ಆ್ಯಪ್ನಗರ

ಜೀವನಶೈಲಿ ರೋಗಗಳ ವಿರುದ್ಧ ತಿಳುವಳಿಕಾ ಓಟ

ಕಾಸರಗೋಡು: ಪಡನ್ನಕ್ಕಾಡು ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ ಘಟಕದ ಆಶ್ರಯದಲ್ಲಿ ಜೀವನ ಶೈಲಿ ರೋಗಗಳ ವಿರುದ್ಧ ತಿಳುವಳಿಕಾ ಸಾಮೂಹಿಕ ಓಟ ನಡೆಯಿತು.

Vijaya Karnataka 2 Dec 2018, 5:00 am
ಕಾಸರಗೋಡು: ಪಡನ್ನಕ್ಕಾಡು ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್‌ಸಿಸಿ ಘಟಕದ ಆಶ್ರಯದಲ್ಲಿ ಜೀವನ ಶೈಲಿ ರೋಗಗಳ ವಿರುದ್ಧ ತಿಳುವಳಿಕಾ ಸಾಮೂಹಿಕ ಓಟ ನಡೆಯಿತು.
Vijaya Karnataka Web KSG-1KSLNCC


ಪಡನ್ನಕ್ಕಾಡು, ಕರುವಳಂ, ತೀರ್ಥಾಂಕರ ಪ್ರದೇಶಗಳ ಮೂಲಕ ನಡೆಸಿದ ಸಾಮೂಹಿಕ ಓಟದಲ್ಲಿ ನೂರು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಎನ್‌ಸಿಸಿ ಅಧಿಕಾರಿ ಲೆಫ್ಟ್‌ನೆಂಟ್‌ ನಂದಕುಮಾರ್‌ ಕೋರೋತ್‌ ಧ್ವಜಾರೋಹಣ ಮಾಡಿದರು. ಅಂಡರ್‌ ಅಧಿಕಾರಿಗಳಾದ ಕೆ.ಪಿ. ವಿನೀತ್‌, ರಿಯ ಪಿ. ರಾಜು, ಟಿ. ಎಸ್‌. ಶ್ರೀವಿದ್ಯಾ ನೇತೃತ್ವ ನೀಡಿದರು.

ಜೀವನಶೈಲಿ ರೋಗಗಳನ್ನು ತಡೆಗಟ್ಟುವಲ್ಲಿ ವ್ಯಾಯಾಮದ ಪ್ರಾಶಸ್ತ್ಯ ಎಂಬ ವಿಷಯದಲ್ಲಿ ಚರ್ಚೆಯಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ