ಆ್ಯಪ್ನಗರ

ರವೀಶ ತಂತ್ರಿ ಚುನಾವಣಾ ಪ್ರಚಾರಕ್ಕೆ ಚಾಲನೆ

ಲೋಕಸಭೆ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು ಆಯ್ಕೆಯಾದ ಬಳಿಕ ಪ್ರಚಾರ ಕಾರ್ಯ ಶನಿವಾರ ಆರಂಭಗೊಂಡಿತು.

Vijaya Karnataka 24 Mar 2019, 5:00 am
ಕಾಸರಗೋಡು: ಲೋಕಸಭೆ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ರವೀಶ ತಂತ್ರಿ ಕುಂಟಾರು ಆಯ್ಕೆಯಾದ ಬಳಿಕ ಪ್ರಚಾರ ಕಾರ್ಯ ಶನಿವಾರ ಆರಂಭಗೊಂಡಿತು.
Vijaya Karnataka Web raveesha tantri election campaign begins
ರವೀಶ ತಂತ್ರಿ ಚುನಾವಣಾ ಪ್ರಚಾರಕ್ಕೆ ಚಾಲನೆ


ಇದರಂತೆ ಶನಿವಾರ ಬೆಳಗ್ಗೆ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಹಾಗೂ ಬಿಜೆಪಿ ನೇತಾರರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಧನಂಜಯ ಮಧೂರು, ಹರೀಶ ನಾರಂಪಾಡಿ, ಹರೀಶ ಗೋಸಾಡ, ಅವಿನಾಶ್‌ ರೈ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಜಿಲ್ಲೆಯ ಹಿರಿಯ ಬಿಜೆಪಿ ನೇತಾರ ದಿ. ಮಡಿಕೈ ಕಮ್ಮಾರನ್‌ ಅವರ ಸ್ಮೃತಿ ಮಂಟಪಕ್ಕೆ ಭೇಟಿ ನೀಡಿ ಪುಷ್ಪಾರ್ಚನೆ ನಡೆಸಿದರು. ಅಲ್ಲಿಂದ ಪ್ರಚಾರ ಆರಂಭಿಸಿದ ರವೀಶ ತಂತ್ರಿ, ಕಾಞಂಗಾಡು ಮಂಡಲದಲ್ಲಿ ಪರ್ಯಟನೆ ನಡೆಸಿದರು. ಕಾಞಂಗಾಡ್‌ನಲ್ಲಿ ಹಿರಿಯ ಬಿಜೆಪಿ ನೇತಾರ ಉಮಾನಾಥ ರಾವ್‌ ಮನೆಗೆ ಭೇಟಿ ನೀಡಿದರು.

ಎನ್‌ಡಿಎ ಅಭ್ಯರ್ಥಿಯಾದ ಬಳಿಕ ಶುಕ್ರವಾರ ಸಂಜೆ ಕಾಸರಗೋಡಿಗೆ ಆಗಮಿಸಿದ ರವೀಶ ತಂತ್ರಿ ಕುಂಟಾರು ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಎನ್‌ಡಿಎ ಚುನಾವಣಾ ಪ್ರಚಾರ ಸಮಿತಿ ಕಚೇರಿ ಪರಿಸರದಲ್ಲಿ ನೇತಾರರು ತಂತ್ರಿಯವರನ್ನು ಬರಮಾಡಿಕೊಳ್ಳಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾಯ್ಕ್‌, ಎನ್‌ಡಿಎ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌, ಆರ್‌ಸ್ಸೆಸ್‌ ತಾಲೂಕು ಸಂಘ ಚಾಲಕ್‌ ದಿನೇಶ್‌ ಮಡಪ್ಪುರ, ಸಹ ಸಂಘ ಚಾಲಕ್‌ ಗಣಪತಿ ಕೋಟೆಕಣಿ, ಎನ್‌ಡಿಎ ಸಂಚಾಲಕ, ಬಿಡಿಜೆಎಸ್‌ ಜಿಲ್ಲಾಧ್ಯಕ್ಷ ಗಣೇಶ್‌ ಪಾರೆಕಟ್ಟ, ಬಿಜೆಪಿ ರಾಜ್ಯ ಕೌನ್ಸಿಲ್‌ ಸದಸ್ಯೆ ಸರೋಜಾ ಆರ್‌. ಬಲ್ಲಾಳ್‌, ಸಮಿತಿ ಸದಸ್ಯರಾದ ವಿ. ಬಾಲಕೃಷ್ಣ ಶೆಟ್ಟಿ, ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಕಾರ‍್ಯದರ್ಶಿ ಪುಷ್ಪ ಅಮ್ಮೆಕ್ಕಳ, ಕೇರಳ ಕಾಂಗ್ರೆಸ್‌ ಪಿ.ಸಿ. ತೋಮಸ್‌ ವಿಭಾಗ ಜಿಲ್ಲಾಧ್ಯಕ್ಷ , ಕೃಷ್ಮನ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ, ಸವಿತಾ ಟೀಚರ್‌, ಸತ್ಯಶಂಕರ ಭಟ್‌, ಪ್ರದಾನ ಕಾರ‍್ಯದರ್ಶಿ ಎ. ವೇಲಾಯುಧನ್‌, ಪಿ. ರಮೇಶನ್‌, ಜಿ. ಚಂದ್ರನ್‌ ಮತ್ತಿತರರು ಭಾಗವಹಿಸಿದ್ದÜರು.

ಭಾನುವಾರ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಅವರು ಕುಂಬಳೆ ಕಣಿಪುರ ಕ್ಷೇತ್ರ ದರ್ಶನ, ಕುಂಬಳೆಯಲ್ಲಿ ಮತ ಯಾಚನೆ, ಬಳಿಕ ಉದುಮ ಮಂಡಲ ಎನ್‌ಡಿಎ ಚುನಾವಣಾ ಸಮಿತಿ ಕಚೇರಿಯನ್ನು ಪೋಯಿನಾಚಿಯಲ್ಲಿ ಉದ್ಘಾಟಿಸುವರು. ಬಳಿಕ ಪಯ್ಯನ್ನೂರಿನ ಸಾಂಸ್ಕೃತಿಕ, ಸಾಹಿತ್ಯಿಕ ವಲಯದ ಪ್ರಮುಖರನ್ನು ಭೇಟಿ ಮಾಡುವರು. ಬಳಿಕ ಪೆರಿಂಗಾನ ಪಂಚಾಯಿತಿ ಸಮಾವೇಶ, ಚೆರುಪ್ಪುಯದಲ್ಲಿ ಮತ ಯಾಚನೆ, ಕ್ಷೇತ್ರಗಳಿಗೆ ಭೇಟಿ, ಚುನಾವಣಾ ಕಚೇರಿ ಉದ್ಘಾಟನೆ, ಅಪರಾಹ್ನ ಕಲ್ಯಾಶ್ಯೇರಿ ಮಂಡಲ ಚುನಾವಣಾ ಕಚೇರಿಯನ್ನು ಉದ್ಘಾಟಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ