ಆ್ಯಪ್ನಗರ

ಶಬರಿಮಲೆ ದೇಗುಲದ ಚಿನ್ನ, ಬೆಳ್ಳಿ ನಾಪತ್ತೆ : ಅಲ್ಲಗಳೆದ ದೇವಸ್ವಂ ಮಂಡಳಿ

ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಭಕ್ತರು ಹರಕೆ ಹಾಗೂ ಕಾಣಿಕೆ ರೂಪದಲ್ಲಿ ನೀಡಿರುವ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳ ಲೆಕ್ಕಾಚಾರ ಮತ್ತು ದಾಖಲು ಪತ್ರಗಳ ಆಡಿಟಿಂಗ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಪ್ರಚಾರವಾಗಿದ್ದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಯಾವುದೇ ಚಿನ್ನಾಭರಣ ನಾಪತ್ತೆಯಾಗಿಲ್ಲ ಎಂದು ದೇವಸ್ವಂ ಮಂಡಳಿ ಸ್ಪಷ್ಟಪಡಿಸಿದೆ.

Vijaya Karnataka 28 May 2019, 7:39 am
ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಭಕ್ತರು ಹರಕೆ ಹಾಗೂ ಕಾಣಿಕೆ ರೂಪದಲ್ಲಿ ನೀಡಿರುವ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳ ಲೆಕ್ಕಾಚಾರ ಮತ್ತು ದಾಖಲು ಪತ್ರಗಳ ಆಡಿಟಿಂಗ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಪ್ರಚಾರವಾಗಿದ್ದು ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಯಾವುದೇ ಚಿನ್ನಾಭರಣ ನಾಪತ್ತೆಯಾಗಿಲ್ಲ ಎಂದು ದೇವಸ್ವಂ ಮಂಡಳಿ ಸ್ಪಷ್ಟಪಡಿಸಿದೆ.
Vijaya Karnataka Web Sabarimale


ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಲಾದ ಆರನ್ಮುಳ ಕ್ಷೇತ್ರದ ತಿರುವಾಂಕೂರು ದೇವಸ್ವಂ ಮಂಡಳಿಯ ಸ್ಟ್ರಾಂಗ್‌ ರೂಂ ಹಾಗೂ ಶಬರಿಮಲೆಯ ದಾಖಲೆಗಳಲ್ಲಿ ಸುಮಾರು 40 ಕೆಜಿ ಚಿನ್ನದ ಮತ್ತು ಬೆಳ್ಳಿ ಕಡಿಮೆಯಾಗಿರುವುದು ಪತ್ತೆಯಾಗಿತ್ತು. ಕೇರಳ ಹೈಕೋರ್ಟ್‌ನಿಂದ ನೇಮಿಸಿದ ಲೆಕ್ಕ ಪರಿಶೋಧನಾ(ಆಡಿಟಿಂಗ್‌) ವಿಭಾಗ ಪರಿಶೀಲಿಸಿದಾಗ ವ್ಯತ್ಯಾಸ ಕಂಡು ಬಂದಿತ್ತು.

ಶಬರಿಮಲೆಯಲ್ಲಿ ಹರಕೆಯಾಗಿ ಲಭಿಸಿದ ಸಂಗ್ರಹದಲ್ಲಿರುವ ಚಿನ್ನ ಯಾವುದೂ ನಾಪತ್ತೆಯಾಗಿಲ್ಲ ಎಂದು ದೇವಸ್ವಂ ಮಂಡಳಿ ಸ್ಪಷ್ಟಪಡಿಸಿದೆ. ಸ್ಟ್ರಾಂಗ್‌ ರೂಂ ತೆರೆದು ಪರಿಶೋಧಿಸಬೇಕಾದ ಅಗತ್ಯವಿಲ್ಲ, 40 ಕೆಜಿ ಚಿನ್ನ ಇಲ್ಲಿರುವುದಾಗಿ ಆಡಿಟ್‌ ವಿಭಾಗ ಪತ್ತೆ ಹಚ್ಚಿದೆ. ಮಹಾಸರ್‌ ದಾಖಲೆಗಳನ್ನು ಪರಿಶೀಲಿಸಿ ಆಡಿಟಿಂಗ್‌ ವಿಭಾಗ ಸ್ಪಷ್ಟಪಡಿಸಿದೆ.

10413 ಚಿನ್ನ-ಬೆಳ್ಳಿ ಆಭರಣಗಳು ಆರನ್ಮುಳ ಕ್ಷೇತ್ರಕ್ಕೆ ಹೊಂದಿಕೊಂಡಿರುವ ನಾಲ್ಕು ಸ್ಟ್ರಾಂಗ್‌ ರೂಮ್‌ನಲ್ಲಿದೆ. ಚಿನ್ನ ನಾಪತ್ತೆಯಾದ ತರಹದಲ್ಲಿ ತಪ್ಪಾಗಿ ಸುದ್ದಿ ಹರಡುತ್ತಿರುವುದಾಗಿ ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವಾ. ಎ.ಪದ್ಮಕುಮಾರ್‌ ತಿಳಿಸಿದ್ದಾರೆ.

ಶಬರಿಮಲೆಗೆ ಲಭಿಸುವ ಚಿನ್ನಾಭರಣಗಳು ಹಾಗೂ ಬೆಳ್ಳಿ ಆಭರಣಗಳು ಪರಂಪರಾಗತವಾಗಿ ಆರನ್ಮುಳದ ಸ್ಟ್ರಾಂಗ್‌ ರೂಂನಲ್ಲಿ ಸಂರಕ್ಷಿಸಿಡಲಾಗುವುದು. ಸ್ಟ್ರಾಂಗ್‌ ರೂಂ ಜವಾಬ್ದಾರಿಯಲ್ಲಿದ್ದ ಸೇವೆಯಿಂದ ನಿವೃತ್ತಿಯಾದ ಸಿಬ್ಬಂದಿಯೊಬ್ಬರು ಪಿಂಚಣಿ ತಡೆ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಶಬರಿಮಲೆಯ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳ ಸಹಿತ ಇತರ ಬೆಲೆಬಾಳುವ ವಸ್ತುಗಳನ್ನು ಅಳತೆ ಮಾಡಿ ಇಡಲು ದೇವಸ್ವಂ ಮಂಡಳಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಇದೀಗ ಮಹಾಸರ್‌ ದಾಖಲೆ ಪ್ರಕಾರ ಲಭಿಸಿದ ವಿಷಯಗಳು ಆಡಿಟ್‌ ವಿಭಾಗ ಹೈಕೋರ್ಟ್‌ನಲ್ಲಿ ಸಲ್ಲಿಸಿದೆ.

ದಾಖಲೆ ಪತ್ರಗಳಲ್ಲಿ ನಮೂದಿಸಲಾಗಿರುವ ಸಂಖ್ಯೆಗಿಂತ ಭದ್ರತಾ ಕೊಠಡಿಯ ದಾಖಲು ಪತ್ರಗಳಲ್ಲಿ 40 ಕೆಜಿ ಚಿನ್ನ ಮತ್ತು ಬೆಳ್ಳಿಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಭದ್ರತಾ ಕೊಠಡಿಯಲ್ಲಿರುವ ಅಮೂಲ್ಯ ವಸ್ತುಗಳನ್ನು ಪರಿಶೀಲಿಸಿ ಲೆಕ್ಕ ಹಾಕಲು ತೀರ್ಮಾನಿಸಿತ್ತು. ಅದರಂತೆ ದೇವಸ್ವಂ ಮಂಡಳಿಯ ಕಚೇರಿಯಲ್ಲಿ ದಾಖಲುಪತ್ರಗಳನ್ನು ಸೂಕ್ಷ ್ಮ ರೀತಿಯಲ್ಲಿ ಪರಿಶೀಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ