ಆ್ಯಪ್ನಗರ

ನಕಲಿ ಮತ: ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಕೆ

ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ನಕಲಿ ಮತ ಚಲಾಯಿಸಿದ ಬಗ್ಗೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿರುವ 43 ಸೂಕ್ಷ ್ಮ ಮತಗಟ್ಟೆಗಳ ವೆಬ್‌ ಕ್ಯಾಮೆರಾಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ನೇತೃತ್ವದಲ್ಲಿ ಪರಿಶೀಲಿಸಿ ಸೋಮವಾರ ವರದಿ ಸಲ್ಲಿಸಿದ್ದಾರೆ.

Vijaya Karnataka 7 May 2019, 5:00 am
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ನಕಲಿ ಮತ ಚಲಾಯಿಸಿದ ಬಗ್ಗೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾಸರಗೋಡು ಲೋಕಸಭೆ ಕ್ಷೇತ್ರಕ್ಕೆ ಒಳಪಟ್ಟಿರುವ 43 ಸೂಕ್ಷ ್ಮ ಮತಗಟ್ಟೆಗಳ ವೆಬ್‌ ಕ್ಯಾಮೆರಾಗಳನ್ನು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ಬಾಬು ನೇತೃತ್ವದಲ್ಲಿ ಪರಿಶೀಲಿಸಿ ಸೋಮವಾರ ವರದಿ ಸಲ್ಲಿಸಿದ್ದಾರೆ.
Vijaya Karnataka Web report to state chief election commissioner
ನಕಲಿ ಮತ: ಮುಖ್ಯ ಚುನಾವಣಾಧಿಕಾರಿಗೆ ವರದಿ ಸಲ್ಲಿಕೆ


ಕಾಸರಗೋಡು ವಿಧಾನಸಭೆ ಕ್ಷೇತ್ರದ 4, ಉದುಮ ವಿಧಾನಸಭೆ ಕ್ಷೇತ್ರದ 3, ಹೊಸದುರ್ಗ ಕ್ಷೇತ್ರದ 13 ಮತ್ತು ತೃಕರಿಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 23 ಸೂಕ್ಷ ್ಮ ಮತಗಟ್ಟೆಗಳ ವೆಬ್‌ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಭಾನುವಾರ ಈ ಬಗ್ಗೆ ಪರಿಶೀಲನೆ ಆರಂಭಿಸಲಾಗಿದೆ. ಅಸಿಸ್ಟೆಂಟ್‌ ರಿಟರ್ನಿಂಗ್‌ ಆಫೀಸರ್‌ಗಳು, ಬೂತ್‌ ಮಟ್ಟದ ಅಧಿಕಾರಿಗಳು ಮತ್ತು ತಾಂತ್ರಿಕ ಪರಿಣಿತರು ಭಾಗವಹಿಸಿದ್ದÜರು. ಪ್ರತಿ ಮತಗಟ್ಟೆಗಳ ವೆಬ್‌ ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು. ಈ ಪೈಕಿ ಕೆಲವು ನಕಲಿ ಮತ ಚಲಾಯಿಸಿರುವ ಮತಗಟ್ಟೆಗಳ ಮಾಹಿತಿಗಳನ್ನು ದಾಖಲಿಸಿ ಸಮಗ್ರ ವರದಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಅದರ ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕ್ರಮ ಕೈಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ