ಆ್ಯಪ್ನಗರ

ಕೇರಳದಲ್ಲಿ ಯುಡಿಎಫ್‌ ಅಲೆ

ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್‌ ಅಲೆ ಬೀಸಿದೆ. ಇದರಂತೆ 20 ಕ್ಷೇತ್ರಗಳಲ್ಲಿ 19ನ್ನೂ ಯುಡಿಎಫ್‌ ಗಳಿಸಿದ್ದರೆ. ಸಿಪಿಐಎಂ ಒಂದು ಸೀಟಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಎನ್‌ಡಿಎಗೆ ಒಂದೂ ಸ್ಥಾನ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ.

Vijaya Karnataka 24 May 2019, 10:02 pm
ಕಾಸರಗೋಡು: ಈ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್‌ ಅಲೆ ಬೀಸಿದೆ. ಇದರಂತೆ 20 ಕ್ಷೇತ್ರಗಳಲ್ಲಿ 19ನ್ನೂ ಯುಡಿಎಫ್‌ ಗಳಿಸಿದ್ದರೆ. ಸಿಪಿಐಎಂ ಒಂದು ಸೀಟಿಗೆ ತೃಪ್ತಿಪಟ್ಟುಕೊಂಡಿದೆ. ಆದರೆ ಎನ್‌ಡಿಎಗೆ ಒಂದೂ ಸ್ಥಾನ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ.
Vijaya Karnataka Web udf wave at kerala
ಕೇರಳದಲ್ಲಿ ಯುಡಿಎಫ್‌ ಅಲೆ


ಸಿಪಿಎಂ ತನ್ನ ಭದ್ರಕೋಟೆಯಾಗಿದ್ದ ಕಾಸರಗೋಡು, ಕಣ್ಣೂರು, ವಡಗರ, ಆಲತ್ತೂರು, ಪಾಲ್ಘಾಟ್‌, ಚಾಲಕ್ಕುಡಿಗಳಲ್ಲಿ ಸಂಪೂರ್ಣ ಪರಾಭವಗೊಂಡಿದೆ. ಆಲಪ್ಪುಯ ಲೋಕಸಭೆ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿ ಎ.ಎಂ. ಆರಿಫ್‌ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ 15, ಆರ್‌ಎಸ್‌ಪಿ 1, ಕೇರಳ ಕಾಂಗ್ರೆಸ್‌(ಎಂ) 1, ಮುಸ್ಲಿಂ ಲೀಗ್‌ 2 ಸೀಟು ಪಡೆದುಕೊಂಡಿವೆ. ಪೊನ್ನಾನಿ ಹಾಗೂ ಮಲಪ್ಪುರ ಕ್ಷೇತ್ರವನ್ನು ಮುಸ್ಲಿಂ ಲೀಗ್‌ ಪಡೆದುಕೊಂಡಿದೆ.

ಎನ್‌ಡಿಎ ಕೇರಳದಲ್ಲಿ ಒಂದು ಸ್ಥಾನವನ್ನು ಗಳಿಸಬಹುದೆಂಬ ಚುನಾವಣೆ ಸಮೀಕ್ಷೆ ಹುಸಿಯಾಗಿದೆ. ಕೇವಲ ತಿರುವನಂತಪುರ ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಎರಡನೇ ಸ್ಥಾನ ಪಡೆದಿದೆ. ಇಲ್ಲಿ ಮಾಜಿ ರಾಜ್ಯಪಾಲರಾದ ಕುಮ್ಮನಂ ರಾಜಶೇಖರನ್‌ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಶಶಿ ತರೂರು ಅವರು 1 ಲಕ್ಷ ಕ್ಕಿಂತಲೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎನ್‌ಡಿ ಪತ್ತನಂತಿಟ್ಟ ಹಾಗೂ ತ್ರಿಶೂರ್‌ನಲ್ಲಿ ಮತಗಳ ಗಳಿಕೆ ಹೆಚ್ಚಿಸಿಕೊಂಡರೂ ಸೀಟು ಪಡೆಯಲು ಸಾಧ್ಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ