ಆ್ಯಪ್ನಗರ

ಎಂಡೋಸಲ್ಫಾನ್‌ ಸಂತ್ರಸ್ತ ವಲಯದಲ್ಲಿ ಸಾಂತ್ವನ ಸ್ಪರ್ಶ

ಎಂಡೋಸಲ್ಫಾನ್‌ ಸಂತ್ರಸ್ತ ವಲಯದ ಬಡ್ಸ್‌ ಶಾಲೆಯ ಪುಟಾಣಿಗಳಿಗೆ ಕಲಿಕೋಪಕರಣ ವಿತರಣೆಯೊಂದಿಗೆ ರಾಜ್ಯದ ನಾನಾ ಜಿಲ್ಲೆಗಳ ಯುವಕರು ಈ ಬಾರಿಯೂ ಕಾಸರಗೋಡು ಜಿಲ್ಲೆಗೆ ಬಂದಿದ್ದಾರೆ.

Vijaya Karnataka 10 Jun 2019, 5:00 am
ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತ ವಲಯದ ಬಡ್ಸ್‌ ಶಾಲೆಯ ಪುಟಾಣಿಗಳಿಗೆ ಕಲಿಕೋಪಕರಣ ವಿತರಣೆಯೊಂದಿಗೆ ರಾಜ್ಯದ ನಾನಾ ಜಿಲ್ಲೆಗಳ ಯುವಕರು ಈ ಬಾರಿಯೂ ಕಾಸರಗೋಡು ಜಿಲ್ಲೆಗೆ ಬಂದಿದ್ದಾರೆ.
Vijaya Karnataka Web santhwana sparsha to endosulphan victims
ಎಂಡೋಸಲ್ಫಾನ್‌ ಸಂತ್ರಸ್ತ ವಲಯದಲ್ಲಿ ಸಾಂತ್ವನ ಸ್ಪರ್ಶ


ಕೇರಳ ಯುವ ಭಡ್ತಿ ಸಮಿತಿಯ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಸುವ ಸಾಂತ್ವನ ಯೋಜನೆಯ ಅಂಗವಾಗಿ ಕಾರಡ್ಕ ಸ್ನೇಹ ಬಡ್ಸ್‌ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಲಾಯಿತು.

ಮಕ್ಕಳಿಗೆ ಅಗತ್ಯವಿರುವ ಕಲಿಕೋಪಕರಣಗಳು, ನಾನಾ ಉದ್ಯೋಗ ವಲಯಗಳಲ್ಲಿ ತರಬೇತಿ ಯುವ ಭಡ್ತಿ ಸಮಿತಿ ಒಂದು ವರ್ಷಕ್ಕೆ ನಡೆಸಲಿದೆ. ಪ್ಲಸ್‌ವನ್‌ ಕಲಿಕೆಯಲ್ಲಿ ಆಸಕ್ತಿ ತೋರಿಸಿದ ವಿದ್ಯಾರ್ಥಿನಿಯೊಬ್ಬರ ವಿದ್ಯಾಭ್ಯಾಸ ಖರ್ಚನ್ನು ಪ್ರಸ್ತುತ ಸಮಿತಿ ವಹಿಸುತ್ತಿದೆ.

ರಾಜ್ಯ ಅಧ್ಯಕ್ಷ ಡಾ. ಸುಮನ್‌ಜಿತ್‌ ಮಿಷ ಅಧ್ಯಕ್ಷ ತೆ ವಹಿಸಿದ್ದರು. ಕಾರಡ್ಕ ಪಂಚಾಯಿತಿ ಅಧ್ಯಕ್ಷೆ ಅನುಸೂಯ ರೈ ಉದ್ಘಾಟಿಸಿದರು. ಉಪಾಧ್ಯಕ್ಷ ವಿನೋದ್‌ ನಂಬಿಯಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ Ü ವಿಜಯಕುಮಾರ್‌, ರೇಣುಕಾ ದೇವಿ, ಜನಿ, ಪಂಚಾಯಿತಿ ಕಾರ್ಯದರ್ಶಿ ನಂದಗೋಪಾಲ್‌, ಸಮಿತಿ ಪದಾಧಿಕಾರಿಗಳಾದ ಸುನಿಲ್‌ ಸುರೇಂದ್ರನ್‌, ಎಂ.ಎ. ಸಜ್ಜಾದ್‌, ಸಾದಿಖ್‌, ಮನ್ಸೂರ್‌, ಹರಿಕುಟ್ಟನ್‌, ಕಿರಣ್‌ ಶಾನಿಫ್‌ ನೆಲ್ಲಿಕಟ್ಟೆ, ಸಫ್ವಾನ್‌ ಚೆಡೇಕ್ಕಾಲ್‌, ಶಾಲಾ ಪ್ರತಿನಿಧಿ ಭಾರತಿ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ