ಆ್ಯಪ್ನಗರ

ಪಡಿತರ ಕಾರ್ಡ್‌ಗಾಗಿ ದಾಖಲೆಯ ಅರ್ಜಿ ಸಲ್ಲಿಕೆ

ಪಡಿತರ ಕಾರ್ಡಿಗಾಗಿ ರಾಜ್ಯದಲ್ಲಿ ಹತ್ತು ದಿನಗಳಲ್ಲಿ 3,73,338 ಅರ್ಜಿಗಳು ಬಂದಿವೆ.

Vijaya Karnataka 9 Jul 2018, 5:00 am
ಕಾಸರಗೋಡು: ಪಡಿತರ ಕಾರ್ಡಿಗಾಗಿ ರಾಜ್ಯದಲ್ಲಿ ಹತ್ತು ದಿನಗಳಲ್ಲಿ 3,73,338 ಅರ್ಜಿಗಳು ಬಂದಿವೆ. ಜೂ. 25ರಿಂದ ನೂತನ ಪಡಿತರ ಕಾರ್ಡಿಗೆ ಹಾಗೂ ಇತರ ಅಗತ್ಯಗಳಿಗಾಗಿ ರಾಜ್ಯದ 81 ತಾಲೂಕು ಸಪ್ಲೈ ಕಚೇರಿಗಳಲ್ಲಿ, ಸಿಟಿ ರೇಶನಿಂಗ್‌ ಕಚೇರಿಗಳಲ್ಲಿ ಅರ್ಜಿ ಸ್ವೀಕರಿಸಲು ಆರಂಭಿಸಲಾಗಿತ್ತು.
Vijaya Karnataka Web record application for ration card
ಪಡಿತರ ಕಾರ್ಡ್‌ಗಾಗಿ ದಾಖಲೆಯ ಅರ್ಜಿ ಸಲ್ಲಿಕೆ


ತ್ರಿಶ್ಯೂರು, ಪಾಲಕ್ಕಾಡು, ಕೊಲ್ಲಂ, ಮಲಪ್ಪುರ ಜಿಲ್ಲೆಗಳಲ್ಲಿ ಅತ್ಯಧಿಕ ಅರ್ಜಿದಾರರಿದ್ದಾರೆ. ತ್ರಿಶ್ಯೂರು ಜಿಲ್ಲೆಯ ತಲಪಳ್ಳಿ ಅತ್ಯಧಿಕ ಅರ್ಜಿಗಳು ಬಂದ ತಾಲೂಕು ಆಗಿದೆ. 12000 ಅರ್ಜಿಗಳು ತಲಪಳ್ಳಿ ತಾಲೂಕಿನಲ್ಲಿ ಲಭಿಸಿವೆ.

ನಾಲ್ಕು ವರ್ಷಗಳ ಬಳಿಕ ಸಿವಿಲ್‌ ಸಪ್ಲೈಸ್‌ ಇಲಾಖೆ ನೂತನ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಇದು ಅರ್ಜಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ತಾಲೂಕು ಸಪ್ಲೈ ಕಚೇರಿಗಳ ಜನದಟ್ಟಣೆ ಪರಿಗಣಿಸಿ ಹೆಚ್ಚಿನ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳನ್ನು ಕೇಂದ್ರೀಕರಿಸಿ ಪ್ರತ್ಯೇಕ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ದೈನಂದಿನ ಏಳುನ್ನೂರರಿಂದ ಸಾವಿರದವರೆಗೆ ಅರ್ಜಿಗಳು ಲಭಿಸುತ್ತಿವೆ. ಒಂದು ದಿನ 1500 ಅರ್ಜಿಗಳು ಲಭಿಸಿದ ತಾಲೂಕುಗಳಿವೆ.

ನೂತನ ಪಡಿತರ ಕಾರ್ಡು, ಈಗಿರುವ ಕಾರ್ಡ್‌ನ್ನು ಇನ್ನೊಂದು ತಾಲೂಕಿಗೆ ಸ್ಥಳಾಂತರಿಸುವುದು, ಕಾರ್ಡಿನ ಸದಸ್ಯರನ್ನು ಬೇರೆ ತಾಲೂಕಿಗೆ ಸ್ಥಳಾಂತರಿಸುವುದು, ನೂತನ ಸದಸ್ಯರನ್ನು ಸೇರ್ಪಡಿಸುವುದು, ತಪ್ಪು ತಿದ್ದುಪಡಿ, ನಕಲಿ ಕಾರ್ಡು, ಸದಸ್ಯರನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವುದು, ಪಡಿತರ ಕಾರ್ಡನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವುದು, ಕಾರ್ಡು ನವೀಕರಣ, ಕಾರ್ಡಿನಲ್ಲಿ ಒಳಪಡಿಸದವರ ಸರ್ಟಿಫಿಕೆಟ್‌ಗಳು ಮೊದಲಾದವುಗಳ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗುತ್ತದೆ.

ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸುವ ಮೊದಲು ನೇರವಾಗಿ ಅರ್ಜಿಗಳನ್ನು ಸ್ವೀಕರಿಸಿರುವುದು ಸಪ್ಲೈ ಕಚೇರಿಗಳಿಗೆ ಇಮ್ಮಡಿ ಹೊಡೆತವಾಗಿ ಪರಿಣಮಿಸಿದೆ. ಅರ್ಜಿಗಳನ್ನು ನೇರವಾಗಿ ಸ್ವೀಕರಿಸಿದವುಗಳನ್ನು ಆಧಾರ್‌ನೊಂದಿಗೆ ಜೋಡಿಸಿ ನೂತನ ಸಾಫ್ಟ್‌ವೇರ್‌ಗೆ ಬದಲಾಯಿಸಬೇಕಿದೆ. ಆನ್‌ಲೈನ್‌ ನೋಂದಣಿಯನ್ನು ಜು. 16ರಿಂದ ಸ್ವೀಕರಿಸಲಾಗುವುದು ಎಂದು ಹೇಳಿದರೂ ನೇರವಾಗಿ ಅರ್ಜಿ ಸಲ್ಲಿಸುವವರಲ್ಲಿ ಗಣನೀಯವಾದ ಹೆಚ್ಚಳ ಉಂಟಾಗಿದೆ.

ಈ ಅರ್ಜಿಗಳನ್ನು ನೂತನ ಸಾಫ್ಟ್‌ವೇರ್‌ಗೆ ಬದಲಾಯಿಸಿದ ಬಳಿಕವಷ್ಟೇ ಪಡಿತರ ಕಾರ್ಡು ವಿತರಿಸಲು ಸಾಧ್ಯವಿದೆ. ಎರಡು ವಯಸ್ಸಿಗಿಂತ ಹೆಚ್ಚಿನ ಪ್ರಾಯದ ಮಕ್ಕಳ ಆಧಾರ್‌ ಕಾರ್ಡು ಸಹಿತ ಪಡಿತರ ಕಾರ್ಡು ಅರ್ಜಿಯಲ್ಲಿ ಸೇರ್ಪಡಿಸಬೇಕಿದೆ. ಆದರೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಕಚೇರಿಯ ಕೆಲಸದೊತ್ತಡ ಪರಿಹರಿಸಲು ಸಾಧ್ಯವಾಗಲಿದೆ. ನೂತನ ಪಡಿತರ ಕಾರ್ಡುಗಳನ್ನು ಎರಡು ತಿಂಗಳೊಳಗೆ ನೀಡಲು ತೀರ್ಮಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ