ಆ್ಯಪ್ನಗರ

ಶಿಕ್ಷಕನ ಪೆನ್‌ ಸಂಗ್ರಹ, ಪರಿಸರ ಪ್ರೇಮ

ಈ ಶಿಕ್ಷಕ ತನ್ನ ಜೀವನದಲ್ಲಿ ಬಳಸಿದ ಬಾಲ್‌ಪೆನ್‌ಗಳನ್ನು ಜೋಪಾನವಾಗಿ ಸಂಗ್ರಹಿಸಿಕೊಂಡಿದ್ದಾರೆ.

Vijaya Karnataka 4 Aug 2018, 5:00 am
ಕಾಸರಗೋಡು: ಈ ಶಿಕ್ಷಕ ತನ್ನ ಜೀವನದಲ್ಲಿ ಬಳಸಿದ ಬಾಲ್‌ಪೆನ್‌ಗಳನ್ನು ಜೋಪಾನವಾಗಿ ಸಂಗ್ರಹಿಸಿಕೊಂಡಿದ್ದಾರೆ. ಉದಯಗಿರಿ ಶ್ರೀ ಶಂಕರನಾರಾಯಣ ಪಂಚಾಯಿತಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ್‌ ಎಸ್‌. ತಾನು ಬಳಸಿದ ಬಾಲ್‌ಪೆನ್‌ಗಳನ್ನು ಎಸೆಯದೆ ಹಾಗೇ ಇರಿಸಿಕೊಂಡು ಸದುಪಯೋಗಪಡಿಸಿಕೊಳ್ಳುದ್ದಾರೆ.
Vijaya Karnataka Web teachers pen collection
ಶಿಕ್ಷಕನ ಪೆನ್‌ ಸಂಗ್ರಹ, ಪರಿಸರ ಪ್ರೇಮ


ಇವನ್ನು ಕೇವಲ ಸಂಗ್ರಹಕ್ಕಾಗಿ ಮಾತ್ರ ತನ್ನ ಬಳಿ ಇಟ್ಟುಕೊಂಡಿಲ್ಲ. ಬಾಲ್‌ಪೆನ್‌ಗಳನ್ನು ಉಪಯೋಗಿಸಿದ ಬಳಿಕ ಅದನ್ನು ಎಸೆದರೆ ಪರಿಸರಕ್ಕೆ ಹಾನಿಯಾಗುವ ಬಗ್ಗೆ ತನ್ನ ವಿದ್ಯಾ ರ್ಥಿಗಳಿಗೆ ಅರಿವು ಮೂಡಿಸಲೂ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅದಲ್ಲದೆ ಪರಿಸರ ರಕ್ಷ ಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲೇ ತಿಳಿವಳಿಕೆ ನೀಡುವಲ್ಲೂ ಇದು ಪ್ರಯೋಜನವಾಗಿದೆ.

ಅದೇ ರೀತಿಯಲ್ಲಿ ಈ ನಿರುಪಯುಕ್ತ ಪೆನ್‌ಗಳನ್ನು ವಿದ್ಯಾಥಿಗಳಿಗೆ ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದ ಕಲಿಕೋಪಕರಣಗಳನ್ನಾಗಿ ಮಾಡಿಕೊಂಡಿದ್ದಾರೆ. ಶಿಕ್ಷಕ ರಾಜೇಶ್‌ ದೈನಂದಿನ ಡೈರಿ, ನೋಟ್‌ ಪುಸ್ತಕ ತಯಾರಿ, ನಾನಾ ಪ್ರಾಜೆಕ್ಟ್ ವರ್ಕ್‌ಗಳ ಸಹಿತ ನಾನಾ ಉಪಯೋಗಕ್ಕಾಗಿ ಈ ಪೆನ್‌ಗಳನ್ನು ಬಳಸುತ್ತಾರೆ.

ಬಾಲ್‌ ಪೆನ್‌ಗಳನ್ನು ಬಳಸಿದ ಬಳಿಕ ಅದನ್ನು ಮರು ಬಳಕೆ ಮಾಡುವವರು ಬಹಳ ಕಡಿಮೆ. ರಿಫಿಲ್‌ ಖರೀದಿಸುವ ದರದಲ್ಲಿಯೇ ಹೊಸ ಪೆನ್‌ ಖರೀದಿಸಲು ಸಾಧ್ಯವಾಗು ವಾಗ ಯಾರೂ ಮರು ಬಳಕೆಯತ್ತ ಗಮನ ಹರಿಸುವುದಿಲ್ಲ. ಇಂಕ್‌ ಪೆನ್‌ಗಳ ಉಪಯೋಗವೂ ಕಡಿಮೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಯೋಗಿಸಿ ಎಸೆಯುವ ಬಾಲ್‌ಪೆನ್‌ಗಳು ಅಪರಿಮಿತ. ಇವುಗಳು ಪರಿಸರದಲ್ಲಿ ವಿಲೀನವಾಗದೆ ಪ್ಲಾಸ್ಟಿಕ್‌ ತ್ಯಾಜ್ಯವಾಗಿ ಉಳಿದುಕೊಳ್ಳುತ್ತವೆ. ಇದರ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರೊಂದಿಗೆ ಪರಿಸರ ಸಂರಕ್ಷ ಣೆಯಲ್ಲಿ ತಾವೂ ಪಾಲ್ಗೊಳ್ಳುವುದಕ್ಕೆ ಸಹಾಯಕವಾಗುತ್ತದೆ.

*ತಾನು ಕಳೆದ 10 ವರ್ಷಗಳಲ್ಲಿ ಉಪಯೋಗಿಸಿದ ಪೆನ್‌ಗಳನ್ನು ಎಸೆಯುವ ಬದಲು ತೆಗೆದಿಟ್ಟುಕೊಂಡಿದ್ದೇನೆ. ಅದನ್ನು ವಿದ್ಯಾರ್ಥಿಗಳಿಗೆ ಕಲಿಕೋಪಕರಣವನ್ನಾಗಿ ಬಳಸಲಾಗುತ್ತಿದೆ. ನಿರುಪಯುಕ್ತ ಪೆನ್‌ಗಳ ಸಹಾಯದಿಂದ ವಿಜ್ಞಾನ, ಗಣಿತ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗವನ್ನು ಮಾಡಲೂ ಸಹಾಯವಾಗುತ್ತಿದೆ.

-ರಾಜೇಶ್‌ ಎಸ್‌., ಶಿಕ್ಷಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ