ಆ್ಯಪ್ನಗರ

ಕಾಸರಗೋಡಲ್ಲಿ ಮಲಗಿದ್ದ ಮಗುವಿಗೆ ನಾಗರ ಕಡಿದು ಸಾವು

ಮಂಜಾನೆ ಸಮಯ ಗಾಢ ನಿದ್ರೆಯಲ್ಲಿ ಕನಸು ಕಾಣುತ್ತ ಮಲಗಿದ್ದ ಎಳೆಯ ಕಂದನಿಗೆ ನಾಗರ ಹಾವು ಕಡಿದು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ವಾಸಿಸಲು ಮನೆಯೂ ಇಲ್ಲದೆ ಗುಡಿಸಲಿನಲ್ಲಿದ್ದ ದಂಪತಿಯ ಏಕೈಕ ಪುತ್ರ ಆ ಮಗು.

Vijaya Karnataka Web 14 Sep 2019, 2:33 pm
ಕಾಸರಗೋಡು : ಪೆರ್ಲ ಸಮೀಪದ ಕಜಂಪಾಡಿಯಲ್ಲಿ ತಂದೆ ತಾಯಂದಿರ ನಡುವೆ ಮಲಗಿ ನಿದ್ರಿಸುತ್ತಿದ್ದ ಮಗು ನಾಗರಹಾವು ಕಡಿದು ಮೃತಪಟ್ಟಿರು ದಾರುಣ ಘಟನೆ ನಡೆದಿದೆ. ಕಜಂಪಾಡಿ ಶಾಲೆ ಬಳಿ ವಾಸವಿರುವ, ಕಾಂತಪ್ಪ, ಕುಸುಮ ದಂಪತಿ ಪುತ್ರ ದೀಪಕ್ (3) ಮೃತ. ಶನಿವಾರ ಮುಂಜಾನೆ ಮಲಗಿದ್ದಾಗ ಸುಮಾರು 2 ಗಂಟೆ ಸಮಯದಲ್ಲಿ ಹಾವು ಕಡಿದಿದೆ.
Vijaya Karnataka Web snake bite


ಮಗು ಅಳುತ್ತಿರುವುದು ಕೇಳಿ ಎಚ್ಚರಗೊಂಡ ದಂಪತಿ ಪರಿಶೀಲಿಸಿದಾಗ ಕಪಾಟಿನಡಿ ಹಾವು ಕಂಡುಬಂದಿದೆ. ಆರಂಭದಲ್ಲಿ ದಂಪತಿ ಕೇರೆ ಹಾವು ಎಂದು ಭಾವಿಸಿದ್ದಾರೆ. ಮಗು ವಾಂತಿ ಮಾಡತೊಡಗಿದಾಗ ಗಾಬರಿಗೊಂಡ ಆಸ್ಪತ್ರೆಗೆ ಸಾಗಿಸಿದ್ದರೂ ಮಾರ್ಗಮಧ್ಯೆ ಮೃತ ಪಟ್ಟಿದೆ.

ಪರಿಶಿಷ್ಟ ಜಾತಿಗೊಳಪಟ್ಟ ಬಡ ಕುಟುಂಬ ಟಾರ್ಪಲ್ ಹಾಸಿದ ಮನೆಯಲ್ಲಿ ವಾಸಿಸುತ್ತಿದ್ದು ಸ್ಥಳಕ್ಕೆ ಸಂಬಂಧಿಸಿದ ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ಪಂಚಾಯಿತಿ, ಸರಕಾರದಿಂದ ಮನೆ ಅಥವಾ ಇತರ ಯಾವುದೇ ಸೌಲಭ್ಯಗಳು ದೊರೆತಿಲ್ಲ ಎಂದು ಸಮೀಪ ವಾಸಿಗಳು ತಿಳಿಸಿದ್ದಾರೆ‌.

ಕಾತಂಪ್ಪ ಕೂಲಿ ಕಾರ್ಮಿಕರಾಗಿದ್ದರೂ, ಸರಿಯಾಗಿ ಕೆಲಸ ಸಿಗುವುದಿಲ್ಲ. ಪತ್ನಿ ಕುಸುಮ ಅವರು ಬೀಡಿ ಕಟ್ಟಿ ಸಿಗುವ ಅತಿ ಕಡಿಮೆ ಆದಾಯದಿಂದ ಜೀವನ ನಿರ್ವಹಿಸುತ್ತಿದ್ದಾರೆ‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ