮಾಹಿತಿಗಳೆಲ್ಲರೂ ಮಲೆಯಾಳ ಭಾಷೆಯಲ್ಲಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಶಾಲೆಯಲ್ಲಿ ನಡೆದ ಪ್ರದರ್ಶನದಲ್ಲಿ ಕನ್ನಡದಲ್ಲಿ ಮಾಹಿತಿ ನೀಡುವರೂ ಇಲ್ಲದೇ ಕೇವಲ ಪ್ರದರ್ಶನವಾಗಿತ್ತು.

ಜಿಲ್ಲೆಯಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಗಳಲ್ಲಿ ನಿರಂತರ ಕನ್ನಡವನ್ನು ಅವಗಣಿಸುವುದಾಗಿದೆ. ಅದೇ ರೀತಿಯಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಕನ್ನಡವನ್ನು ಅವಗಣಿಸುವುದರ ಮೂಲಕ ಜಿಲ್ಲಾಡಳಿತವು ಕನ್ನಡ ವಿರೋಧ ನಿಲುವು ತಾಳುತ್ತಿದೆ. ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ನೋಟಿಸ್‌, ಬ್ಯಾನರ್‌ ಸಹಿತ ಎಲ್ಲವೂ ದ್ವಿಭಾಷೆಯಲ್ಲಿರಬೇಕೆಂಬ ನಿಯಮವಿದ್ದರೂ, ಕನ್ನಡದವರೇ ಅಧಿಕಾರಿಗಳಿದ್ದರೂ ಕನ್ನಡದಲ್ಲಿ ಮುದ್ರಿಸದೇ ಮಲಯಾಳದಲ್ಲಿಯೇ ಎಲ್ಲವನ್ನೂ ಸಿದ್ಧಪಡಿಸುತ್ತಾರೆ. ಇದು ಭಾಷಾ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುವುದಕ್ಕೆ ಸಮಾನವಾಗಿದೆ ಎಂದು ಕನ್ನಡಿಗರು ದೂರಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ