ಆ್ಯಪ್ನಗರ

ಪಯಸ್ವಿನಿ ಹೊಳೆಯಿಂದ ಮರಳು ಲೂಟಿ

ಪಯಸ್ವಿನಿ ಹೊಳೆಯಿಂದ ಅಕ್ರಮ ಮರಳು ಸಾಗಾಟ ವ್ಯಾಪಕಗೊಳ್ಳುತ್ತಿರುವುದಾಗಿ ದೂರಲಾಗಿದೆ. ಪಯಸ್ವಿನಿ ಹೊಳೆಯ ಅರಮನಪಡಿ ತುಗುಸೇತುವೆಯ ಸಮೀಪದ ಭಾಗದಿಂದ ಮರಳು ಲೂಟಿ ನಡೆಯುತ್ತಿದೆ. ಹೊಳೆಯಲ್ಲಿ ನೀರು ಕಡಿಮೆ ಆಗಿರುವುದರಿಂದ ಮತ್ತೆ ಮರಳು ಲೂಟಿ ವ್ಯಾಪಕಗೊಂಡಿದೆ.

Vijaya Karnataka 12 Mar 2019, 5:00 am
ಕಾಸರಗೋಡು: ಪಯಸ್ವಿನಿ ಹೊಳೆಯಿಂದ ಅಕ್ರಮ ಮರಳು ಸಾಗಾಟ ವ್ಯಾಪಕಗೊಳ್ಳುತ್ತಿರುವುದಾಗಿ ದೂರಲಾಗಿದೆ. ಪಯಸ್ವಿನಿ ಹೊಳೆಯ ಅರಮನಪಡಿ ತುಗುಸೇತುವೆಯ ಸಮೀಪದ ಭಾಗದಿಂದ ಮರಳು ಲೂಟಿ ನಡೆಯುತ್ತಿದೆ. ಹೊಳೆಯಲ್ಲಿ ನೀರು ಕಡಿಮೆ ಆಗಿರುವುದರಿಂದ ಮತ್ತೆ ಮರಳು ಲೂಟಿ ವ್ಯಾಪಕಗೊಂಡಿದೆ.
Vijaya Karnataka Web sand loot from payaswini river
ಪಯಸ್ವಿನಿ ಹೊಳೆಯಿಂದ ಮರಳು ಲೂಟಿ


ಹೊಳೆಬದಿ ರಾಶಿ ಹಾಕಲಾದ ಮಣ್ಣನ್ನು ಗೋಣಿಗಳಲ್ಲಿ ತುಂಬಿಸಿ ಹೊಳೆಬದಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯ ಮೂಲಕ ರಾತ್ರಿ ವೇಳೆಗಳಲ್ಲಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಈ ರೀತಿ ದೈನಂದಿನ ಹತ್ತು ಲೋಡ್‌ಗೂ ಮಿಕ್ಕ ಮರಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ ಎಂದು ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.

ಪಯಸ್ವಿನಿ ಹೊಳೆಯ ಮೂಲಕ ಹಗಲು ವೇಳೆಯಲ್ಲಿ ಕೂಡ ದೋಣಿಗಳಲ್ಲಿ ಮರಳು ತುಂಬಿಸಿಕೊಂಡು ಹೋಗುವುದು ದೈನಂದಿನ ದೃಶ್ಯವಾಗಿದೆ. ಮರಳು ಸಾಗಾಟದಿಂದ ತೂಗುಸೇತುವೆಯ ಕಂಬಗಳು ಅಪಾಯ ಭೀತಿ ಎದುರಿಸಲಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ಹೊರತು ಈ ಭಾಗದ ರಸ್ತೆಗಳು ಹಾನಿಗೀಡಾಗುತ್ತಿರುವುದಾಗಿಯೂ, ಹೊಳೆಯ ತಡೆಗೋಡೆ ಶಿಥಿಲಗೊಳ್ಳುತ್ತಿರುವುದಾಗಿಯೂ ನಾಗರಿಕರು ಹೇಳುತ್ತಿದ್ದಾರೆ.

ಬೇಡಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶ ಇದಾಗಿದೆ. ಅಕ್ರಮ ಮರಳು ಸಆಗಾಟದ ವಿರುದ್ಧ ಪೊಲೀಸರ ಭಾಗದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ