ಆ್ಯಪ್ನಗರ

ಉಪ್ಪಳ, ಕುಂಬಳೆ ಭಾಗದಲ್ಲಿ ಉಬ್ಬಿದ ಕಡಲು

ಬಿರುಸಿನ ಗಾಳಿ ಮಳೆಗೆ ಉಪ್ಪಳ, ಕುಂಬಳೆ ಭಾಗದಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರಾಶಾಯಿಯಾಗುತ್ತಿದೆ...

Vijaya Karnataka 10 Jun 2018, 5:00 am
ಕುಂಬಳೆ: ಬಿರುಸಿನ ಗಾಳಿ ಮಳೆಗೆ ಉಪ್ಪಳ, ಕುಂಬಳೆ ಭಾಗದಲ್ಲಿ ಮರಗಳು, ವಿದ್ಯುತ್‌ ಕಂಬಗಳು ಧರಾಶಾಯಿಯಾಗುತ್ತಿದೆ. ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯವರೆಗೂ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್‌ ಮೊಟಕುಗೊಂಡು ಜನತೆ ಕಂಗಾಲಾಗಿದ್ದಾರೆ.
Vijaya Karnataka Web sea errosion
ಉಪ್ಪಳ, ಕುಂಬಳೆ ಭಾಗದಲ್ಲಿ ಉಬ್ಬಿದ ಕಡಲು


ಧರಾಶಾಯಿತಾದ ವಿದ್ಯುತ್‌ ಕಂಬ, ವೃಕ್ಷಗಳು: ಉಪ್ಪಳ ಶಾರದಾ ನಗರದಲ್ಲಿ 9 ವಿದ್ಯುತ್‌ ಕಂಬಗಳು, ಮಣಿಮುಂಡದಲ್ಲಿ 2 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಪರಿಸರದಲ್ಲಿ ವಿದ್ಯುತ್‌ ಮೊಟಕುಗೊಂಡಿದೆ. ಮಾತ್ರವಲ್ಲದೆ ಭಾರೀ ಗಾಳಿಯಿಂದಾಗಿ ಕಂಬಗಳು ಮಧ್ಯಭಾಗದಿಂದ ತುಂಡರಿಸ್ಪಡುತ್ತಿದ್ದು, ಭಾರೀ ಅಪಾಯವನ್ನು ಸೂಚಿಸುತ್ತಿದೆ. ನಿರಂತರ ಧರಾಸಾಯಿಯಾಗುತ್ತಿರುವ ವಿದ್ಯುತ್‌ ಪೋಸ್ಟ್‌ಗಳಿಂದ ಜಿಲ್ಲೆಯಾದ್ಯಂತ ಹೆಚ್ಚಿನ ಕಡೆಗಳಲ್ಲಿ ಶುಕ್ರವಾರ ಸಂಜೆಯಿಂದಲೇ ವಿದ್ಯುತ್‌ ಮೊಟಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಇದೇ ಸ್ಥಿತಿ ಅನುಭವಿಸಬೇಕಾಗಿ ಬರಬಹುದು ಎಂದು ನಾಗರಿಕರು ಕಂಗಾಲಾಗಿದ್ದಾರೆ. ಬೃಹತ್‌ ಗಾತ್ರದ ಮರಗಳು ವಿದ್ಯುತ್‌ ಪೋಸ್ಟ್‌ಗಳ ಮೇಲೆ ಬಿದ್ದು, ಹಾನಿ ಸಂಭವಿಸುತ್ತಿದೆ. ಮಣಿಮುಂಡ ಭಾಗದಲ್ಲಿ ಮರವೊಂದು ರಸ್ತೆಗೆ ಬಿದ್ದುದರಿಂದ ಕೆಲ ಕಾಲ ರಸ್ತೆ ಸಂಚಾರ ತಡೆಯಾಗಿತ್ತು. ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಲಾಯಿತು.

ಕುಂಬಳೆಯಲ್ಲಿ ಮನೆ ಕುಸಿತ: ಕುಂಬಳೆ ಸಮೀಪದ ಶಾಂತಿಪಳ್ಳದಲ್ಲಿ ಅಂಗನವಾಡಿ ಹಿಂಭಾಗದಲ್ಲಿರುವ ದಿ.ರಾಜೇಂದ್ರನ್‌ ಎಂಬವರ ಮನೆ ಶನಿವಾರ ಬಿಳಿಗ್ಗೆ ಬೀಸಿದ ಗಾಳಿಗೆ ಬಹುತೇಕ ಕುಸಿದು ಬಿದ್ದಿದೆ. ಈ ಮನೆಯಲ್ಲಿ ರಾಜೇಂದ್ರನ್‌ ಅವರ ಪತ್ನಿ ಸೆಲ್ವಿ, ಪುತ್ರಿ ವಿಷ್ಣುಪ್ರಿಯ ವಾಸಿಸುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಇದ್ದ ಒಂದು ಪುಟ್ಟ ಹೆಂಚಿನ ಮನೆ ಇದೀಗ ಕುಸಿದು ಬಿದ್ದಿದ್ದರಿಂದ ಇವರ ಪಾಡು ಬೀದಿಗೆ ಬಂದಂತಾಗಿದೆ.

ಉಬ್ಬಿದ ಕಡಲು: ಭಾರೀ ಗಾಳಿ ಮಳೆಯಿಂದಾಗಿ ಶಾರದಾ ನಗರ, ಹನುಮಾನ್‌ ನಗರ, ಮುಸೋಡಿ, ಮಣಿಮುಂಡ, ಕುಂಬಳೆ ಕಡಪ್ಪುರ, ಬೇರಿಕೆ ಮುಂತಾದೆಡೆಗಳಲ್ಲಿ ಭಾರೀ ಕಡಲುಬ್ಬರ ಕಂಡು ಬರುತ್ತಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಬೃಹತ್‌ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಮೀನುಗಾರಿಕೆ ಯಾರೂ ತೆರಳದೆ ಮನೆಯಲ್ಲಿಯೇ ಇರಬೇಕಾದ ಸ್ಥಿತಿ ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ