ಆ್ಯಪ್ನಗರ

ಮಹಿಳಾ ನೌಕರರಿಗೆ ಇನ್ನು ಕುಳಿತುಕೊಳ್ಳುವ ಹಕ್ಕು

ಮಹಿಳಾ ನೌಕರಿಗೆ ಕುಳಿತುಕೊಳ್ಳುವ ಹಕ್ಕು ಖಾತರಿಪಡಿಸುವ ಮಸೂದೆ ಕಾನೂನಾಗಿದೆ. ಕೇರಳ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು(ತಿದ್ದುಪಡಿ) ಬಿಲ್‌ ವಿಧಾನಸಭೆ ಹೊರಬಂದಿದೆ.

Vijaya Karnataka Web 10 Dec 2018, 5:00 am
ಕಾಸರಗೋಡು: ಮಹಿಳಾ ನೌಕರಿಗೆ ಕುಳಿತುಕೊಳ್ಳುವ ಹಕ್ಕು ಖಾತರಿಪಡಿಸುವ ಮಸೂದೆ ಕಾನೂನಾಗಿದೆ. ಕೇರಳ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು(ತಿದ್ದುಪಡಿ) ಬಿಲ್‌ ವಿಧಾನಸಭೆ ಹೊರಬಂದಿದೆ. ವ್ಯಾಪಾರ ಸಂಸ್ಥೆಗಳ ಮಹಿಳೆಯರ ಸಹಿತ ನೌಕರರ ದೀರ್ಘಕಾಲದ ಬೇಡಿಕೆಯನ್ನು ಸಚಿವ ಟಿ.ಪಿ. ರಾಮಕೃಷ್ಣನ್‌ ಪ್ರಾಸ್ತಾಪಿಸಿದ ಬಿಲ್‌ ಮೂಲಕ ಕಾನೂನಾಗಿ ಮಾರ್ಪಾಡುಗೊಂಡಿದೆ. ಬಟ್ಟೆಯ ಅಂಗಡಿಗಳ ಸಹಿತ ವ್ಯಾಪಾರ ಸಂಸ್ಥೆಗಳ ಮಹಿಳೆಯರು ಮೊದಲಾದ ನೌಕರರಿಗೆ ಇದು ಹಕ್ಕಾಗಿ ಮಾರ್ಪಾಡುಗೊಂಡಿದೆ.
Vijaya Karnataka Web sitting right for working women
ಮಹಿಳಾ ನೌಕರರಿಗೆ ಇನ್ನು ಕುಳಿತುಕೊಳ್ಳುವ ಹಕ್ಕು


ರಾತ್ರಿ ಒಂಬತ್ತರವರೆಗೆ ಮಹಿಳಾ ನೌಕರರನ್ನು ನೌಕರಿಗೆ ನಿಯೋಜಿಸಬಹುದಾಗಿದೆ. ಅಗತ್ಯ ಸುರಕ್ಷೆ, ವಾಸ ಸ್ಥಳಕ್ಕೆ ಪ್ರಯಾಣ ಸೌಕರ್ಯಗಳನ್ನು ಖಾತರಿಪಡಿಸಿ ರಾತ್ರಿ 9ರಿಂದ ಮುಂಜಾನೆ 6 ಗಂಟೆವರೆಗೆ ಮಹಿಳೆಯರನ್ನು ಅವರ ಅನುಮತಿಯೊಂದಿಗೆ ನೌಕರಿಗೆ ನೇಮಿಸಬಹುದಾಗಿದೆ.

ರಾತ್ರಿ ಒಂಬತ್ತರ ಬಳಿಕ ಇಬ್ಬರು ಮಹಿಳೆಯರನ್ನೊಳಗೊಂಡ ಐದು ಗುಂಪುಗಳಾಗಿ ಮಾತ್ರವೇ ನೌಕರಿಗೆ ನೇಮಿಸಬಹುದು ಎಂದು ನಿಯಮದಲ್ಲಿ ಹೇಳಲಾಗಿದೆ.

ವಾರದಲ್ಲಿ ಒಂದು ದಿನ ಅಂಗಡಿಗಳನ್ನು ಮುಚ್ಚಬೇಕು ಎಂಬ ವ್ಯವಸ್ಥೆ ಬದಲಾಯಿಸಿ ವಾರದಲ್ಲಿ ಒಂದು ದಿನ ನೌಕರರಿಗೆ ರಜೆ ನೀಡಬೇಕು ಎಂದು ತಿದ್ದುಪಡಿಯಲ್ಲಿ ಹೇಳಲಾಗಿದೆ. ಕಾನೂನಿನ ವ್ಯವಸ್ಥೆಗಳನ್ನು ಉಲ್ಲಂಘಿಸುವ ನೌಕರಿ ಮಾಲೀಕರಿಗಿರುವ ದಂಡ ಪ್ರತಿಯೊಂದು ಪ್ರಕರಣಕ್ಕೆ 5000 ರೂ.ನಿಂದ ಒಂದು ಲಕ್ಷ ರೂ. ಆಗಿ ಹೆಚ್ಚಿಸಲಾಗಿದೆ. ಕಾನೂನು ಉಲ್ಲಂಘನೆ ಪುನರಾವೃತ್ತಿಗೊಳಿಸುವವರಿಗೆ ವಿಧಿಸುವ ದಂಡ 10000 ರೂ.ನಿಂದ ಎರಡು ಲಕ್ಷ ರೂ.ಗೇರಿಸಲಾಗಿದೆ.

ಕೇರಳ ನಗರಸಭೆ(ಮೂರನೇ ತಿದ್ದುಪಡಿ) ಬಿಲ್ಲು, ಕೇರಳ ಪಂಚಾಯಿತಿ ರಾಜ್‌ (ಮೂರನೇ ತಿದ್ದುಪಡಿ) ಬಿಲ್ಲನ್ನು ಸ್ಥಳೀಯಾಡಳಿತ ಸಚಿವ ಎ. ಸಿ. ಮೊಯ್ದೀನ್‌ ಸಭೆಯಲ್ಲಿ ಮಂಡಿಸಿದ್ದಾರೆ.

ಎರಡು ಅದಕ್ಕಿಂತ ಹೆಚ್ಚು ಸ್ಥಳೀಯಾಡಳಿತ ಸಂಸ್ಥೆಗಳಿಂದಿರುವ ಘನ ತ್ಯಾಜ್ಯಗಳು ಮೊದಲಾದವುಗಳನ್ನು ನೇರವಾಗಿ ಅಥವಾ ಏಜೆನ್ಸಿಗಳ ಮೂಲಕ ಸಂಗ್ರಹಿಸಿ ಸಂಸ್ಕರಿಸಲು ಸರಕಾರಕ್ಕೆ ಅಧಿಕಾರ ನೀಡುವುದಾಗಿದೆ ಕೇರಳ ಮುನ್ಸಿಪಾಲಿಟಿ ತಿದ್ದುಪಡಿ ಮಸೂದೆ ಹಾಗೂ ಕೇರಳ ಪಂಚಾಯಿತಿರಾಜ್‌ ತಿದ್ದುಪಡಿ ಮಸೂದೆ ಇದುವರೆಗೆ ಘನ ತ್ಯಾಜ್ಯ ಸಂಸ್ಕರಿಸಲಿರುವ ಅಧಿಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗಾಗಿತ್ತು. ಬಿಲ್ಲುಗಳನ್ನು ಈಗಾಗಲೇ ಆರ್ಡಿನೆನ್ಸ್‌ ಮೂಲಕ ಜಾರಿಗೊಳಿಸಲಾಗಿತ್ತು. ಅದನ್ನು ಈಗ ಕಾನೂನಾಗಿ ಮಾರ್ಪಾಡುಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ