ಆ್ಯಪ್ನಗರ

ಚಿತ್ತಾರಿಯಲ್ಲಿ ಕಡಲ್ಕೊರೆತ: ಮನೆಗೆ ನುಗ್ಗಿದ ನೀರು

ಚಿತ್ತಾರಿಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಳ್ಳುತ್ತಿದೆ. ಶುಕ್ರವಾರ ಸಂಭವಿಸಿದ ಕಡಲ್ಕೊರೆತದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಾಲನ್‌ ಕೊಡಕ್ಕಾರನ್‌, ಕಾತ್ರ್ಯಾಯಿನಿ, ಅಂಬಿಕ, ಶೈಜು, ಶಾಂತ, ವಾಸು ಎಂಬವರ ಮನೆಗಳಿಗೆ ನೀರು ನುಗ್ಗಿದೆ.

Vijaya Karnataka 7 Jul 2019, 5:00 am
ಕಾಸರಗೋಡು: ಚಿತ್ತಾರಿಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಳ್ಳುತ್ತಿದೆ. ಶುಕ್ರವಾರ ಸಂಭವಿಸಿದ ಕಡಲ್ಕೊರೆತದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಾಲನ್‌ ಕೊಡಕ್ಕಾರನ್‌, ಕಾತ್ರ್ಯಾಯಿನಿ, ಅಂಬಿಕ, ಶೈಜು, ಶಾಂತ, ವಾಸು ಎಂಬವರ ಮನೆಗಳಿಗೆ ನೀರು ನುಗ್ಗಿದೆ.
Vijaya Karnataka Web sea errosion at chithari house in danger
ಚಿತ್ತಾರಿಯಲ್ಲಿ ಕಡಲ್ಕೊರೆತ: ಮನೆಗೆ ನುಗ್ಗಿದ ನೀರು


ಪಶ್ಚಿಮ ಭಾಗ ಸಮುದ್ರ, ದಕ್ಷಿಣ ಭಾಗದ ಅಳಿವೆಬಾಗಿಲು, ಚಿತ್ತಾರಿ ಹೊಳೆ ಸೇರಿ ಮೂರು ಭಾಗ ನೀರಿನಿಂದ ಆವತ್ತಗೊಂಡ ಚಿತ್ತಾರಿ ಕಡಪ್ಪುರದ ನಿರ್ಗತಿಕರಾದ ಮೀನುಕಾರ್ಮಿಕರು ಕಡಲ್ಕೊರೆತ ಕಾರಣ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೇಕಲ ಕೋಟೆಗೆ ಸಮಾನವಾಗಿ ನೂರೈವತ್ತರಷ್ಟು ಮೀಟರ್‌ ತೀರವನ್ನು ಕಡಲು ಆಕ್ರಮಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪುದಿಯವಳಪ್ಪ್‌, ಅಜಾನೂರು ಭಾಗಗಳಲ್ಲಿ ಸಣ್ಣ ರೀತಿಯಲ್ಲಿ ಕಡಲ್ಕೊರೆತ ಭೀತಿಯಿದೆ. ನೂರಾರು ಮನೆಗಳು ಅಪಾಯ ಭೀತಿಯಲ್ಲಿವೆ.

ಇದೇ ಸಂದರ್ಭ ಕಡಲ್ಕೊರೆತ ಭೀತಿ ತೀವ್ರಗೊಂಡಿದ್ದರೂ ಇತ್ತ ಅಧಿಕಾರಿಗಳು ತಿರುಗಿಯೂ ನೋಡುತ್ತಿಲ್ಲ ಎಂದು ನಾಗರಿಕರು ಹೇಳುತ್ತಿದ್ದಾರೆ. ಕಳೆದ ಮುಂಗಾರು ಸಂದರ್ಭ ಕಾಞಂಗಾಡು ಕಡಪ್ಪುರ ರಸ್ತೆಯನ್ನು ಸಂಪೂರ್ಣವಾಗಿ ಕಡಲು ನುಂಗಿದೆ. ಹಾನಿಗೀಡಾದ ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಸಿ ಸಾರಿಗೆ ಸೌಕರ್ಯ ವ್ಯವಸ್ಥೆ ಮಾಡಿದರೂ ಸಾರಿಗೆ ಮರುಸ್ಥಾಪಿಸಲು ಸಾಧ್ಯವಾಗಿಲ್ಲ. ಸಮುದ್ರ ತಡೆಗೋಡೆ ನಿರ್ಮಿಸಿ ಸಮುದ್ರ ತೀರ ಸಂರಕ್ಷಿಸಬೇಕು ಎಂದು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಅಧಿಕಾರಿಗಳ ಭಾಗದಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ವರ್ಷ ಮನವಿಗಳೊಂದಿಗೆ ಸರಕಾರಿ ಕಚೇರಿಗಳಿಗೆ ಹತ್ತಿ ಇಳಿಯಬೇಕಾಗಿರುವುದು ಇವರ ಹಣೆಬರಹವಾಗಿ ಪರಿಣಮಿಸಿದೆ. ಸ್ಥಳ ಸಂದರ್ಶಿಸುವ ಜನಪ್ರತಿನಿಧಿಗಳು ಭರವಸೆಗಳನ್ನು ನೀಡುತ್ತಿದ್ದರೂ ಬಳಿಕ ಇವರು ಇತ್ತ ಕಾಣಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಮೀನುಗಾರಿಕಾ ನಿಷೇಧಕ್ಕೆ ನೂಕಿದ ಮೀನುಕಾರ್ಮಿಕರಿಗೆ ಕಡಲ್ಕೊರೆತ ಭೀತಿ ಉಂಟಾಗಿರುವುದರಿಂದ ಆತಂಕ ಎದುರಾಗಿದೆ. ಮಳೆ ತೀವ್ರಗೊಂಡಿರುವುದರಿಂದ ಕಾಸರಗೋಡು ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಕಸಬ, ಶಿರಿಯ, ಅಜಾನೂರು, ತೃಕ್ಕನ್ನಾಡು, ಚಿತ್ತಾರಿ, ನೀಲೇಶ್ವರ, ತೈಕಡಪ್ಪುರ ಪ್ರದೇಶಗಳು ಕಡಲ್ಕೊರೆತ ಭೀತಿ ಎದುರಿಸುತ್ತಿವೆ. ಶುದ್ಧ ಜಲಸಂಪನ್ಮೂಲಗಳಿದ್ದರೂ ಉಪ್ಪು ನೀರು ನುಗ್ಗುವುದರಿಂದ ಉಪಯೋಗಿಸಲು ಸಾಧ್ಯವಾಗದ ಸ್ಥಿತಿಯುಂಟಾಗಿದೆ. ಸ್ನಾನ ಮಾಡಲು ಕೂಡಾ ಈ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಾಗರಿಕರ ದೂರು. ಇದರ ಬೆನ್ನಲ್ಲೇ ಮಳೆಗಾಲದಲ್ಲಿ ಕಡಲೊರೆತ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ