ಆ್ಯಪ್ನಗರ

ವಾನರರಿಗೆ ಓಣಂ ಸದ್ಯ

ಪ್ರತಿ ವರ್ಷಗಳಂತೆ ಈ ಬಾರಿಯೂ ಇಡಯಿಲಕ್ಕಾಡು ದ್ವೀಪ್‌ನ ಬನದ ವಾನರರ ಗುಂಪಿಗೆ ನೀಡಿದ ಓಣಂ ಸದ್ಯ ಗಮನ ಸೆಳೆಯಿತು.

Vijaya Karnataka Web 14 Sep 2019, 9:10 pm
ಕಾಸರಗೋಡು: ಪ್ರತಿ ವರ್ಷಗಳಂತೆ ಈ ಬಾರಿಯೂ ಇಡಯಿಲಕ್ಕಾಡು ದ್ವೀಪ್‌ನ ಬನದ ವಾನರರ ಗುಂಪಿಗೆ ನೀಡಿದ ಓಣಂ ಸದ್ಯ ಗಮನ ಸೆಳೆಯಿತು.
Vijaya Karnataka Web onum sadhya to monkeys
ವಾನರರಿಗೆ ಓಣಂ ಸದ್ಯ


ಇಡಯಿಲಕ್ಕಾಡು ನವೋದಯ ವಾಚನಾಲಯ ಗ್ರಂಥಾಲಯದ ಹಾಗೂ ಬಾಲವೇದಿಕೆಯ ನೇತೃತ್ವದಲ್ಲಿವಾನರರ ಗುಂಪಿಗೆ ಓಣಂ ಭೋಜನ ನೀಡಲಾಯಿತು. ಬನದ ಸಮೀಪ ರಸ್ತೆ ಬದಿಯಲ್ಲಿಬೆಂಚ್‌ ಹಾಗೂ ಡೆಸ್ಕ್‌ ಇರಿಸಿ ಆಸನಗಳನ್ನು ಸಿದ್ಧಪಡಿಸಿ ಅನ್ನ, ತರಕಾರಿಗಳು, ಹಣ್ಣುಹಂಪಲುಗಳನ್ನು ಬಡಿಸಿ ವಾನರರಿಗೆ ಭೋಜನ ನೀಡಲಾಯಿತು. ಕೂಹೂ ಕೂಗು, ಆಹ್ಲಾದದ ನಗೆಯಾಟಲದೊಂದಿಗೆ ಪಾತ್ರೆಯಲ್ಲಿತುಂಡರಿಸಿಟ್ಟ ಹಣ್ಣಹಂಪಲುಗಳು, ತರಕಾರಿಗಳೊಂದಿಗೆ ರಸ್ತೆಯ ಮೂಲಕ ಹಾದುಬಂದ ಮಕ್ಕಳಿಗೆ ಭಯಹುಟ್ಟಿಸಿ ಪಾತ್ರೆಯಲ್ಲಿರುವ ಖಾದ್ಯಗಳನ್ನು ಖಾಲಿ ಮಾಡಲು ಕೆಲ ವಾನರರು ಮುಂದಾದವು. ವಾನರಪಡೆಗೆ ನಿತ್ಯವೂ ಅನ್ನ ಬಡಿಸುವ ಸಾಲಿನಲ್ಲಿಮಾಣಿಕ್ಕ ಆಗಲೇ ಪಾತ್ರೆಯಲ್ಲಿಉಪ್ಪು ಸೇರ್ಪಡಿಸದೆ ಅನ್ನದೊಂದಿಗೆ ಬನದ ಬದಿ ನಿಂತಿರುವುದರಿಂದ ವಾನರ ಪಡೆಗೆ ಸಂತೋಷವನ್ನು ತಡೆಯಲಾಗಲಿಲ್ಲ. ಪಾತ್ರೆಯಲ್ಲಿತುಂಡರಿಸಿಟ್ಟ ಹಣ್ಣುಹಂಪಲುಗಳು, ತರಕಾರಿಗಳು ಮೊದಲಾದ ಒಂದೊಂದು ಖಾದ್ಯಗಳನ್ನು ಮಕ್ಕಳು ಎಲೆಗೆ ಹಾಕುವುದನ್ನು ಮರದ ಗೆಲ್ಲುಗಳಲ್ಲಿಹಾಗೂ ಬೇಲಿಕಟ್ಟಡದ ಎಡೆಯಲ್ಲಿಕುಳಿತು ವಾನರರು ಎಲ್ಲವನ್ನು ಗಮನಿಸಿ ನೋಡುತ್ತಿದ್ದರು.

ಎಲೆಯಲ್ಲಿಅನ್ನ, ಹಣ್ಣುಹಂಪಲುಗಳು, ತರಕಾರಿಗಳನ್ನೊಳಗೊಂಡ ಖಾದ್ಯಗಳು ತುಂಬಿರುವುದರಿಂದ ಮಾಣಿಕ್ಕ ವಾನರರಲ್ಲಿಹಿರಿಯವನಾದ ಪಪ್ಪಿಯನ್ನು ಕೂಗಿ ಕರೆದರು. ಜನಸಮೂಹವನ್ನು ಕಂಡ ಪಪ್ಪಿ ನಿತ್ಯವೂ ಅನ್ನ ನೀಡುವ ಮಾಣಿಕ್ಕರನ್ನು ಅಲ್ಪ ನಿರಾಶೆಯಿಂದ ನೋಡಿ ಭೋಜನ ಬಡಿಸಿದ ಎಲೆಗಳ ಮುಂದೆ ಬಂದರು. ಪಪ್ಪಿಯ ಬೆನ್ನಲ್ಲೇ ಮರದ ಗೆಲ್ಲುಗಳನ್ನು ಅಲುಗಾಡಿಸಿಕೊಂಡು ಇತರ ವಾನರರು ತಲುಪಿರುವುದರಿಂದ ಭೋಜನಕೂಟ ಕಾಣಲು ತಲುಪಿದ ನೂರಾರು ಮಂದಿಗೆ ಆಹ್ಲಾದ ಸೃಷ್ಟಿಸಿತು. ಅನ್ನದೊಂದಿಗೆ ಹಲಸಿನಹಣ್ಣು, ಟೊಮೇಟೋ, ಅನನಾಸು, ಚಿಕ್ಕು, ಪೇರಳೆ, ಬೀಟ್‌ರೂಟ್‌, ಕ್ಯಾರಟ್‌, ಕಲ್ಲಂಗಡಿ, ಪಪ್ಪಾಯ, ಬಾಳೆಹಣ್ಣು, ತೊಂಡೆಕಾಯಿ, ಪ್ಯಾಶನ್‌ಫ್ರೂಟ್‌ ಮೊದಲಾದ ಹನ್ನೆರಡು ವಿಧದ ಖಾದ್ಯಗಳನ್ನು ಭೋಜನಕ್ಕೆ ಸಿದ್ಧಪಡಿಸಲಾಗಿತ್ತು.

ಹಸಿರು ನೀತಿಸಂಹಿತೆ ಪಾಲಿಸಿ ಸ್ಟೀಲ್‌ ಗ್ಲಾಸ್‌ನಲ್ಲಿಮಂಗಗಳಿಗೆ ಭೋಜನಕ್ಕೆ ನೀರು ನೀಡಲಾಗಿತ್ತು. ಒಟ್ಟು ನಲ್ವತ್ತು ಸದಸ್ಯರಿರುವ ವಾನರರ ತಂಡದಲ್ಲಿಮೂವತ್ತರಷ್ಟು ಮಂದಿ ಭೋಜನ ಸವಿಯಲು ಬಂದರು. ಗ್ರಂಥಾಲಯ ಕಾರ್ಯದರ್ಶಿ ಪಿ.ವೇಣುಗೋಪಾಲನ್‌, ಅಧ್ಯಕ್ಷ ಪಿ.ವಿ.ಪ್ರಭಾಖರನ್‌, ಗ್ರಾಮ ಪಂಚಾಯಿತಿ ಸದಸ್ಯ ವಿ.ಕೆ.ಕರುಣಾಕರನ್‌, ಬಾಲವೇದಿ ಸಂಚಾಲಕ ಎಂ.ಬಾಬು, ಪರಿಸರ ಕಾರ್ಯಕರ್ತ ಆನಂದ್‌ ಪೇಕ್ಕಡಂ, ಬಾಲವೇದಿ ಪದಾಧಿಕಾರಿಗಳಾದ ಆರ್ಯ ಎಂ.ಬಾಬು, ವಿ.ಹಿದಲ್‌ ನೇತೃತ್ವ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ