ಆ್ಯಪ್ನಗರ

ಕ್ಷ ಯ ರೋಗ ದಿನಾಚರಣೆ ಉದ್ಘಾಟನೆ

ವಿಶ್ವ ಕ್ಷ ಯ ರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಬೇಕಲ್‌ ಪ್ಯಾಲೆಸ್‌ ಸಭಾಂಗಣದಲ್ಲಿ ಶನಿವಾರ ಶಾಸಕ ಕೆ. ಕುಂಞಿರಾಮನ್‌ ನಿರ್ವಹಿಸಿದರು.

Vijaya Karnataka Web 25 Mar 2018, 5:00 am
ಕಾಸರಗೋಡು: ವಿಶ್ವ ಕ್ಷ ಯ ರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಬೇಕಲ್‌ ಪ್ಯಾಲೆಸ್‌ ಸಭಾಂಗಣದಲ್ಲಿ ಶನಿವಾರ ಶಾಸಕ ಕೆ. ಕುಂಞಿರಾಮನ್‌ ನಿರ್ವಹಿಸಿದರು.
Vijaya Karnataka Web tb day
ಕ್ಷ ಯ ರೋಗ ದಿನಾಚರಣೆ ಉದ್ಘಾಟನೆ


ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಮುಹಮ್ಮದಾಲಿ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ಪಿ. ದಿನೇಶ್‌ ಕುಮಾರ್‌ ಕ್ಷ ಯ ರೋಗ ದಿನಾಚರಣೆ ಸಂದೇಶ ನೀಡಿದರು. ಜಿಲ್ಲಾ ಟಿ.ಬಿ. ಅಧಿಕಾರಿ ಡಾ. ಟಿ.ಪಿ. ಆಮೀನಾ ಕ್ಷ ಯರೋಗ ಜಾಗೃತಿ ತರಗತಿ ನಡೆಸಿಕೊಟ್ಟರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾನವಾಸ್‌ ಪಾದೂರು, ಬ್ಲಾಕ್‌ ಪಂಚಾಯಿತಿ ಸದಸ್ಯ ಇಂದಿರಾ ಬಾಲನ್‌, ಉದುಮ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮೀ ಬಾಲನ್‌, ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಕೆ. ಸಂತೋಷ್‌ ಕುಮಾರ್‌, ಕೆ. ಪ್ರಭಾಕರನ್‌, ಯು.ಜೆ. ಸೈನಬಾ ನಸೀಂ, ಪಂಚಾಯಿತಿ ಸದಸ್ಯ ಚಂದ್ರನ್‌, ಉಪ ವೈದ್ಯಾಧಿಕಾರಿ ಡಾ. ರಾಂದಾಸ್‌, ನೀಲೇಶ್ವರ ತಾಲೂಕು ಆಸ್ಪತ್ರೆ ಸೂಪರಿಂಟೆಂಡೆಂಟ್‌ ಡಾ. ಜಮಾಲ್‌ ಅಹಮ್ಮದ್‌, ಎನ್‌ಎಚ್‌ಎಂ ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್‌ ಡಾ. ರಾಮನ್‌ ಸ್ವಾತಿ ವಾಮನ್‌, ಐಎಸ್‌ಎಂ ವೈದ್ಯಾಧಿಕಾರಿ ಡಾ. ವಿಶ್ವನಾಥನ್‌, ಜಿಲ್ಲಾ ಮಾಸ್‌ ಮೀಡಿಯಾ ಅಧಿಕಾರಿ ಸುಜಾ, ಅಬ್ದುಲ್‌ ಖಾದರ್‌ ಮತ್ತಿತರರು ಮಾತನಾಡಿದರು.

ಉದುಮ ಎಂಒವಿಎಚ್‌ಸಿ ಡಾ. ಮುಹಮ್ಮದ್‌ ಸ್ವಾಗತಿಸಿ, ಗೋವಿಂದನ್‌ ವಂದಿಸಿದರು.

ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ಕ್ಷ ಯರೋಗ ಜಾಗೃತಿ ರಾರ‍ಯಲಿ ಉದುಮ ಗ್ರಾ.ಪಂ. ಪರಿಸರದಿಂದ ಬೇಕಲ ಪ್ಯಾಲೇಸ್‌ ತನಕ ನಡೆಯಿತು. ರಾರ‍ಯಲಿಯನ್ನು ಸರ್ಕಲ್‌ ಇನ್ಸ್‌ಪೆಕ್ಟರ್‌ ಪಿ.ಕೆ. ವಿಶ್ವಂಭರನ್‌ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ