ಆ್ಯಪ್ನಗರ

ಗುಂಪೆ ಪರಿಸರದಲ್ಲಿ ಶಿಲಾಯುಗದ ವಸ್ತು ಪತ್ತೆ

ನವಶಿಲಾಯುಗದ ಕತ್ತರಿಸುವ ಚೂಪಾದ ಆಯುಧಗಳಂತೆ ಬಳಸುವ ವಸ್ತುವೊಂದು ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮ ಪಂ. ವ್ಯಾಪ್ತಿಯ ಕನಿಯಾಲದ ಕೆದುಕೋಡಿ ಎಂಬಲ್ಲಿ ಪತ್ತೆಯಾಗಿದೆ.

Vijaya Karnataka 18 Dec 2018, 5:00 am
ಉಪ್ಪಳ : ನವಶಿಲಾಯುಗದ ಕತ್ತರಿಸುವ ಚೂಪಾದ ಆಯುಧಗಳಂತೆ ಬಳಸುವ ವಸ್ತುವೊಂದು ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮ ಪಂ. ವ್ಯಾಪ್ತಿಯ ಕನಿಯಾಲದ ಕೆದುಕೋಡಿ ಎಂಬಲ್ಲಿ ಪತ್ತೆಯಾಗಿದೆ.
Vijaya Karnataka Web shilayugada stone found at gumpe
ಗುಂಪೆ ಪರಿಸರದಲ್ಲಿ ಶಿಲಾಯುಗದ ವಸ್ತು ಪತ್ತೆ


ಇತಿಹಾಸ ಪ್ರಸಿದ್ಧ ಪೊಸಡಿ ಗುಂಪೆ ತಪ್ಪಲಿನ ತಳಭಾಗದಲ್ಲಿರುವ ಬಾಲಕೃಷ್ಣ ಭಟ್ಟರ ಅಡಕೆ ತೋಟದಲ್ಲಿ ಶಿಲಾಯುಗದ ನುಣುಪಾದ ಸುಮಾರು 15 ಸೆ.ಮೀ. ಉದ್ದದ ಕಲ್ಲೊಂದು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದೆ.

ಆಯುಧಗಳನ್ನು ನಿರ್ಮಿಸುವ ಮೊದಲು ಮನುಷ್ಯ ದೀರ್ಘಕಾಲದವರೆಗೆ ನಾನಾ ಹಣ್ಣು, ಗೆಡ್ಡೆಗೆಣಸುಗಳನ್ನು, ಬೇರು ಮತ್ತು ಎಲೆಗಳನ್ನು ಹಾಗೂ ಬೇಟೆಯಾಡಿದ ಪ್ರಾಣಿಗಳನ್ನು ಕೊಲ್ಲಲು, ಅವುಗಳ ಮಾಂಸವನ್ನು ಬೇರ್ಪಡಿಸಲು ಈ ಕಲ್ಲುಗಳನ್ನು ಬಳಸಲಾಗಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ಸುಮಾರು 40 ಸಾವಿರ ವರ್ಷಕ್ಕಿಂತಲೂ ಹಳೆಯದಾಗಿರುವ ಇದೇ ರೀತಿಯ ಕಲ್ಲು ವರ್ಷಗಳ ಹಿಂದೆ ಕೇರಳದ ಎರ್ನಾಕುಳಂ ಜಿಲ್ಲೆಯ ಕೊಡನಾಡ್‌ ಎಂಬಲ್ಲಿ ಪತ್ತೆಯಾಗಿದ್ದು, ಬಳಿಕ ಇದೇ ಮೊದಲ ಬಾರಿಗೆ ಮಲಬಾರ್‌ ಪ್ರದೇಶವಾದ ಕನಿಯಾಲದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಪೊಸಡಿಗುಂಪೆ ಪ್ರದೇಶದಲ್ಲಿ ಈಗಾಗಲೇ ಅನೇಕ ಬಾಂಜಾರು ಗುಹೆಗಳು, ಪುರಾತನ ಸುರಂಗಗಳು ಪತ್ತೆಯಾಗಿದ್ದು, ಇದೀಗ ಶಿಲಾಯುಗದ ಕಲ್ಲೊಂದು ಕಂಡು ಬಂದಿರುವುದು ಸ್ಥಳೀಯರಲ್ಲಿ ಕೌತುಕ ಮೂಡಿಸಿದೆ. ಈ ಪ್ರದೇಶಕ್ಕೆ ಮಂಗಳವಾರ ಕಾಂಞಂಗಾಡ್‌ ನೆಹರೂ ಕಾಲೇಜಿನ ಇತಿಹಾಸ ಸಂಶೋಧಕ ಪ್ರೊ. ನಂದ ಕುಮಾರ್‌ ಕೋರೋತ್‌ ಭೇಟಿ ನೀಡಿ ಹೆಚ್ಚಿನ ಮಾಹಿತಿ ನೀಡುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ