ಆ್ಯಪ್ನಗರ

ಈರುಳ್ಳಿ ರಹಿತ ಆಮ್ಲೆಟ್‌, ಸುಕ್ಕಾ

ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿಬೇಡಿಕೆದಾರರ ಸಂಖ್ಯೆಯೂ ಕುಸಿದಿದೆ. ಈರುಳ್ಳಿ ರಹಿತ ಭೋಜನ ತಯಾರಿಸುವಲ್ಲಿಗೃಹಿಣಿಯರು ಮಾತ್ರವಲ್ಲದೆ ಹೋಟೆಲ್‌ ಸಿಬ್ಬಂದಿ ಯಶಸ್ವಿಯಾಗುತ್ತಿದ್ದಾರೆ.

Virtual Tourist 15 Dec 2019, 5:00 am
ಕಾಸರಗೋಡು: ಈರುಳ್ಳಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿಬೇಡಿಕೆದಾರರ ಸಂಖ್ಯೆಯೂ ಕುಸಿದಿದೆ. ಈರುಳ್ಳಿ ರಹಿತ ಭೋಜನ ತಯಾರಿಸುವಲ್ಲಿಗೃಹಿಣಿಯರು ಮಾತ್ರವಲ್ಲದೆ ಹೋಟೆಲ್‌ ಸಿಬ್ಬಂದಿ ಯಶಸ್ವಿಯಾಗುತ್ತಿದ್ದಾರೆ. ಇದರಿಂದ ಹೊರ ರಾಜ್ಯಗಳಿಂದ ಜಿಲ್ಲೆಗೆ ತಲುಪುವ ಈರುಳ್ಳಿ ಲೋಡ್‌ಗಳ ಸಂಖ್ಯೆಯೂ ಕಡಿಮೆಯಾಗಿದೆ.
Vijaya Karnataka Web onion less amlet
ಈರುಳ್ಳಿ ರಹಿತ ಆಮ್ಲೆಟ್‌, ಸುಕ್ಕಾ


ಪ್ರತಿ ದಿನ ಕಾಸರಗೋಡು ಜಿಲ್ಲೆಯ ನಾನಾ ಭಾಗಗಳಲ್ಲಿವಿತರಿಸುವುದಕ್ಕಾಗಿ ಮೂವತ್ತು ಟನ್‌ಗೂ ಹೆಚ್ಚು ಈರುಳ್ಳಿ ತಲುಪುತ್ತಿತ್ತು. ಆದರೆ ಈಗ ತರಕಾರಿಗಳನ್ನು ಹೇರಿಕೊಂಡು ಬರುವ ವಾಹನಗಳಲ್ಲಿ50ರಿಂದ 100 ಕಿಲೋವರೆಗೆ ಈರುಳ್ಳಿ ಬರುತ್ತಿದೆ.

ಪುಣೆಯಿಂದ ವಾರದಲ್ಲಿಮೂರು ದಿನಗಳಲ್ಲಿರಾಜ್ಯದ ನಾನಾ ಭಾಗಗಳಿಗೆ ಕಾಸರಗೋಡು ಮೂಲಕ ಹದಿನೈದಕ್ಕೂ ಅಧಿಕ ಲೋಡ್‌ ಈರುಳ್ಳಿ ತಲುಪುತ್ತಿತ್ತು. ಆದರೆ ಈಗ ವಾರದಲ್ಲಿಒಂದು ದಿನ ಮಾತ್ರ ಈರುಳ್ಳಿ ಬರುತ್ತಿದೆ. ಕಾಸರಗೊಡು ಮೂಲಕ ರಾಜ್ಯದ ನಾನಾ ಭಾಗಗಳಿಗೆ ಬರುವ ಈರುಳ್ಳಿ ಲೋಡ್‌ಗಳ ಸಂಖ್ಯೆ ಕೂಡ ಕುಸಿದಿರುವುದಾಗಿ ಲಾರಿ ಚಾಲಕ ಬಾಬು ತಲಕ್ಲಾಯಿ ಹೇಳಿದ್ದಾರೆ.

ಉತ್ತಮ ಗುಣಮಟ್ಟವಿರುವ ಈರುಳ್ಳಿಗೆ ಜಿಲ್ಲೆಯ ನಾನಾ ಭಾಗಗಳಲ್ಲಿಕಿಲೋಗೆ 150 ರೂ.ನಿಂದ 165 ರೂ.ವರೆಗೆ ಬೆಲೆ ಇದೆ. ಸಗಟು ವ್ಯಾಪಾರಿಗಳು 140ರಿಂದ 145 ರೂ.ಗೆ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮಲೇಷ್ಯಾ ಮತ್ತಿತರ ರಾಷ್ಟ್ರಗಳಿಂದ ಈರುಳ್ಳಿ ಆಮದು ಮಾಡಿದರೆ ದರ ಕುಸಿಯಲಿದೆ ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ.

ಖಾದ್ಯಗಳಿಗೆ ಈರುಳ್ಳಿ ಕಡಿತ: ನಗರಗಳಲ್ಲಿಮಾತ್ರವಲ್ಲದೆ ಗ್ರಾಮೀಣ ಹೋಟೆಲ್‌ಗಳಲ್ಲಿಪರೋಟದೊಂದಿಗೆ ಸೇವಿಸಲು ಹೆಚ್ಚು ಇಷ್ಟ ಮೊಟ್ಟೆ ರೋಸ್ಟ್‌ ಅಥವಾ ಚಿಕ್ಕನ್‌ಸುಕ್ಕಾ. ಆದರೆ ಪರೋಟಾಕ್ಕೆ ಜತೆಯಾಗಿದ್ದ ಈ ಎರಡು ಖಾದ್ಯಗಳು ಈಗ ಹೋಟೆಲ್‌ ಟೇಬಲ್‌ಗಳಲ್ಲಿಕಾಣಿಸದೆ ಒಂದು ತಿಂಗಳಿಗಿಂತ ಹೆಚ್ಚಾಯಿತು. ಮೊಟ್ಟೆ ರೋಸ್ಟ್‌ಗೆ ಸಣ್ಣ ಮೊತ್ತ ನೀಡಿದರೆ ಸಾಕು. ಆದರೆ ರೋಸ್ಟ್‌ ತಯಾರಿಸಲು ಅಗತ್ಯವಿರುವ ಈರುಳ್ಳಿ, ಮೊಟ್ಟೆ ಮೊದಲಾದುವುಗಳ ಬೆಲೆಯನ್ನು ಕೂಡಿಸಿದರೆ ಪ್ರಸ್ತುತ ಬೆಲೆಗೆ ಮೊಟ್ಟೆ ರೋಸ್ಟ್‌ ಮಾರಾಟ ಮಾಡಲಾಗದು.

ಬೆಲೆ ಹೆಚ್ಚಿಸಲು ಕೂಡ ಸಾಧ್ಯವಾಗುತ್ತಿಲ್ಲ. ಆದುದರಿಂದ ಈರುಳ್ಳಿಯ ಬೆಲೆ ಇಳಿಕೆಯಾದ ಬಳಿಕವಷ್ಟೇ ರೋಸ್ಟ್‌ ಹಾಗೂ ಚಿಕ್ಕನ್‌ಸುಕ್ಕಾ ಮಾರಾಟ ಮಾಡಲು ಸಾಧ್ಯವಾಗಬಹುದು ಎಂದು ಹೋಟೆಲ್‌ ಮಾಲೀಕರು ಹೇಳುತ್ತಿದ್ದಾರೆ.

ಈರುಳ್ಳಿಯನ್ನು ಅತಿಯಾಗಿ ಉಪಯೋಗಿಸುವ ಬಹುತೇಕ ಖಾದ್ಯಗಳ ತಯಾರಿಯನ್ನು ಹೆಚ್ಚಿನ ಹೋಟೆಲ್‌ಗಳು ನಿಲ್ಲಿಸಿವೆ. ಬೆಲೆ ಹೆಚ್ಚಳ ಕಾರಣ ಕೆಲ ಹೋಟೆಲ್‌ಗಳು ಆಹಾರ ಖಾದ್ಯಗಳಿಗೆ ಬೆಲೆ ಹೆಚ್ಚಿಸಿವೆ.

ಆಮ್ಲೆಟ್‌ ಮಾರಾಟದಲ್ಲೇ ಕುಟುಂಬ ಜೀವನ ಸಾಗಿಸುವವರಿಗೆ ಈರುಳ್ಳಿ ಎಂದು ಕೇಳುವಾಗಲೇ ಕಣ್ಣು ತುಂಬಿ ಬರುತ್ತದೆ. ಆದರೆ ಮಾರುಕಟ್ಟೆಗೆ ಬಂದು ಈರುಳ್ಳಿ ಖರೀದಿಸುವಾಗ ಬೆಲೆ ಕುರಿತು ತಿಳಿಯುತ್ತದೆ. ಪ್ರತಿ ದಿನ ಐದಕ್ಕೂ ಹೆಚ್ಚು ಕಿಲೋ ಈರುಳ್ಳಿಯನ್ನು ಆಮ್ಲೆಟ್‌ಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇದು ಕುಸಿದಿದೆ.

ಡಬಲ್‌ ಆಮ್ಲೆಟ್‌ ಹಾಗೂ ಬ್ರೆಡ್‌ಗೆ ಎರಡು ವಾರಗಳ ಹಿಂದೆ 28 ರೂ. ಬೆಲೆ ಇತ್ತು. ಈರುಳ್ಳಿ ಬೆಲೆ ನೂರು ದಾಟಿ 150ಕ್ಕೆ ತಲುಪಿರುವುದರಿಂದ ಆಮ್ಲೆಟ್‌ ಹಾಗೂ ಬ್ರೆಡ್‌ಗೆ ಬೆಲೆ ಹೆಚ್ಚಿಸದೆ ಬೇರೆ ದಾರಿ ಇಲ್ಲ. ಆದರೆ ಬೆಲೆ ಹೆಚ್ಚಿಸಿದರೆ ವ್ಯಾಪಾರ ಕುಸಿಯಲಿದೆ ಎಂಬ ಕಾರಣದಿಂದ ಲಾಭ ಇಲ್ಲದ ವ್ಯಾಪಾರ ಈಗ ನಡೆಯುತ್ತಿದೆ ಎಂದು ನಗರದ ಆಮ್ಲೆಟ್‌ ವ್ಯಾಪಾರಿಗಳು ಹೇಳುತ್ತಿದ್ದಾರೆ.

ದರ ಏರಿಕೆಯಿಂದಾಗಿ ಆಮ್ಲೆಟ್‌ಗೆ ಈರುಳ್ಳಿ ಸೇರಿಸುವುದನ್ನು ಕಡಿಮೆಗೊಳಿಸಲಾಗಿದೆ. 400ರಿಂದ 500ರಷ್ಟು ಆಮ್ಲೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯಲ್ಲಿಈಗ 200ಕ್ಕಿಂತ ಕಡಿಮೆ ಆಮ್ಲೆಟ್‌ ಮಾರಾಟವಾಗುತ್ತಿದೆ.

ಹೆಚ್ಚಿನ ಹೋಟೆಲ್‌ಗಳಲ್ಲಿಈರುಳ್ಳಿ ಹಾಕದೆ ಆಮ್ಲೆಟ್‌ ತಯಾರಿಸಲಾಗುತ್ತಿದೆ. ಗ್ರಾಮೀಣ ಹೋಟೆಲ್‌ಗಳಲ್ಲಿಈಗ ಬಹುತೇಕ ಈರುಳ್ಳಿರಹಿತ ಖಾದ್ಯಗಳೇ ಲಭ್ಯವಿದೆ. ಈರುಳ್ಳಿ ಬಜೆ ಇತ್ಯಾದಿ ಕಂಡವರಿಲ್ಲ. ಈರುಳ್ಳಿ ಬೆಲೆ ಕುಸಿದು, ಅಗತ್ಯದಷ್ಟು ಮಾರುಕಟ್ಟೆಗೆ ತಲುಪಿದರೆ ಮಾತ್ರ ಹೋಟೆಲ್‌ಗಳಲ್ಲಿಹಳೆಯ ರುಚಿ ಲಭಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ