ಆ್ಯಪ್ನಗರ

ತೃಕ್ಕರಿಪುರ ಫುಟ್ಬಾಲ್‌ ಅಕಾಡೆಮಿಗೆ ಅಂಗೀಕಾರ

ತೃಕ್ಕರಿಪುರ ಫುಟ್ಬಾಲ್‌ ಅಕಾಡೆಮಿಗೆ ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೇಶನ್‌ನ ಅಂಗೀಕಾರ ಲಭಿಸಿದೆ...

Vijaya Karnataka 4 Jul 2019, 5:00 am
ಕಾಸರಗೋಡು: ತೃಕ್ಕರಿಪುರ ಫುಟ್ಬಾಲ್‌ ಅಕಾಡೆಮಿಗೆ ಆಲ್‌ ಇಂಡಿಯಾ ಫುಟ್ಬಾಲ್‌ ಫೆಡರೇಶನ್‌ನ ಅಂಗೀಕಾರ ಲಭಿಸಿದೆ.
Vijaya Karnataka Web trikaripura footbal acedemy accepted
ತೃಕ್ಕರಿಪುರ ಫುಟ್ಬಾಲ್‌ ಅಕಾಡೆಮಿಗೆ ಅಂಗೀಕಾರ


8 ವರ್ಷದಿಂದ 12 ವರ್ಷದವರೆಗಿನ ಮಕ್ಕಳ ತರಬೇತಿ ಮಿಗತೆ, ಗ್ರಾಸ್‌ರೂಟ್ಸ್‌ ಡೇ ಆಯೋಜಿಸಿದ ಹಿನ್ನಲೆಯಲ್ಲಿ ಅಂಗೀಕಾರ ಲಭಿಸಿದೆ. ಫುಟ್ಬಾಲ್‌ ಫೆಡರೇಶನ್‌ನ ಅಂಗೀಕಾರ ಪತ್ರವನ್ನು ರಾಜ್ಯ ಕ್ರೀಡಾ ಸಮಿತಿ ನಿರ್ವಾಹಕ ಸಮಿತಿ ಸದಸ್ಯ ಟಿ.ವಿ. ಬಾಲನ್‌ ಅವರು ತೃಕ್ಕರಿಪುರ ಫುಟ್ಬಾಲ್‌ ಅಕಾಡೆಮಿ ಮುಖ್ಯ ತರಬೇತಿದಾರ ಅಹಮ್ಮದ್‌ ರಾಶಿದ್‌ ಅವರಿಗೆ ಹಸ್ತಾಂತರಿಸಿದರು.

ಫುಟ್ಬಾಲ್‌ ಅಕಾಡೆಮಿಯ ಮೂರನೇ ಸೀಸನ್‌ ಸಮಾರೋಪ ಹಾಗೂ ಕಳೆದ ವರ್ಷದ ನಾನಾ ಕೆಟಗರಿಗಳಿಂದ ಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ, ರಾಜ್ಯ ತಂಡದಲ್ಲಿ, ಶಾಲಾ ತಂಡದಲ್ಲಿ ಸದಸ್ಯರಾದವರಿಗೆ ಸ್ಮರಣಿಕೆ ನೀಡಲಾಯಿತು. ಅಕಾಡೆಮಿ ಅಧ್ಯಕ್ಷ ಕೆ.ಪಿ.ಸಿ. ಮುಹಮ್ಮದ್‌ ಕುಞಿ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯದರ್ಶಿ ಸಿ. ದಾವೂದ್‌, ಮಾಜಿ ಗೋಲ್‌ ಕೀಪರ್‌ ಟಿ. ಸಿ. ಶಂಸುದ್ದೀನ್‌, ಸಿ. ಅಬ್ದುರಹ್ಮಾನ್‌, ಎನ್‌.ಕೆ.ಪಿ. ಸಿರಾಜ್‌, ವಿ.ಪಿ.ಪಿ. ಶುಹೈಬ್‌, ಕೆ.ಎಂ. ರಾಜು, ತರಬೇತುದಾರರಾದ ಟಿ.ವಿ. ವಿನೀತ್‌, ನವನೀತ್‌, ಕೆ.ಎಂ.ಸಿ. ಶಾಹೀದ್‌, ಶರತ್‌, ಟಿ.ವಿ. ರಾಜೇಶ್‌, ಎಂ. ಮಹ್ರೂಫ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ