ಆ್ಯಪ್ನಗರ

ಸಂಪಾಜೆ ಶೀನಪ್ಪರಿಗೆ ಪಟ್ಟಾಜೆ ಪ್ರಶಸ್ತಿ ಪ್ರದಾನ

ಕಲೆ ಮತ್ತು ಕಲಾವಿದನ ನಡುವಿನ ಅವರ್ಣನೀಯ ಅನುಬಂಧ ಕಲಾವಿದನನ್ನು ಕಲೆಯ ಔನತ್ಯವನ್ನು ಪ್ರಸ್ತುತ ಪಡಿಸುವಂತೆ ಪ್ರೇರೇಪಿಸುತ್ತದೆ.

Vijaya Karnataka 7 Mar 2019, 5:00 am
ಕಾಸರಗೋಡು: ಕಲೆ ಮತ್ತು ಕಲಾವಿದನ ನಡುವಿನ ಅವರ್ಣನೀಯ ಅನುಬಂಧ ಕಲಾವಿದನನ್ನು ಕಲೆಯ ಔನತ್ಯವನ್ನು ಪ್ರಸ್ತುತ ಪಡಿಸುವಂತೆ ಪ್ರೇರೇಪಿಸುತ್ತದೆ. ಯಾವುದೋ ಅವ್ಯಕ್ತ ಶಕ್ತಿಯೊಂದು ತನ್ನ ಪ್ರಭಾವದಿಂದಾಗಿ ಕಲಾವಿದನ ಕಲಾ ಸಾಧನೆಗೆ ಕಾರಣವಾಗುತ್ತದೆ. ಹಾಗೆಯೇ ಸತತ ಪರಿಶ್ರಮದಿಂದ, ಸಮರ್ಪಣೆಯಿಂದ, ಭಕ್ತಿ ಶ್ರದ್ಧೆಯಿಂದ ಮಾಡುವ ಕಲಾ ಸೇವೆಗೆ ಕಲ್ಲೊಂದು ಶಿಲ್ಪವಾಗುವಂತೆ ಕಲಾವಿದ ಪೂರ್ಣತೆಯನ್ನು ಪಡೆಯುತ್ತಾನೆ. ಇದಕ್ಕೆ ಶೀನಪ್ಪ ರೈಗಳೇ ಸಾಕ್ಷಿ ಎಂದು ಉಜಿರೆ ಅಶೋಕ್‌ ಭಟ್‌ ಹೇಳಿದರು.
Vijaya Karnataka Web pattaje award to sampaje sheenappa
ಸಂಪಾಜೆ ಶೀನಪ್ಪರಿಗೆ ಪಟ್ಟಾಜೆ ಪ್ರಶಸ್ತಿ ಪ್ರದಾನ


ಅವರು ಮಾನ್ಯ ಶಾಲಾ ವಠಾರದಲ್ಲಿ ಸಾಮ್ರಾಟ್‌ ಮಾನ್ಯ ಆಯೋಜಿಸಿದ್ದ ಪಟ್ಟಾಜೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಯಕ್ಷ ಗಾನ ಬಯಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಳಿ ವಯಸ್ಸಿನಲ್ಲೂ ಯುವಕನ ಶರೀರ ಮತ್ತು ಮನಸ್ಸು ಹಾಗೂ ಕಲಾ ಪ್ರಸ್ತುತಿ ಬೆರಗು ಮೂಡಿಸುತ್ತದೆ. ನಾಟ್ಯದಲ್ಲಿ ಅಭಿಮಾನಿಗಳ ಮನ ಗೆಲ್ಲುವ ಈ ಕಲಾ ಸಂಪನ್ನನ ಮಾತಿನ ಮೋಡಿ, ರಾಜ ಗಾಂಭೀರ್ಯ, ಪಾತ್ರಗಳಿಗೆ ಜೀವ ತುಂಬುವ ಪರಿ ಒಂದು ವಿಸ್ಮಯ. ಯಾವುದೇ ವೇಷವನ್ನಾದರೂ ಸುಲಲಿತವಾಗಿ, ಆಕರ್ಷಕವಾಗಿ ಮಾಡಿ ಮುಗಿಸುವ ಶೀನಪ್ಪ ರೈ ತನ್ನ 13ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟವರು. ಬಹುಶಃ ಯಕ್ಷ ಕಲಾವಿದನಾಗಿ 1000ಕ್ಕಿಂತಲೂ ಅಧಿಕ ವೇದಿಕೆಗಳಲ್ಲಿ ಸಮ್ಮಾನಿಸಲ್ಪಟ್ಟ ಏಕೈಕ ವ್ಯಕ್ತಿ ಎಂದರೆ ಅತಿಶಯೋಕ್ತಿಯಲ್ಲ ಎಂದು ಅವರು ಹೇಳಿದರು.

ಯಕ್ಷ ಲೋಕದ ಸರದಾರನನ್ನು ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳೂ ಹಲವು. ಕಲೆಗಾಗಿ ಸಮರ್ಥಿಸಿಕೊಂಡ ಜೀವನದಲ್ಲಿ ನೀಡಿದ ಕೊಡುಗೆಯನ್ನು, ಮಾಡಿದ ತ್ಯಾಗವನ್ನು, ಪಾಲಿಸಿಕೊಂಡು ಬಂದ ನಿಷ್ಠೆಯನ್ನು ಇಂದಿನ ಯುವ, ಬಾಲ ಕಲಾವಿದರು ಆನುಸರಿಸಬೇಕು, ಆಳವಡಿಸಿಕೊಳ್ಳಬೇಕು. ಯಕ್ಷಗಾನವನ್ನೇ ಉಸಿರಾಡುವ ಈ ಮಹಾಸಾಧಕನಿಗೆ ಸರಸ್ವತಿಯು ನೆಲೆಯಾಗಿರುವ ಈ ಪುಣ್ಯ ಭೂಮಿಯಲ್ಲಿ ಪಟ್ಟಾಜೆ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಕಲೆಗೆ ನೕಡುವ ಆತ್ಯುನ್ನತ ಗೌರವವೇ ಸರಿ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಬದಿಯಡ್ಕ ಪಂಚಾಯಿತಿ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಉದ್ಘಾಟಿಸಿದರು.

ಬದಿಯಡ್ಕ ಪಂಚಾಯಿತಿ ಶಿಕ್ಷ ಣ ಸ್ಥಾಯಿ ಸಮಿತಿ ಆಧ್ಯಕ್ಷ ಶ್ಯಾಮ ಪ್ರಸಾದ್‌ ಮಾನ್ಯ ಅಧ್ಯಕ್ಷ ತೆ ವಹಿಸಿದ್ದÜರು. ರವೀಶ ಯಾದವ್‌ ಸನ್ಮಾನ ಪತ್ರ ವಾಚಿಸಿದರು. ಈ ಸಂದರ್ಭದಲ್ಲಿ ಯಕ್ಷ ರಂಗದ ಮೇರು ಕಲಾವಿದ ಸಂಪಾಜೆ ಶೀನಪ್ಪ ರೈ ಅವರಿಗೆ ಪಟ್ಟಾಜೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಕೆಜಿಎಂಒಎ 2018ನೇ ಸಾಲಿನ ಕೇರಳ ರಾಜ್ಯ ಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ. ಜನಾರ್ದನ ನಾಯಕ್‌ ಸಿ.ಎಚ್‌. ಅವರನ್ನು ಸನ್ಮ್ಮಾನಿಸಲಾಯಿತು. ರಮೇಶ್‌ ಸ್ವಾಗತಿಸಿ, ಐತ್ತಪ್ಪ ನಾಯ್ಕ ವಂದಿಸಿದರು. ಸುಂದರ ಮಾಸ್ತರ್‌ ಕಾರ್ಯಕ್ರಮ ನಿರೂಪಿಸಿದರು.

ಆ ಬಳಿಕ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷ ಗಾನ ಮಂಡಳಿ ಹನುಮಗಿರಿ ಇವರಿಂದ ಸಂಪೂರ್ಣ ಕುರುಕ್ಷೇತ್ರ ಎಂಬ ಬಯಲಾಟ ಪ್ರದರ್ಶನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ