ಆ್ಯಪ್ನಗರ

ಇಲಿಜ್ವರ: ಪ್ರತಿರೋಧಕ ಚಟುವಟಿಕೆ ಚುರುಕು

ಬಳಾಲ್‌ ಪಂಚಾಯಿತಿಯಲ್ಲಿಇಲಿಜ್ವರ ಬಾಧಿಸಿ ಮೂವರು ಮೃತಪಟ್ಟಿದ್ದಾರೆ. ಕಲ್ಲಂಚಿರಕ ಮಲಪ್ಪಾರವ್‌ ಕೃಷ್ಣನ್‌(45), ಎಡಕಾನಂ ರಾಜನ್‌(55), ಕಾರ್ಯೋಟ್‌ಚಾಲ್‌ ಕೃಷ್ಣನ್‌(43) ಮೃತಪಟ್ಟವರು.

Vijaya Karnataka 27 Sep 2019, 5:00 am
ಕಾಸರಗೋಡು: ಬಳಾಲ್‌ ಪಂಚಾಯಿತಿಯಲ್ಲಿಇಲಿಜ್ವರ ಬಾಧಿಸಿ ಮೂವರು ಮೃತಪಟ್ಟಿದ್ದಾರೆ. ಕಲ್ಲಂಚಿರಕ ಮಲಪ್ಪಾರವ್‌ ಕೃಷ್ಣನ್‌(45), ಎಡಕಾನಂ ರಾಜನ್‌(55), ಕಾರ್ಯೋಟ್‌ಚಾಲ್‌ ಕೃಷ್ಣನ್‌(43) ಮೃತಪಟ್ಟವರು. ಮೂವರು ತೀವ್ರವಾದ ಜ್ವರ ಬಾಧಿಸಿ ವೆಳ್ಳರಿಕುಂಡು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಚಿಕಿತ್ಸೆ ಪಡೆದಿದ್ದರೂ ರೋಗ ಉಲ್ಬಣಗೊಂಡ ಕಾರಣ ಎರಡು ದಿನಗಳ ಹಿಂದೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಾವಸ್ಥೆ ಗಂಭೀರಗೊಂಡು ಮೂವರು ಮೃತಪಟ್ಟಿದ್ದಾರೆ. ಈ ಮಧ್ಯೆ ಜ್ವರ ಬಾಧಿಸಿದ ಒಬ್ಬಾತನನು ನುರಿತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web rat fever
ಇಲಿಜ್ವರ: ಪ್ರತಿರೋಧಕ ಚಟುವಟಿಕೆ ಚುರುಕು


ಇಲಿ ಜ್ವರ ಕಾರಣ ಆರೋಗ್ಯ ಇಲಾಖೆ ಹಾಗೂ ಬಳಾಲ್‌ ಪಂಚಾಯಿತಿ ಪ್ರತಿರೋಧಕ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ. ಎರಡು ದಿನ ಪಂಚಾಯಿತಿಯ ಎಲ್ಲಪ್ರದೇಶಗಳಲ್ಲಿಧ್ವನಿವರ್ಧಕ ಪ್ರಚಾರ ಮೂಲಕ, ಕರಪತ್ರಗಳನ್ನು ವಿತರಿಸುವುದರ ಮೂಲಕ ತಿಳುವಳಿಕೆ ಮೂಡಿಸಲಾಗುವುದು. ಉದ್ಯೋಗ ಖಾತರಿ ಕಾರ್ಮಿಕರು, ಗದ್ದೆ-ಹಿತ್ತಿಲುಗಳಲ್ಲಿದುಡಿಯುವವರು, ಮಲಿನ ನೀರಿನೊಂದಿಗೆ ಸಂಪರ್ಕದಲ್ಲಿಏರ್ಪಡುವ ಸಾಧ್ಯತೆ ಇರುವವರು ಆರೋಗ್ಯ ಕಾರ್ಯಕರ್ತರ ನಿರ್ದೇಶನ ಅನುಸಾರ ಡಾಕ್ಸಿಸೈಕ್ಲಿನ್‌ ಗುಳಿಗೆಗಳನ್ನು, ಪ್ರತಿರೋಧಕ ಗುಳಿಗೆಗಳನ್ನು ಸೇವಿಸಬೇಕಿದೆ. ಜ್ವರ ಬಾಧಿಸಿದರೆ ಕೂಡಲೇ ವೈದ್ಯಕೀಯ ತಪಾಸಣೆ ನಡೆಸಬೇಕಿದೆ. ಜ್ವರ, ಕಣ್ಣು ಕೆಂಪಾಗುವುದು, ಹಳದಿಕಾಮಲೆ ಲಕ್ಷಣಗಳು ಕಂಡುಬಂದರೆ ಇಲಿಜ್ವರ ಹೌದೋ ಅಲ್ಲವೋ ಎಂಬುದನ್ನು ದೃಢೀಕರಿಸಬೇಕು. ಕಾಲಲ್ಲಿನೀರು ಬರುವುದು, ಸ್ನಾಯು ನೋವು ಎಂಬಿವು ಇಲಿಜ್ವರದ ಲಕ್ಷಣಗಳು ಆಗಿರುತ್ತವೆ. ಆರಂಭದಲ್ಲೇ ಪತ್ತೆಹಚ್ಚಿದರೆ ಸುಲಭದಲ್ಲಿಚಿಕಿತ್ಸೆ ಮಾಡಿ ಗುಣಮುಖಗೊಳಿಸಬಹುದು ಎಂದು ವೆಳ್ಳರಿಕುಂಡು ವೈದ್ಯಾಧಿಕಾರಿ ಡಾ. ಎಸ್‌. ಎಸ್‌. ರಾಜಶ್ರೀ ಹೇಳಿದ್ದಾರೆ. ಇಲಿಗಳು ಮಾತ್ರವಲ್ಲಇತರ ಪ್ರಾಣಿಗಳ ಮೂತ್ರ ಬೆರೆತು ಮಲಿನವಾಗುವ ಮಣ್ಣಿನಿಂದ ಗಾಯದ ಮೂಲಕ ಮೊದಲಾಗಿ ರೋಗಾಣು ಶರೀರಕ್ಕೆ ಬಂದು ಹತ್ತು ದಿನಗಳೊಳಗೆ ರೋಗಲಕ್ಷಣಗಳು ಗೋಚರಿಸುತ್ತವೆ.

ಬಳಾಲ್‌ ಪಂಚಾಯಿತಿನಲ್ಲಿಪ್ರತ್ಯೇಕವಾಗಿ ನಡೆದ ಅವಲೋಕನ ಸಭೆಯನ್ನು ಪಂಚಾಯಿತಿ ಅಧ್ಯಕ್ಷೆ ಎಂ. ರಾಧಾಮಣಿ ಉದ್ಘಾಟಿಸಿದರು. ಉಪಾಧ್ಯಕ್ಷ ರಾಜುಕಟ್ಟಕ್ಕಯಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಆರೋಗ್ಯ ವಿಭಾಗವನ್ನು ಪ್ರತಿನಿಧೀಕರಿಸಿ ಡಾ. ಮನೋಜ್‌, ನಂದಕುಮಾರ್‌, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿಲ್ವಿ ಪ್ರಭಾಕರನ್‌, ಸದಸ್ಯರಾದ ಮಾಧವನ್‌ ನಾಯರ್‌, ಎ. ವಿ. ಮ್ಯಾಥ್ಯೂ, ಸತ್ಯನ್‌, ಕೃಷ್ಣನ್‌, ಆರೋಗ್ಯ ಇನ್ಸ್‌ಪೆಕ್ಟರ್‌ ಅಜಿತ್‌ ಸಿ. ಫಿಲಿಪ್‌, ಸುಜಿತ್‌ ಕುಮಾರ್‌, ರಂಜಿತ್‌ಲಾಲ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ