ಆ್ಯಪ್ನಗರ

ರಾಜ್ಯ ಸರಕಾರದಿಂದ 200 ನೂತನ ಸೇತುವೆ ನಿರ್ಮಾಣ ಪೂರ್ಣ

ರಾಜ್ಯ ಸರಕಾರದ ಈ ಬಾರಿಯ ಕಾಲಾವಧಿಗೆ ಮುನ್ನ 200 ನೂತನ ಸೇತುವೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಲೊಕೋಪಯೋಗಿ ಸಚಿವ ಜಿ.ಸುಧಾಕರನ್‌ ಹೇಳಿದರು.

Vijaya Karnataka 10 Feb 2019, 9:34 pm
ಕಾಸರಗೋಡು: ರಾಜ್ಯ ಸರಕಾರದ ಈ ಬಾರಿಯ ಕಾಲಾವಧಿಗೆ ಮುನ್ನ 200 ನೂತನ ಸೇತುವೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಲೊಕೋಪಯೋಗಿ ಸಚಿವ ಜಿ.ಸುಧಾಕರನ್‌ ಹೇಳಿದರು.
Vijaya Karnataka Web state govt completes 200 bridges
ರಾಜ್ಯ ಸರಕಾರದಿಂದ 200 ನೂತನ ಸೇತುವೆ ನಿರ್ಮಾಣ ಪೂರ್ಣ


ಪರಪ್ಪ ಕಿಳಿಯಂನಲ್ಲಿ ಶನಿವಾರ ಕಿಳಿಯಂ-ವರಂಞೂರ್‌ ರಸ್ತೆಯ ಪುನರ್ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಕಾಮಗಾರಿಗಳೆಲ್ಲವೂ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಬಹುತೇಕ ಸೇತುವೆಗಳ ನಿರ್ಮಾಣ ಅಂತಿಮ ಹಂತದಲ್ಲಿವೆ. 23.18 ಕೋಟಿ ರು. ಕಿಳಿಯಂ ನಿಂದ ಕಮ್ಮಾಡಂ ವರೆಗಿನ ರಸ್ತೆಗಾಗಿ ಮೀಸಲಿರಿಸಲಾಗಿದೆ. 18 ತಿಂಗಳ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ ಎಂದರು.

ಈ ಹಿಂದೆ ಯಾವ ಸರಕಾರವೂ ನಡೆಸದಷ್ಟು ಅಭಿವೃದ್ಧಿ ಚಟುವಟಿಕೆಗಳು ಈ ಸರಕಾರದ ಅವಧಿಯಲ್ಲಿನಡೆಯುತ್ತಿವೆ. ಕಾಞಂಗಾಡು ವಿಧಾನಸಭೆ ಕ್ಷೇತ್ರದಲ್ಲಿ ನಡೆದಿರುವ ಪ್ರಗತಿಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗೆ ನಿದರ್ಶನಗಳಾಗಿವೆ.

ರಾಜ್ಯದಲ್ಲಿಮಲೆನಾಡ ಹೆದ್ದಾರಿನಿರ್ಮಾಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಕರಾವಳಿ ಹೆದ್ದಾರಿ ನಿರ್ಮಾಣ ಮೂಲಕ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚುವರಿ ಪ್ರಯೋಜನವಾಗಲಿದೆ. 60 ಸಾವಿರ ಕೋಟಿ ರೂ. ಕಿಫ್ಬಿ ಯಲ್ಲಿ ಅಳವಡಿಸಿ ವಿವಿಧ ಯೋಜನೆಗಳಿಗೆ ವಿಭಜಿಸಿ ನೀಡಲಾಗಿದೆ. ನೀಲೇಶ್ವರ,ಪಳ್ಳಿಕ್ಕರೆ ಮೇಲ್ಸೇತುವೆ, ಕಾಞಂಗಾಡ್‌ ರೈಲ್ವೇ ಮೇಲ್ಸೇತುವೆ ನಿರ್ಮಾಣ ಚಟುವಟಿಕೆಗಳು ಆರಂಭಗೊಂಡಿವೆ ಎಂದರು.

ಕಂದಾಯ ಸಚಿವ ಇ.ಚಂದ್ರಶೇಖರನ್‌ ಅಧ್ಯಕ್ಷ ತೆ ವಹಿಸಿದ್ದರು. ಸಂಸದ ಪಿ.ಕರುಣಾಕರನ್‌ ಮುಖ್ಯ ಅತಿಥಿಯಾಗಿದ್ದರು. ಪರಪ್ಪ ಬ್ಲಾಕ್‌ ಪಂ. ಅಧ್ಯಕ್ಷ ಪಿ.ರಾಜನ್‌,ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷ ರಾದ ಎ.ವಿಧುಬಾಲ, ಸಿ.ಕುಂಞಿಕಣ್ಣನ್‌, ವಿವಿಧ ಕ್ಷೇತ್ರಗಳ ಗಣ್ಯರಾದ ವಿ.ಬಾಲಕೃಷ್ಣನ್‌, ವಿ.ಸುಧಾಕರನ್‌, ಷೈಮಾ ಬೆನ್ನಿ, ಪಿ.ಚಂದ್ರನ್‌, ಕೆ.ಭೂಪೇಶ್‌, ಪಿ.ಪ್ರಕಾಶ್‌, ಪಿ.ವಿ.ರವಿ, ಕಾತ್ರ್ಯಾಯಿನಿ ಕಣ್ಣನ್‌, ನ್ಯಾಯವಾದಿ ಕೆ.ಕೆ.ನಾರಾಯಣನ್‌, ಎನ್‌.ಪುಷ್ಪರಾಜನ್‌,ಕೆ.ಲಕ್ಷ ್ಮಣನ್‌, ಎಸ್‌.ಕೆ.ಚಂದ್ರನ್‌,ಯು.ವಿ.ಮಹಮ್ಮದ್‌ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ರಸ್ತೆ ನಿಧಿ ಮಂಡಳಿ ಪ್ರಧಾನಿಂಜಿನಿಯರ್‌ ವಿ.ಇವ.ಬಿನು ವರದಿ ವಾಚಿಸಿದರು. ಟಿ.ಕೆ.ರವಿ ಸ್ವಾಗತಿಸಿದರು. ಪಿಡಬ್ಲ್ಯೂಡಿ ಕಾರ್ಯಕಾರಿ ಎಂಜಿನಿಯರ್‌ ಕೆ.ಪಿ.ವಿನೋದ್‌ ಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ